ಸ್ಕಾಟ್ಲ್ಯಾಂಡ್ ಆಫ್ ಇಂಡಿಯಾ ಖ್ಯಾತಿಯ ಮಡಿಕೇರಿಗೆ ನವೆಂಬರ್ ತಿಂಗಳಿನಲ್ಲಿ ಪ್ರವಾಸ ಕೈಗೊಳ್ಳಬಹುದು, ಇಲ್ಲಿನ ಪ್ರಕೃತಿ ದರ್ಶನ ಮಾಡಿ 3 ದಿನಗಳು ಸಾಕು.
ನವೆಂಬರ್ ತಿಂಗಳಿನಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ನೋಡಲು ಸುಂದರವಾಗಿರುತ್ತದೆ. ಮಾನ್ಸೂನ್ ಮುಗಿಯುತ್ತಾ ಚಳಿಗಾಲ ಆರಂಭವಾಗುವ ವೇಳೆ ಇದಾಗಿದ್ದು, ಪ್ರಕೃತಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುತ್ತದೆ.
ಅರಮನೆ ನಗರಿ ಮೈಸೂರಿಗೂ ಕೂಡ ನೀವು ನವೆಂಬರ್ ತಿಂಗಳಿನಲ್ಲಿ ಭೇಟಿ ನೀಡಬಹುದು. ಒಡೆಯರ್ ವಂಶದ ಅಂದ-ಚಂದ, ಬೃಂದಾವನ ಗಾರ್ಡನ್ ಎಲ್ಲವನ್ನೂ ಈ ಸಮಯದಲ್ಲಿ ನೋಡಬಹುದು.
ಮಂಗಳೂರು ಮತ್ತು ಸುತ್ತಮುತ್ತ ವಾಸಿಸುವ ಜನರು ಮುರುಡೇಶ್ವರಕ್ಕೆ ಪ್ರವಾಸ ಕೈಗೊಳ್ಳಬಹುದು. ಇಲ್ಲಿ ಎರಡನೇ ಅತಿ ಎತ್ತರದ ಶಿವನ ಪ್ರತಿಮೆ ಇದೆ. ಜೊತೆಗೆ ದೇವಾಲಯದ ಪರಿಶೋಧನೆ, ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್, ಕಯಾಕಿಂಗ್ ಮುಂತಾದ ಕಡಲತೀರಗಳಲ್ಲಿ ಜಲ ಕ್ರೀಡೆಗಳನ್ನು ಕೂಡ ಆಡಬಹುದು.
ಭಾರತದ ಸ್ವಂತ ಕಾಫಿ ರಾಜಧಾನಿ ಚಿಕ್ಕಮಗಳೂರಿಗೆ ನವೆಂಬರ್’ನಲ್ಲಿ ಪ್ರವಾಸ ಕೈಗೊಳ್ಳುವುದು ಬೆಸ್ಟ್. ಇಲ್ಲಿ ಈ ಸಂದರ್ಭದಲ್ಲಿ ಸರಾಸರಿ ತಾಪಮಾನ 26 ° C (ಅಂದಾಜು) ವರೆಗೆ ಮೀರುವುದಿಲ್ಲ. ಕಾಫಿ ಎಸ್ಟೇಟ್, ಭದ್ರಾ ನದಿಯ ರಭಸದಲ್ಲಿ ರಾಫ್ಟಿಂಗ್, ಕಲ್ಹಟ್ಟಿ ಜಲಪಾತ ಎಲ್ಲವನ್ನೂ ಇಲ್ಲಿ ಕಾಣಬಹುದು.
ದೇವಸ್ಥಾನಗಳು, ಸ್ಮಾರಕಗಳು ಮತ್ತು ಪುರಾತನ ಅವಶೇಷಗಳಿಂದ ತುಂಬಿರುವ ಹಂಪಿ ಬಳಿಯಿರುವ ಬಾದಾಮಿಯು ನವೆಂಬರ್’ನಲ್ಲಿ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ.
ಹಂಪಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಕರ್ನಾಟಕದ ತುಂಗಭದ್ರಾ ನದಿಯ ದಡದಲ್ಲಿ ನೆಲೆಗೊಂಡಿದೆ. ಒಂದೊಮ್ಮೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ, ಅತ್ಯುತ್ತಮ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ
ಕರ್ನಾಟಕದ ನೆಚ್ಚಿನ ಕರಾವಳಿ ಪಟ್ಟಣಗಳಲ್ಲಿ ಒಂದಾದ ಗೋಕರ್ಣಕ್ಕೆ ಕೂಡ ನವೆಂಬರ್’ನಲ್ಲಿ ಭೇಟಿ ನೀಡಬಹುದು. ಇಲ್ಲಿ ಅರಬ್ಬಿ ಸಮುದ್ರದ ಅಲೆಗಳ ಮಧ್ಯೆ ಪ್ರವಾಸವನ್ನು ನಿಮಗೆ ಎಂಜಾಯ್ ಮಾಡಬಹುದು.