ನಮ್ಮ ದೇಶವು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಹೊಂದಿದ್ದೂ,ಪ್ರತಿಯೊಬ್ಬ ನಾಗರಿಕನು ಮತದಾನ ಮಾಡುವ ಹಕ್ಕನ್ನು ಪಡೆದುಕೊಂಡಿರುತ್ತಾನೆ.ಮತದಾನಕ್ಕೆ ಗುರುತಿನ ಚೀಟಿ ಮುಖ್ಯವಾಗಿರುತ್ತದೆ.
ಮತದಾನಕ್ಕೆ ಅರ್ಹತೆಯನ್ನು ಹೊಂದಬೇಕಾದರೆ ನಿಮಗೆ 18 ವರ್ಷ ವಯಸ್ಸಾಗಿದ್ದೂ, ನೀವು ಮತದಾನ ಮಾಡುವ ಗುರತಿನ ಚೀಟಿಯನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತೀರಿ.
ಮತದಾನದ ಹಕ್ಕನ್ನು ಹೊಂದಿರಬೇಕಾದರೆ ನೀವು ಭಾರತೀಯ ವ್ಯಕ್ತಿಯಾಗಿರಬೇಕು.ಬೇರೆ ದೇಶದ ನಾಗರಿಕನಿಗೆ ಅವಕಾಶವಿರುವುದಿಲ್ಲ.
ಗುರುತಿನ ಚೀಟಿಗೆ ಆಫ್‌ಲೈನ್ ಮೂಲಕವೂ ಅರ್ಜಿಯನ್ನು ಸಲ್ಲಿಸಬಹುದು.ಫಾರ್ಮ್ 6 ಎಂಬ ಅರ್ಜಿಯಲ್ಲಿ ಪೂರ್ಣ ಹೆಸರು,ಹುಟ್ಟಿದ ದಿನಾಂಕ,ವಿಳಾಸ ಇತರೆ ವಿವರಗಳನ್ನು ಕಡ್ಡಾಯವಾಗಿ ತುಂಬಬೇಕು.
ಗ್ರಾಮೀಣ ಭಾಗದಲ್ಲಿರುವ ಯುವಜನಾಂಗದವರು ಅಂಗನವಾಡಿ ಕಾರ್ಯಕರ್ತೆಯರ ಬಳಿ ಭೇಟಿ ನೀಡಿ ಗುರುತಿನ ಚೀಟಿಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ನಗರದಲ್ಲಿರುವ ಯುವ ನಿವಾಸಿಗಳು ಮತದಾನದ ಗುರುತಿನ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ತಾಲೂಕು ಕಚೇರಿಯಲ್ಲಿರುವ ಚುನಾವಣಾ ನೊಂದಣಾಧಿಕರಿಯ ಬಳಿಯೂ ಅರ್ಜಿಯನ್ನು ಪಡೆಯಬಹುದು.
ಗುರುತಿನ ಚೀಟಿಗೆ ಅರ್ಜಿಯನ್ನು ಸಲ್ಲಿಸಬೇಕಾದರೆ,ನಿಮ್ಮ ಭಾವ ಚಿತ್ರ,ಪಡಿತರ ಚೀಟಿ,ಆಧಾರ್ ಕಾರ್ಡ್,ಜನನ ಪ್ರಮಾಣ ಪತ್ರ,ಪಾನ್ ಕಾರ್ಡ್ ಹಾಗೂ SSLC ಪ್ರಮಾಣ ಪತ್ರದ ದಾಖಲೆಗಳನ್ನು ಸಲ್ಲಿಸಬೇಕು.
ಪ್ರತಿಯೊಂದು ಚುನಾವಣೆಯಲ್ಲೂ ಆಯಾ ಭಾಗಕ್ಕೆ ತಕ್ಕಂತೆ ಚುನಾವಾಣಾ ಕ್ಷೇತ್ರವೆಂದು ಘೋಷಣೆಯಾಗಿರುತ್ತದೆ. ಯಾವುದೇ ವ್ಯಕ್ತಿಯು ವೋಟ್ ಮಾಡಬೇಕೆಂದಲ್ಲಿ ಆಯಾ ಕ್ಷೇತ್ರದ ನಿವಾಸಿಯಾಗಿರಬೇಕು.
ಚುನಾವಣಾ ಆಯೋಗದ ಜಾಲತಾಣಕ್ಕೆ ಭೆಟಿ ನೀಡಿ ಅಲ್ಲಿಯೂ ಫಾರ್ಮ್ 6 ಅರ್ಜಿಯನ್ನು ಮುದ್ರಿಸಿಕೊಳ್ಳಬಹುದು. ನಿಮ್ಮ ಪೂರ್ಣ ಹೆಸರಿನೊಂದಿಗೆ ಇ-ಮೇಲ್,ಮೊಬೈಲ್ ಸಂಖ್ಯೆಯೊಂದಿಗೆ ಖಾತೆಯನ್ನು ರಚಿಸಿಕೊಳ್ಳಬಹುದು.
ಯಾವುದೇ ವ್ಯಕ್ತಿಯು ವೋಟ್ ಮಾಡಬೇಕಾದರೆ ಆತನ ಮನಸ್ಥಿತಿ ಉತ್ತಮವಾಗಿರಬೇಕು.ಇಲ್ಲದೇ ಹೋದರೆ ಮತದಾನದ ಸ್ಥಳಕ್ಕೂ ಪ್ರವೇಶವನ್ನು ನಿರ್ಬಂಧ ಮಾಡಿರುತ್ತಾರೆ.