ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರೇ

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೆಮತಾಬಾದ್‌ನ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರಾಯ್ ಬಿಂದಾಲ್ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Updated: Jul 13, 2020 , 10:30 AM IST
ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕ ದೇಬೇಂದ್ರ ನಾಥ್ ರೇ

ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಹೆಮತಾಬಾದ್‌ನ ಬಿಜೆಪಿ ಶಾಸಕ ((BJP MLA) ದೇಬೇಂದ್ರ ನಾಥ್ ರಾಯ್ ಅವರು ಸೋಮವಾರ (ಜುಲೈ 13) ಬೆಳಿಗ್ಗೆ ತಮ್ಮ ಗ್ರಾಮದ ಸಮೀಪವಿರುವ ಬಿಂದಾಲ್ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಆತನನ್ನು ಕೊಂದು ನಂತರ ನೇಣು ಹಾಕಲಾಗಿದೆ ಎಂದು ಶಾಸಕರ ಕುಟುಂಬ ಸದಸ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಶಾಸಕನನ್ನು ಕೊಲೆ ಮಾಡಿ ನಂತರ ನೇಣು ಬಿಗಿಯಲಾಗಿದೆ ಎಂದು ಸ್ಥಳೀಯರು ಕೂಡ ಅಭಿಪ್ರಾಯ ಪಟ್ಟಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರಾಯ್‌ಗುಂಜ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವಷ್ಟೇ  ಸಾವಿಗೆ ನಿಜವಾದ ಕಾರಣ ಏನೆಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಉತ್ತರ ದಿನಾಜ್‌ಪುರದ ಮೀಸಲು ಕ್ಷೇತ್ರ ಹೆಮತಾಬಾದ್‌ನ ಬಿಜೆಪಿ ಶಾಸಕರಾದ ದೇಬೇಂದ್ರ ನಾಥ್ ರೇ ಅವರ ದೇಹವು ಅವರ ಹಳ್ಳಿಯ ಮನೆಯ ಸಮೀಪವಿರುವ ಬಿಂದಾಲ್‌ನಲ್ಲಿ ಈ ರೀತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರನ್ನು ಮೊದಲು ಕೊಂದು ನಂತರ ನೇಣು ಹಾಕಿರಬಹುದು ಎಂದು ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತರು 2019ರಲ್ಲಿ ಬಿಜೆಪಿಗೆ ಸೇರಿದರು, ಇದು ಅವರ ಅಪರಾಧವೇ? ಎಂದು ಪಶ್ಚಿಮ ಬಂಗಾಳ ಬಿಜೆಪಿ ಟ್ವೀಟ್ ಮಾಡಿದೆ.

ಈ ಹಿಂದೆ ಸಿಪಿಐ (ಎಂ) ಶಾಸಕರಾಗಿದ್ದ ರಾಯ್  2019 ರಲ್ಲಿ ಪಕ್ಷ ಬದಲಿಸಿ ಬಿಜೆಪಿಗೆ ಸೇರಿದ್ದರು. ರಾಯ್ ಅವರು ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರಿದ್ದರು.