ಜುಲೈನಲ್ಲಿ ಟ್ರಿಪ್‌ ಮಾಡಲು ಸೂಕ್ತ 10 ಗಿರಿಧಾಮಗಳಿವು..!

Published by: Krishna N K | Jul 04, 2025

ಕೊಡಗು

ಕಾಫಿ ತೋಟಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಚಾರಣ ಮತ್ತು ವನ್ಯಜೀವಿ ಸಫಾರಿಗಳಿಗೆ ಸೂಕ್ತ ಸ್ಥಳ. ಅಬೇ ಜಲಪಾತ ಮತ್ತು ತಲಕಾವೇರಿ ನೋಡಲೇಬೇಕಾದ ಸ್ಥಳಗಳು.

Published by: Krishna N K | Jul 04, 2025

ಅಣ್ಣಾಮಲೈ ಬೆಟ್ಟಗಳು, ತಮಿಳುನಾಡು

ತಮಿಳುನಾಡು ಮತ್ತು ಕೇರಳದ ಗಡಿಯಲ್ಲಿರುವ ಅಣ್ಣಾಮಲೈ ಬೆಟ್ಟ ಹಚ್ಚ ಹಸಿರಿನ ಕಾಡುಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಸುಂದರವಾದ ನೋಟಗಳನ್ನು ಹೊಂದಿದ್ದು, ಚಾರಣಕ್ಕೆ ಸೂಕ್ತ ಸ್ಥಳ

Published by: Krishna N K | Jul 04, 2025

ಯೇರ್ಕಾಡ್, ತಮಿಳುನಾಡು

ತಮಿಳುನಾಡಿನಲ್ಲಿ ಅಷ್ಟೇನೂ ಪ್ರಸಿದ್ಧವಲ್ಲದ ಗಿರಿಧಾಮವಾಗಿದ್ದು, ಇದು ತಂಪಾದ ಹವಾಮಾನ ಮತ್ತು ಶಾಂತಿಯುತ ವಾತಾವರಣವನ್ನು ನೀಡುತ್ತದೆ. ಕಾಫಿ ತೋಟಗಳು, ಪ್ರಶಾಂತ ಸರೋವರಗಳು ಮತ್ತು ರಮಣೀಯ ನೋಟಗಳಿಗೆ ಹೆಸರುವಾಸಿಯಾಗಿದೆ.

Published by: Krishna N K | Jul 04, 2025

ಕೇರಳದ ವಯನಾಡ್

ವಯನಾಡ್ ಹಚ್ಚ ಹಸಿರಿನ ಕಾಡುಗಳು, ಜಲಪಾತಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಂದ ಆವೃತವಾದ ಸುಂದರವಾದ ಗಿರಿಧಾಮವಾಗಿದೆ. ತಂಪಾದ ಹವಾಮಾನ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧಿ.

Published by: Krishna N K | Jul 04, 2025

ಕೂನೂರು, ತಮಿಳುನಾಡು

ಊಟಿ ಬಳಿಯಿರುವ ಶಾಂತ ಗಿರಿಧಾಮ ಕೂನೂರು, ಚಹಾ ತೋಟಗಳು ಮತ್ತು ನೀಲಗಿರಿಯ ವಿಹಂಗಮ ನೋಟಗಳಿಗೆ ಹೆಸರುವಾಸಿಯಾಗಿದೆ.

Published by: Krishna N K | Jul 04, 2025

ಚಿಕ್ಕಮಗಳೂರು

ಕಾಫಿ ತೋಟಗಳು ಮತ್ತು ಹಚ್ಚ ಹಸಿರಿನ ಭೂದೃಶ್ಯಗಳಿಗೆ ಹೆಸರುವಾಸಿಯಾದ ಚಿಕ್ಕಮಗಳೂರು ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ತಂಪಾದ ಗಿರಿಧಾಮವಾಗಿದೆ. ಮುಳ್ಳಯ್ಯನಗಿರಿ ಶಿಖರ ಮಿಸ್‌ ಮಾಡಬೇಡಿ.

Published by: Krishna N K | Jul 04, 2025

ಮುನ್ನಾರ್, ಕೇರಳ

ಮುನ್ನಾರ್ ತನ್ನ ತಂಪಾದ ವಾತಾವರಣ ಮತ್ತು ಹಚ್ಚ ಹಸಿರಿನ ಚಹಾ ತೋಟಗಳಿಂದಾಗಿ ಬೇಸಿಗೆಯಲ್ಲಿ ಭೇಟಿ ನೀಡಲು ಉತ್ತಮ ಪ್ರವಾಸಿ ತಾಣವಾಗಿದೆ.

Published by: Krishna N K | Jul 04, 2025

ಅಗಸ್ತ್ಯಕುಡಂ, ಕೇರಳ

ಪಶ್ಚಿಮ ಘಟ್ಟಗಳ ಶಿಖರದಲ್ಲಿರುವ ಈ ಗಿರಿಧಾಮವು ತಂಪಾದ ಹವಾಮಾನ ಮತ್ತು ಮಾಲಿನ್ಯರಹಿತ ನೈಸರ್ಗಿಕ ಪರಿಸರವನ್ನು ನೀಡುತ್ತದೆ. ಅಗಸ್ತ್ಯಕುಡಂ ಚಾರಣ, ದಟ್ಟ ಕಾಡುಗಳು ಮತ್ತು ಪ್ರಕೃತಿ ನಡಿಗೆಗೆ ಸೂಕ್ತವಾಗಿದೆ.

Published by: Krishna N K | Jul 04, 2025

ಊಟಿ, ತಮಿಳುನಾಡು

'ಬೆಟ್ಟಗಳ ರಾಣಿ' ಎಂದು ಕರೆಯಲ್ಪಡುವ ಊಟಿಯು ಹಚ್ಚ ಹಸಿರಿಗೆ ಹೆಸರುವಾಸಿ. ನಗರದ ಜಂಜಾಟದಿಂದ ರಿಲೀಫ್‌ ಬೇಕು ಅಂದ್ರೆ ಈ ಸ್ಥಳಕ್ಕೆ ಭೇಟಿ ನೀಡಿ.

Published by: Krishna N K | Jul 04, 2025

VIEW ALL

Read Next Story