ಭಾರತದಲ್ಲಿನ ನದಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ದೈವಿಕವೆಂದು ಪರಿಗಣಿಸಲಾಗುತ್ತದೆ. ನದಿಗಳಲ್ಲಿ ಗಂಗೆಯನ್ನು ಅತ್ಯಂತ ಪವಿತ್ರ ನದಿ ಎಂದು ಹೇಳಲಾಗುತ್ತದೆ.
ಅನೇಕ ನದಿಗಲು ಭಾರತದಲ್ಲಿ ಹುಟ್ಟುತ್ತವೆ. ನೂರಾರು ನದಿಗಳು ಮತ್ತು ಉಪನದಿಗಳು ಹರಿಯುತ್ತದೆ. ಆದರೆ ಇವುಗಳಲ್ಲಿ ಅತಿ ಉದ್ದವಾದ ನದಿ ಯಾವುದು?
ಸಿಂಧೂ ನದಿಯೂ ಒಟ್ಟು 3180 ಕಿ.ಮೀ ಉದ್ದವಾಗಿದೆ. ಸಿಂಧೂ ಏಷ್ಯಾದ ಅತಿ ಉದ್ದದ ನದಿಗಳಲ್ಲಿ ಒಂದಾಗಿದೆ. ಆದರೆ ಈ ನದಿಯು ನಮ್ಮ ದೇಶದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹರಿಯುತ್ತದೆ ಅಂದರೆ ಅದರ ಒಟ್ಟು ಉದ್ದ 1,114 ಕಿಮೀ ಮಾತ್ರ ಭಾರದಲ್ಲಿ ಹರಿಯುತ್ತದೆ.
ಗಂಗಾ ಭಾರತದ ಅತ್ಯಂತ ಪವಿತ್ರ ನದಿ. ಇದರ ಒಟ್ಟು ಉದ್ದ 2,525 ಕಿ.ಮೀ . ಇದು ಭಾರತದ ಅತಿ ಉದ್ದವಾದ ನದಿಯೂ ಆಗಿದೆ.
ಗಂಗಾನದಿಯ ನಂತರ ದೇಶದಲ್ಲೇ ಅತಿ ಉದ್ದವಾದ ನದಿ ಗೋದಾವರಿ. ಒಟ್ಟು 1464 ಕಿ.ಮೀ ಉದ್ದದೊಂದಿಗೆ ನದಿ ಎರಡನೇ ಸ್ಥಾನ ಹೊಂದಿದೆ.
ಕೃಷ್ಣಾ ನದಿಯು ಭಾರತದ ಮೂರನೇ ಮತ್ತು ಗಂಗಾ ನದಿಯ ಉಪನದಿಯಾದ ಯಮುನಾ ನದಿ ನಾಲ್ಕನೇ ಸ್ಥಾನದಲ್ಲಿದೆ.