ಭಾರತದಲ್ಲಿ ನಿರ್ಬಂಧನೆಗೆ ಒಳಗಾದ We Transfer... ಕಾರಣ ಏನು ಗೊತ್ತಾ?

ನೀವೂ ಕೂಡ ಕಳೆದ ಕೆಲ ದಿನಗಳಿಂದ 'We Transfer' ಮೂಲಕ ಫೈಲ್ ಗಳನ್ನು ಕಳುಹಿಸುತ್ತಿದ್ದು, ಫೈಲ್ ಕಳುಹಿಸಲು ವಿಫಲರಾಗುತ್ತಿದ್ದೀರಾ? ನೀವಷ್ಟೇ ಅಲ್ಲ ಇತರೆ ಹಲವು ಬಳಕೆದಾರರು ಕೂಡ ಇದೇ ಸಮಸ್ಯೆ ಎದುರಿಸಿದ್ದಾರೆ.

Updated: Jun 1, 2020 , 08:30 PM IST
ಭಾರತದಲ್ಲಿ ನಿರ್ಬಂಧನೆಗೆ ಒಳಗಾದ We Transfer... ಕಾರಣ ಏನು ಗೊತ್ತಾ?

ನವದೆಹಲಿ:ನೀವೂ ಕೂಡ ಕಳೆದ ಕೆಲ ದಿನಗಳಿಂದ 'We Transfer' ಮೂಲಕ ಫೈಲ್ ಗಳನ್ನು ಕಳುಹಿಸುತ್ತಿದ್ದು, ಫೈಲ್ ಕಳುಹಿಸಲು ವಿಫಲರಾಗುತ್ತಿದ್ದೀರಾ? ನೀವಷ್ಟೇ ಅಲ್ಲ ಇತರೆ ಹಲವು ಬಳಕೆದಾರರು ಕೂಡ ಇದೇ ಸಮಸ್ಯೆ ಎದುರಿಸಿದ್ದಾರೆ. ವಿಷಯ ಏನು ಅಂದ್ರೆ, ಕೇಂದ್ರ ದೂರ ಸಂಪರ್ಕ ಇಲಾಖೆ (DoT) ಮೇ 18 ರಂದು We Transfer ಅನ್ನು ಬ್ಯಾನ್ ಮಾಡಲು ಆದೇಶಿಸಿದೆ.

ವರದಿಗಳ ಪ್ರಕಾರ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಭಾರತ ಸರ್ಕಾರ ಈ ವೆಬ್ ಸೈಟ್ ಅನ್ನು ಬ್ಯಾನ್ ಮಾಡಿದೆ. ಇದೇ ವೇಳೆ We Transfer ಕೂಡ ಇದರ ತನಿಖೆಯಲ್ಲಿ ತೊಡಗಿದೆ. ಶೀಘ್ರದಲ್ಲಿಯೇ ಕಂಪನಿ ಈ ಕುರಿತು ಹೇಳಿಕೆ ನೀಡುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆಯಷ್ಟೇ ಬಳಕೆದಾರರು ಈ ವೆಬ್ಸೈಟ್ ಅನ್ನು ಬಳಕೆ ಮಾಡಲು ವಿಫಲರಾಗಿದ್ದರು. ಈ ಕುರಿತು ಟ್ವಿಟ್ಟರ್ ಮೇಲೆಯೂ ಕೂಡ ಹಲವು ದೂರುಗಳು ಕಂಡುಬಂದಿದ್ದವು. ಈ ವೇಳೆ ಟ್ವೀಟ್ ಮಾಡಿ ಉತ್ತರಿಸಿದ್ದ ಕಂಪನಿ, "ಭಾರತದಲ್ಲಿ ತಮ್ಮ ಸೈಟ್ ಅನ್ನು ಅಧಿಕೃತವಾಗಿ ಬ್ಯಾನ್ ಮಾಡಲಾಗುತ್ತಿದೆ ಎಂಬ ವರದಿಗಳು ಬಂದಿವೆ. ನಮ್ಮ ತಂಡ ಈ ಕುರಿತು ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ನಮಗೆ ಇದರ ಮಾಹಿಸಿ ಸಿಗಲಿದೆ. ಈ ಮಧ್ಯೆ ನಮ್ಮ ಸೈಟ್ ಅನ್ನು ತಲುಪಲು VPN ಸೇವೆ ಬಳಸುವುದು ಉತ್ತಮ " ಎಂದು ಹೇಳಿತ್ತು.

ಲಾಕ್ ಡೌನ್ ಕಾರಣ ಜನರು ಈ ವೆಬ್ಸೈಟ್ ಅನ್ನು ಹೆಚ್ಚಾಗಿ ಬಳಸುತ್ತಿದ್ದರು. ಹಲವು ಜನರು ಮನೆಯಿಂದಲೇ ತಮ್ಮ ಕಚೇರಿ ಕಾರ್ಯಗಳನ್ನು ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಈ ಬ್ಯಾನ್ ವಿಧಿಸಲಾಗಿದ್ದು, ಜನರು ದೊಡ್ಡ ಗಾತ್ರದ ಮೀಡಿಯಾ ಫೈಲ್ ಗಳನ್ನು ವರ್ಗಾಯಿಸಲು ಈ ಪ್ಲಾಟ್ ಫಾರ್ಮ್ ಮೇಲೆ ಆವಲಂಭಿಸಿದ್ದರು.

ದೊಡ್ಡ ಗಾತ್ರದ ಫೈಲ್ ಟ್ರಾನ್ಸ್ಫರ್ ಮಾಡಲು ವೀ ಟ್ರಾನ್ಸ್ಫರ್ ಅತ್ಯಂತ ಜನಪ್ರೀಯ ಸೈಟ್ ಆಗಿತ್ತು. ನೆದರ್ಲ್ಯಾಂಡ್ಸ್ ಮೂಲದ ಈ ಕಂಪನಿಗೆ ವಿಶ್ವಾದ್ಯಂತ ಸುಮಾರು 5 ಕೋಟಿ ಬಳಕೆದಾರರನ್ನು ಹೊಂದಿದೆ. ಈ ಪ್ಲಾಟ್ಫಾರ್ಮ್ ಬಳಸಿ ಕೋಟ್ಯಾಂತರ ಫೈಲ್ ಗಳನ್ನೂ ಟ್ರಾನ್ಸ್ಫರ್ ಮಾಡಲಾಗುತ್ತಿತ್ತು. 2009 ರಲ್ಲಿ ಆರಂಭಗೊಂಡ We Transfer ಪ್ರಿಮಿಯಂ ಸೇವೆಯನ್ನು ಬಳಸಿ ಬಳಕೆದಾರರು 20GB ಗಾತ್ರದ ಫೈಲ್ ಅಥವಾ ಫೋಲ್ಡರ್ ಹಂಚಿಕೊಳ್ಳಬಹುದಿತ್ತು. ಇದಲ್ಲದೆ ಈ ಸೈಟ್ 1 TB ಗಾತ್ರದ ಸ್ಟೋರೇಜ್ ಸ್ಪೇಸ್ ಕೂಡ ನೀಡುತ್ತಿದೆ.