ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಹೀನಾಯ ಸೋಲು ಕಂಡಿದ್ದು, ಸುದೀರ್ಘ ಕಾಲದ ನಂತರ ಬಿಜೆಪಿ ಭಾರೀ ಅಂತರದ ಗೆಲುವು ಸಾಧಿಸಿದೆ.
ದೆಹಲಿಯ ಒಟ್ಟು 70 ಕ್ಷೇತ್ರಗಳ ಪೈಕಿ ಬಿಜೆಪಿ 48 ಮತ್ತು AAP 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿಯೂ ಖಾತೆ ತೆರೆದಿಲ್ಲ.
ಬಿಜೆಪಿಯ ಈ ಗೆಲುವಿನೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಗೆ ಶೀಘ್ರವೇ ನೂತನ ಮುಖ್ಯಮಂತ್ರಿ ಬರಲಿದ್ದಾರೆ. ಅನೇಕರಿಗೆ ದೆಹಲಿ ಸಿಎಂ ಸಂಬಳ ಎಷ್ಟು ಅನ್ನೋ ಕುತೂಹಲವಿರುತ್ತದೆ.
ದೆಹಲಿಯ ನೂತನ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ನಾಯಕರ ಸಭೆಯಲ್ಲಿ ಹಲವು ಹೆಸರುಗಳು ಕೇಳಿಬರುತ್ತಿವೆ. ಹೀಗಾಗಿ ದೆಹಲಿ ಸಿಎಂ ಸಂಬಳ ಎಷ್ಟಿರಬಹುದು ಅಂತಾ ತಿಳಿಯಲು ಜನರು ಆಕಸ್ತರಾಗಿದ್ದಾರೆ.
ಮಾಹಿತಿ ಪ್ರಕಾರ, ಎಲ್ಲಾ ಭತ್ಯಗಳನ್ನು ಸೇರಿಸಿ ದೆಹಲಿ ಮುಖ್ಯಮಂತ್ರಿಯ ಒಟ್ಟು ವೇತನ ತಿಂಗಳಿಗೆ 1 ಲಕ್ಷ 70 ಸಾವಿರ ರೂ. ಆಗುತ್ತದೆ.
ದೆಹಲಿ ವಿಧಾನಸಭೆಯ ವೆಬ್‌ಸೈಟ್ ಪ್ರಕಾರ, ದೆಹಲಿಯ ಮುಖ್ಯಮಂತ್ರಿ ಮಾಸಿಕ 60 ಸಾವಿರ ರೂ. ವೇತನ ಪಡೆಯುತ್ತಾರೆ.
ಇದಲ್ಲದೆ ತಿಂಗಳಿಗೆ 30 ಸಾವಿರ ರೂ. ಕ್ಷೇತ್ರ ಭತ್ಯೆ, 25 ಸಾವಿ ರೂ. ಸಹಾಯಕ ಕಾರ್ಯದರ್ಶಿ ಭತ್ಯೆ ಮತ್ತು 10 ಸಾವಿರ ರೂ. ಆತಿಥ್ಯ ಭತ್ಯೆ ನೀಡಲಾಗುತ್ತದೆ.
ಇದರೊಂದಿಗೆ ತಮ್ಮ ಸಂಪೂರ್ಣ ಅಧಿಕಾರಾವಧಿಯಲ್ಲಿ 1500 ರೂ.ಗಳ ದೈನಂದಿನ ಭತ್ಯೆಯನ್ನು ಸಹ ದೆಹಲಿ ಮುಖ್ಯಮಂತ್ರಿ ಪಡೆಯುತ್ತಾರೆ.
ದೆಹಲಿ ಮುಖ್ಯಮಂತ್ರಿಗೆ ನೀಡಲಾಗುವ ವೇತನ ಮತ್ತು ಇತರ ಭತ್ಯೆಗಳು ಸೇರಿ ಒಟ್ಟು ತಿಂಗಳಿಗೆ 1 ಲಕ್ಷ 70 ಸಾವಿರ ರೂ. ವೇತನವನ್ನು ನೀಡಲಾಗುತ್ತದೆ.