ನವದೆಹಲಿ: ಜರ್ಮನ್ ಮೂಲದ ಕಾರು ಉತ್ಪಾದಕ ಕಂಪನಿ ವೋಕ್ಸ್ ವ್ಯಾಗನ್ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ 100 ಕೋಟಿ ರೂ ದಂಡವನ್ನು ಪಾವತಿಸಲು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶಿಸಿದೆ. ಇಲ್ಲದೆ ಹೋದಲ್ಲಿ ಸೂಕ್ತ ಎಂಡಿ ಬಂಧಿಸಿ ಕಂಪನಿಯ ಆಸ್ತಿಯನ್ನು ವಶಪಡಿಸಿಕೊಳ್ಳುವ ಎಚ್ಚರಿಕೆಯನ್ನು ಟ್ರಿಬ್ಯೂನಲ್ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.


COMMERCIAL BREAK
SCROLL TO CONTINUE READING

ಎನ್.ಜಿ.ಟಿಯು ನಾಲ್ವರ ಪರಿಣಿತರ ಕಮೀಟಿಯೊಂದನ್ನು ಕಳೆದ ನವಂಬರ್ 16ಕ್ಕೆ  2015 ರಲ್ಲಿ ಸಂಭವಿಸಿದ ಜಾಗತೀಕ ಮಾಲಿನ್ಯ ಹೊರಸೂಸುವಿಕೆ ಅಥವಾ ಡಿಸೇಲ್ ಗೇಟ್ ಹಗರಣದಲ್ಲಿ ವೋಕ್ಸ್ ವ್ಯಾಗನ್ ಭಾಗಿಯಾದ ಹಿನ್ನಲೆಯಲ್ಲಿ ಕಂಪನಿ ಮೇಲೆ ಎನ್ಜಿಟಿ ಈ ಕ್ರಮವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.


ವರದಿಯಲ್ಲಿ ಪ್ರಸ್ತಾಪಿಸಿರುವಂತೆ ವೋಕ್ಸ್ ವ್ಯಾಗನ್ ಕಾರುಗಳು 2016 ರಲ್ಲಿ 48,678 ಟನ್ ಗಳಷ್ಟು ನೈಟ್ರೋಸ್ ಆಕ್ಸೈಡ್ ಗಳನ್ನು ಹೊರಸೂಸಿದೆ ಎಂದು ತಿಳಿದುಬಂದಿದೆ. ಇದರಿಂದ ದೆಹಲಿಯಲ್ಲಿ ಇದರ ಆರೋಗ್ಯದ ವೆಚ್ಚವನ್ನು 171.34 ಕೋಟಿ ಎಂದು ಹೇಳಲಾಗಿದೆ.ಈ ಹಿನ್ನಲೆಯಲ್ಲಿ ಈಗ ಎನ್ ಜಿ ಟಿ ಸಮಿತಿಯು ವ್ಯಾಕ್ಸ್ ವೋಗನ್ ಕಂಪನಿಗೆ 100 ಕೋಟಿ ರೂ ದಂಡವನ್ನು ಪಾವತಿಸಬೇಕೆಂದು ಆದೇಶಿಸಿದೆ.


2015ರಲ್ಲಿ ವೋಕ್ಸ್ ವ್ಯಾಗನ್ 3 ಲಕ್ಷಕ್ಕೂ ಅಧಿಕ ಕಾರ್ ಗಳನ್ನು ಎಮಿಷನ್ ಸಾಫ್ಟವೇರ್ ಅಳವಡಿಸುವ ಹಿನ್ನಲೆಯಲ್ಲಿ ವಾಪಸ್ ಕರೆಸಿಕೊಂಡಿತ್ತು.