close

News WrapGet Handpicked Stories from our editors directly to your mailbox

ನಾನು ನಿಜವಾದ ಕಾಂಗ್ರೆಸಿಗ, ಪಕ್ಷ ತೊರೆಯುವುದಿಲ್ಲ -ಸಲ್ಮಾನ್ ಖುರ್ಷಿದ್

ಪಕ್ಷದಲ್ಲಿ ಕೆಲವರು ನಿಜವಾದ ಕಾಂಗ್ರೆಸಿಗರಾಗಿರುತ್ತಾರೆ ಮತ್ತು ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

Updated: Oct 9, 2019 , 09:15 PM IST
ನಾನು ನಿಜವಾದ ಕಾಂಗ್ರೆಸಿಗ, ಪಕ್ಷ ತೊರೆಯುವುದಿಲ್ಲ -ಸಲ್ಮಾನ್ ಖುರ್ಷಿದ್
Photo courtesy: ANI

ನವದೆಹಲಿ: ಪಕ್ಷದಲ್ಲಿ ಕೆಲವರು ನಿಜವಾದ ಕಾಂಗ್ರೆಸಿಗರಾಗಿರುತ್ತಾರೆ ಮತ್ತು ಅವರು ಪಕ್ಷವನ್ನು ತೊರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ನಂತರ ರಾಹುಲ್ ಗಾಂಧಿ ಹೊರ ನಡೆದರು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಸಲ್ಮಾನ್ ಖುರ್ಷಿದ್ ಈಗ ತಾವು ಪಕ್ಷ ಬಿಡುವುದಿಲ್ಲ ಕಾಂಗ್ರೆಸ್ ಪಕ್ಷ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

"ರಾಷ್ಟ್ರದಲ್ಲಿ ಯಾವ ರೀತಿಯ ಪರಿಸ್ಥಿತಿ ಚಾಲ್ತಿಯಲ್ಲಿದೆ ಮತ್ತು ಲೋಕಸಭಾ ಚುನಾವಣೆಯನ್ನು ಅನುಸರಿಸುವಲ್ಲಿ ನಮ್ಮ ಪಕ್ಷವು ಯಾವ ರೀತಿಯ ಪರಿಸ್ಥಿತಿಯನ್ನು ಹೊಂದಿದೆ...ಇಂತಹ ಸಂದರ್ಭಗಳಲ್ಲಿ, ನಾವು ಕಾಂಗ್ರೆಸ್‌ ಪಕ್ಷವನ್ನು ತೊರೆಯುವುದಿಲ್ಲ, ನಾವು ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾಗಿದ್ದೇವೆ (ಜೀ ಜಾನ್ ಸೆ ಕಾಂಗ್ರೆಸಿ ಹೈನ್), ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

"ಏನಾಗುತ್ತದೆಯೋ ಗೊತ್ತಿಲ್ಲ ನಾವು ಮಾತ್ರ ಪಕ್ಷವನ್ನು ಬಿಡುವುದಿಲ್ಲ. ಪಕ್ಷದ ಹೀನಾಯ ಸ್ಥಿತಿಗೆ ತಲುಪಿದಾಗ ಪಕ್ಷವನ್ನು ತೊರೆದು ಹೊರ ಹೋಗುವಂತವರಲ್ಲ ಎಂದು ಸಲ್ಮಾನ್ ಖುರ್ಷಿದ್ ಹೇಳಿದರು.