ಪ್ರಧಾನಿ ಮೋದಿ ಜನಪ್ರಿಯತೆ

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಜಾಗತಿಕ ಮಟ್ಟದಲ್ಲೂ ಛಾಪು ಮೂಡಿಸಿದೆ.

Puttaraj K Alur
Dec 09,2023

ಜಾಗತಿಕ ನಾಯಕರ ಅನುಮೋದನಾ ರೇಟಿಂಗ್‌

ಜಾಗತಿಕ ನಾಯಕರ ಅನುಮೋದನಾ ರೇಟಿಂಗ್‌ನಲ್ಲಿ ಪ್ರಧಾನಿ ಮೋದಿಯವರು ಅಗ್ರಸ್ಥಾನದಲ್ಲಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಅಂಕಿಅಂಶ

ಡಿ.7ರಂದು ಅಮೆರಿಕ ಮೂಲದ ಸಲಹಾ ಸಂಸ್ಥೆ 'ಮಾರ್ನಿಂಗ್ ಕನ್ಸಲ್ಟ್' ಈ ಬಗ್ಗೆ ಅಂಕಿಅಂಶ ಬಿಡುಗಡೆ ಮಾಡಿದೆ.

ವಿಶ್ವದ ಅತ್ಯಂತ ಜನಪ್ರಿಯ ನಾಯಕ

ಪ್ರಧಾನಿ ಮೋದಿ ಶೇ.76ರ ಅನುಮೋದನೆಯೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್

ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಶೇ.66ರ ಅನುಮೋದನೆಯ ರೇಟಿಂಗ್‌ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಅಲೈನ್ ಬರ್ಸೆಟ್

ಸ್ವಿಸ್ ಒಕ್ಕೂಟದ ಅಧ್ಯಕ್ಷ ಅಲೈನ್ ಬರ್ಸೆಟ್ ಅವರು ಶೇ.58ರ ಅನುಮೋದನೆಯೊಂದಿಗೆ 3ನೇ ಸ್ಥಾನವನ್ನು ಪಡೆದರು.

ಲುಲಾ ಡ ಸಿಲ್ವಾ & ಆಂಥೋನಿ ಅಲ್ಬನೀಸ್

ಬ್ರೆಜಿಲ್‌ನ ಲುಲಾ ಡ ಸಿಲ್ವಾ ಮತ್ತು ಆಸ್ಟ್ರೇಲಿಯಾದ ಆಂಥೋನಿ ಅಲ್ಬನೀಸ್ ಕ್ರಮವಾಗಿ 4 ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.

ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಶೇ.37ರ ಅನುಮೋದನೆ ರೇಟಿಂಗ್‌ನೊಂದಿಗೆ 8ನೇ ಸ್ಥಾನದಲ್ಲಿದ್ದರೆ

ರಿಷಿ ಸುನಕ್

ಇಂಗ್ಲೆಂಡ್‌ ಪ್ರಧಾನಿ ರಿಷಿ ಸುನಕ್ ಅವರ ಅನುಮೋದನೆ ರೇಟಿಂಗ್ ಶೇಕಡಾ 25ರಷ್ಟಿದೆ.

VIEW ALL

Read Next Story