ಸ್ತ್ರೀಶಕ್ತಿಯ ಸಬಲೀಕರಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಸ್ತ್ರೀಶಕ್ತಿಯ ಸಬಲೀಕರಣ! ಮಹಿಳಾ ಸಬಲೀಕರಣಕ್ಕಾಗಿ ‘ಡ್ರೋನ್’ ಬಳಕೆ.

Puttaraj K Alur
Nov 30,2023

ಡ್ರೋನ್ ಸೇವೆ

ಮಹಿಳಾ ಸ್ವಸಹಾಯ ಸಂಘಗಳ ಸಶಕ್ತೀಕರಣ ಮತ್ತು ಡ್ರೋನ್ ಸೇವೆಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಕೆ.

‘ಡ್ರೋನ್’ ಒದಗಿಸುವ ಯೋಜನೆ

ಮುಂದಿನ 4 ವರ್ಷಗಳಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ‘ಡ್ರೋನ್’ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ.

ಕೃಷಿ ಚಟುವಟಿಕೆಗೆ ‘ಡ್ರೋನ್’ ಬಾಡಿಗೆ

ಕೃಷಿ ಚಟುವಟಿಕೆಗಳಿಗೆ ‘ಡ್ರೋನ್’ ಬಾಡಿಗೆ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಅವಕಾಶ ಕಲ್ಪಿಸಲಿದೆ.

ರೈತರಿಗೆ ಬಾಡಿಗೆ ಸೇವೆ

ಕೃಷಿ ಉದ್ದೇಶಕ್ಕಾಗಿ ರೈತರಿಗೆ ಬಾಡಿಗೆ ಸೇವೆಗಳನ್ನು ಒದಗಿಸಲು 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ಗಳ ಪೂರೈಕೆ ಮಾಡಲಾಗುತ್ತದೆ.

ಡ್ರೋನ್ ಪೈಲಟ್ ತರಬೇತಿ

ಮಹಿಳಾ ಸ್ವಸಹಾಯ ಗುಂಪಿನ ಓರ್ವ ಸದಸ್ಯೆಗೆ 5 ದಿನಗಳ ಕಾಲ ಡ್ರೋನ್ ಪೈಲಟ್ ತರಬೇತಿ ಮತ್ತು 10 ದಿನಗಳ ಕೃಷಿ ತರಬೇತಿ ನೀಡಲಾಗುತ್ತದೆ.

8 ಲಕ್ಷ ರೂ. ಹಣಕಾಸು ನೆರವು

ಡ್ರೋನ್ಗಳ ಖರೀದಿಗೆ ವೆಚ್ಚದ ಶೇ.80ರಷ್ಟು ಅಥವಾ ಗರಿಷ್ಠ 8 ಲಕ್ಷ ರೂ.ವರೆಗಿನ ಹಣಕಾಸು ನೆರವು ನೀಡಲಾಗುತ್ತದೆ.

1,261 ಕೋಟಿ ರೂ. ವೆಚ್ಚ

ಈ ಯೋಜನೆಗೆ 2024-25ರಿಂದ 2025-26ರ ಅವಧಿಗೆ 1,261 ಕೋಟಿ ರೂ. ವೆಚ್ಚವಾಗಲಿದೆ.

VIEW ALL

Read Next Story