ರೈತರ ಹಕ್ಕಾದ ನೀರನ್ನು ಪಾಕಿಸ್ತಾನಕ್ಕೆ ಬಿಡುವುದಿಲ್ಲ: ಪ್ರಧಾನಿ ಮೋದಿ

ಹರಿಯಾಣದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜನರು ನಿರ್ಧರಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Last Updated : Oct 15, 2019, 04:13 PM IST
ರೈತರ ಹಕ್ಕಾದ ನೀರನ್ನು ಪಾಕಿಸ್ತಾನಕ್ಕೆ ಬಿಡುವುದಿಲ್ಲ: ಪ್ರಧಾನಿ ಮೋದಿ title=

ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ರಚಾರ ನಡೆಸಿರುವ ಬಿಜೆಪಿ ಮಂಗಳವಾರ ಚಾರ್ಖಾ ದಾದ್ರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣಾ ರ್ಯಾಲಿಯನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ಮೋದಿ, 70 ವರ್ಷಗಳಿಂದ ಭಾರತದ ಕೆಲವು ಭಾಗದ ನೀರು ಪಾಕಿಸ್ತಾನಕ್ಕೆ ಹೋಗುತ್ತಿದೆ. ಭಾರತದ ರೈತರ ಹಕ್ಕಾದ ನೀರು ಪಾಕಿಸ್ತಾನಕ್ಕೆ ಹೋಗುವುದನ್ನು ತಡೆದು ನಿಮ್ಮ ಮನೆಗೆ ತರಲಿದ್ದೇವೆ. ಈಗಾಗಲೇ ಇದಕ್ಕಾಗಿ ಕೆಲಸ ಆರಂಭವಾಗಿದೆ ಎಂದು ಹೇಳಿದರು.

ಹರಿಯಾಣದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜನರು ನಿರ್ಧರಿಸಿದ್ದಾರೆ. ನಾನು ಹರಿಯಾಣದಲ್ಲಿ ಎರಡು ದಿನಗಳಿಂದ ಇದ್ದೇನೆ. ಇಲ್ಲಿನ ಜನರ ಮನೋಭಿಲಾಷೆ ಅರಿತಿದ್ದೇನೆ. ಮತ್ತೆ ಹರಿಯಾಣದಲ್ಲಿ ಬಿಜೆಪಿ ಕಾರ್ಯನಿರ್ವಹಿಸಬೇಕು ಎಂಬುದು ಜನರ ಆಶಯವಾಗಿದೆ ಎಂದು ಮೋದಿ ಹೇಳಿದರು.

ನಿಮ್ಮೆಲ್ಲರ ಆಶೀರ್ವಾದ ಮತ್ತು ಪ್ರೀತಿಯಿಂದಾಗಿ ರಾಜ್ಯದಲ್ಲಿ ಎರಡು ಅಥವಾ ಮೂರು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ ಸತತ ಎರಡನೇ ಬಾರಿಗೆ ಹರಿಯಾಣದಲ್ಲಿ ಸರ್ಕಾರ ರಚಿಸುವ ಸ್ಥಿತಿಗೆ ತಲುಪಿದೆ. ಇಂದು, ಹರಿಯಾಣದ ಜನರು ಪರಿಶುದ್ಧತೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಮುದ್ರೆ ಹಾಕುತ್ತಿದ್ದಾರೆ ಎಂದು ಮೋದಿ ಹೇಳಿದರು.

'ಹರಿಯಾಣದಲ್ಲಿ ನಾನು ಚುನಾವಣಾ ಸಭೆಗೆ ಬರುವುದಿಲ್ಲ, ನಾನು ಇಲ್ಲಿ ಪ್ರಚಾರ ಮಾಡುವುದಿಲ್ಲ, ಇಲ್ಲಿ ಮತ ಕೇಳುವುದಿಲ್ಲ' ಆದರೆ, ಇಂದು ಹರಿಯಾಣವೇ ನನ್ನನ್ನು ಇಲ್ಲಿಗೆ ಸೆಳೆದು ತಂದಿದೆ. ನೀವು ನನಗೆ ತುಂಬಾ ಪ್ರೀತಿಯನ್ನು ಕೊಟ್ಟಿದ್ದೀರಿ' ಎಂದು ಮೋದಿ ಹೇಳಿದರು.
 

Trending News