ವಾಲೆಂಟೈನ್ಸ್ ಡೇಗೆ ಸಂಗಾತಿ ಜೊತೆ ಭೇಟಿ ನೀಡಬಹುದಾದ ಅತ್ಯುತ್ತಮ ತಾಣಗಳು

Bhavishya Shetty
Feb 04,2024

ಪ್ರೇಮಿಗಳ ದಿನ

ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರಲಿದೆ. ಫೆಬ್ರವರಿ 14ರಂದು ವಾಲೆಂಟೈನ್ಸ್ ಡೇ ಆಚರಿಸಲಾಗುತ್ತಿದ್ದು, ಕೆಲ ಜೋಡಿ ತಮ್ಮ ಸಂಗಾತಿ ಜೊತೆ ಸುಂದರ ಕ್ಷಣಗಳನ್ನು ಕಳೆಯಲೆಂದು ಪ್ರವಾಸ ಹೊರಡುತ್ತಾರೆ. ಅಂತಹವರಿಗಾಗಿ ನಾವಿಂದು ಕೆಲವೊಂದು ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ರೋಮ್ಯಾಂಟಿಕ್ ಸ್ಥಳ

ಕರ್ನಾಟಕದಲ್ಲಿ ಅನೇಕ ರೋಮ್ಯಾಂಟಿಕ್ ಸ್ಥಳಗಳಿವೆ. ಒಂದು ರಾಜ್ಯ, ಹಲವು ಪ್ರಪಂಚಗಳು ಎಂದೂ ಕರೆಯಲ್ಪಡುವ ಕರ್ನಾಟಕವು ಪರಂಪರೆ, ಸೌಂದರ್ಯ, ಅರಮನೆಗಳು, ಆಹಾರ ಮತ್ತು ಹಚ್ಚಹಸಿರಿನ ತಾಣಗಳಿಗೆ ಹೆಸರುವಾಸಿ,

ಮಡಿಕೇರಿ

ಮನಮೋಹಕ ಕಾಫಿ ತೋಟಗಳು, ಅರಣ್ಯ ಪ್ರದೇಶ, ಜಲಪಾತಗಳು ಹೀಗೆ ಪ್ರಕೃತಿ ಸೌಂದರ್ಯವನ್ನೇ ಮಡಿಲಲ್ಲಿ ಹೊತ್ತಿರುವ ಮಡಿಕೇರಿಯನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಕರೆಯಲಾಗುತ್ತದೆ. ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ ಮತ್ತು ರಾಜಾಸೀಟ್ ಕೊಡಗಿನ ಪ್ರೇಕ್ಷಣೀಯ ಸ್ಫಳ.

ಮೈಸೂರು

ಕರ್ನಾಟಕದ ಅತ್ಯಂತ ಹಳೆಯ ಮತ್ತು ದೊಡ್ಡ ನಗರಗಳಲ್ಲಿ ಒಂದಾದ ಮೈಸೂರು, ಅರಮನೆಯಿಂದಲೇ ತನ್ನ ವೈಭವವನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಮೃಗಾಲಯ, ಪುರಾತನ ದೇವಾಲಯ, ಉದ್ಯಾನವನ ಹೀಗೆ ಹಲವಾರು ಜನಪ್ರಿಯ ಪ್ರಣಯ ತಾಣಗಳಿವೆ.

ಚಿಕ್ಕಮಗಳೂರು

ಚಿಕ್ಕಮಗಳೂರು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ, ಪ್ರಕೃತಿಯ ಮಡಿಲಲ್ಲಿರುವ ಈ ಪ್ರಶಾಂತ ಪಟ್ಟಣವು ನೋಡುಗರ ಮನಸೆಳೆಯುವುದು ಖಚಿತ.

ಕಬಿನಿ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲಕ್ರೀಡೆಗಳು ಅಥವಾ ದಡದಲ್ಲಿ ಕ್ಯಾಂಪಿಂಗ್ ಮಾಡುವವರೆಗೆ, ಕಬಿನಿಯು ತನ್ನ ಪ್ರವಾಸಿಗರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತದೆ. ಜಂಗಲ್ ಸಫಾರಿ, ಆನೆ ಸಫಾರಿ, ಬೋಟಿಂಗ್ ಹೀಗೆಲ್ಲಾ ಮನರಂಜನೆ ಪಡೆಯಲು ಈ ತಾಣವು ಯೋಗ್ಯವಾಗಿದೆ.

ಗೋಕರ್ಣ

ಕರ್ನಾಟಕ-ಗೋವಾ ಗಡಿಯಲ್ಲಿರುವ ಗೋಕರ್ಣವು ಬೀಚ್ ಪ್ರಿಯರಿಗೆ ಸ್ವರ್ಗವಿದ್ದಂತೆ. ಸುಂದರವಾದ ಕಡಲತೀರಗಳು ಮತ್ತು ದೇವಾಲಯಗಳನ್ನು ನೋಡುವ ಪ್ಲಾನ್ ಇದ್ದರೆ ಈ ಸ್ಥಳ ಯೋಗ್ಯವಾಗಿದೆ.

ಕೆಮ್ಮಣ್ಣುಗುಂಡಿ

KR ಹಿಲ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೆಮ್ಮಣ್ಣುಗುಂಡಿ ಬೆಟ್ಟಗಳು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಉತ್ಸಾಹಿಗಳಿಗೆ ಪರಿಪೂರ್ಣವಾದ ಸ್ಪಾಟ್. ರಾಜಭವನ, ಹೆಬ್ಬೆ ಜಲಪಾತ, ಬಾಬಾ ಬುಡನ್ ಬೆಟ್ಟ, ಭದ್ರಾ ಟೈಗರ್ ರಿಸರ್ವ್ ರಾಕ್ ಗಾರ್ಡನ್, ಕಲತ್ಗಿರಿ ಜಲಪಾತ ಮತ್ತು Z ಪಾಯಿಂಟ್ ಕೂಡ ನೋಡಬಹುದು.

VIEW ALL

Read Next Story