ಮುಂಬೈ: ಮಹಾರಾಷ್ಟ್ರದ ಪುಣೆಯ ಉಲ್ಲಾಸ್​ ನಗರದಲ್ಲಿರುವ ಜುಲೇಲಾಲ್ ಶಾಲೆಯೊಂದರಲ್ಲಿ ಪಾಠ ನಡೆಯುವಾಗಲೇ ಛಾವಣಿ ಕುಸಿದು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.


COMMERCIAL BREAK
SCROLL TO CONTINUE READING

ತರಗತಿಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮೇಲ್ಛಾವಣಿಯ ಪ್ಲಾಸ್ಟರ್ ವಿದ್ಯಾರ್ಥಿಗಳ ಮೇಲೆ ಬಿದ್ದಿರುವ ವೀಡಿಯೋ ಇದೀಗ ಮಾಧ್ಯಮಗಳಿಗೆ ದೊರೆತಿದ್ದು, ಮೇಲ್ಛಾವಣಿಯ ಭಾಗ ಕೆಳಗೆ ಬೀಳುತ್ತಿದ್ದಂತೆಯೇ ಪಾಠ ಹೇಳಿಕೊಡುತ್ತಿದ್ದ ಶಿಕ್ಷಕಿ ಮಕ್ಕಳನ್ನು ಕೊಠಡಿಯಿಂದ ಕೂಡಲೇ ಹೊರಗೆ ಕಳುಹಿಸಿದ್ದಾರೆ. ಇವರಲ್ಲಿ, ಓರ್ವ ವಿದ್ಯಾರ್ಥಿನಿ ತನ್ನ ಎರಡು ಕೈಗಳಿಂದ ತನ್ನ ತಲೆಯನ್ನು ಹಿಡಿದುಕೊಂಡಿರುವ ದೃಶ್ಯ ವೀಡಿಯೋದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.