)
ಪ್ರಧಾನಿ ಮೋದಿ ಭಾಷಣ ಮಾಡುವುದನ್ನು, ಸಭೆ ನಡೆಸುವುದನ್ನು ಮತ್ತು ಪ್ರಮಾಣ ವಚನ ಸ್ವೀಕರಿಸುವುದನ್ನು ನೀವು ಟಿವಿಗಳಲ್ಲಿ, ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಪ್ರಧಾನಮಂತ್ರಿ ಒಂದು ಪ್ರಮುಖ ನಿರ್ಧಾರಕ್ಕೆ ಸಹಿ ಹಾಕಿದರೆ ಅದು ಒಂದು ಹೆಗ್ಗುರುತಾಗುತ್ತದೆ. ಆದರೆ ಫೈಲ್ಗಳಿಗೆ ಸಹಿ ಹಾಕಲು ಪ್ರಧಾನಿ ಮೋದಿ ಯಾವ ಬಣ್ಣದ ಶಾಯಿ ಇರುವ ಪೆನ್ನು ಬಳಸುತ್ತಾರೆ ಎನ್ನುವುದು ತಿಳಿದಿದೆಯೇ?
ವರದಿಯ ಪ್ರಕಾರ, 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ, ಹಿರಿಯ ಅಧಿಕಾರಿಗಳು ಅಧಿಕೃತ ಕಡತಗಳಿಗೆ ಕೆಂಪು ಅಥವಾ ಹಸಿರು ಪೆನ್ನುಗಳಿಂದ ಸಹಿ ಮಾಡದಂತೆ ಆದೇಶಿಸಿತ್ತು. ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳಿಗಿಂತ ಬೇರೆ ಬಣ್ಣದ ಪೆನ್ನುಗಳಿಂದ ಸಹಿ ಮಾಡಲು ಅಧಿಕಾರ ನೀಡಿದ್ದ ಹಿಂದಿನ ಎನ್ಡಿಎ ಸರ್ಕಾರದ ಆದೇಶವನ್ನು ಮೋದಿ ಸರ್ಕಾರ ರದ್ದುಗೊಳಿಸಿತು.
ಏನಾಗಿತ್ತು ಮೋದಿ ಸರ್ಕಾರದ ಆದೇಶ ? :
ಆ ಸಮಯದಲ್ಲಿ, ಮೋದಿ ಸರ್ಕಾರವು ಎಲ್ಲಾ ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಸೆಂಟ್ರಲ್ ಸೆಕ್ರೆಟರಿಸ್ ಆಫ್ ಆಫೀಸ್ ಪ್ರೊಸೀಜರ್ (CSMOP) ಅನ್ನು ತಿದ್ದುಪಡಿ ಮಾಡುವ ಆದೇಶವನ್ನು ಹೊರಡಿಸಿತು. 2000 ರಿಂದ, ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು ಕೆಂಪು ಅಥವಾ ಹಸಿರು ಪೆನ್ನುಗಳಿಂದ ಫೈಲ್ಗಳಿಗೆ ಸಹಿ ಮಾಡುತ್ತಿದ್ದರು. ಆದರೆ ಕಿರಿಯ ಅಧಿಕಾರಿಗಳು ನೀಲಿ ಅಥವಾ ಕಪ್ಪು ಪೆನ್ನುಗಳನ್ನು ಬಳಸುತ್ತಿದ್ದರು. ತಿದ್ದುಪಡಿಯ ನಂತರ, ಪ್ರತಿಯೊಬ್ಬರೂ ಕಪ್ಪು ಅಥವಾ ನೀಲಿ ಪೆನ್ನುಗಳಿಂದ ಸಹಿ ಮಾಡಲು ಸೂಚಿಸಲಾಯಿತು. "ಇದು ಉತ್ತಮ ಆಡಳಿತ ಸುಧಾರಣೆಯಾಗಿದ್ದು, ಅಧಿಕಾರಶಾಹಿಯ ಎಲ್ಲಾ ಹಂತಗಳಿಂದ ಫೈಲ್ಗಳ ಮೇಲೆ ಬರೆಯುವ ನೋಟ್ ಗಳಿಗೆ ಏಕರೂಪತೆಯನ್ನು ತರಲು ಪರಿಚಯಿಸಲಾಗಿದೆ.
ಹೆಚ್ಚುವರಿಯಾಗಿ, ಹಿರಿಯ ಅಧಿಕಾರಿಗಳು "ಅಪರೂಪದ ಸಂದರ್ಭಗಳಲ್ಲಿ" ತಮ್ಮ ಕಾಮೆಂಟ್ಗಳ ಮೂಲಕ ಏನಾದರೂ ಮುಖ್ಯವಾದ ವಿಷಯವನ್ನು ಎತ್ತಿ ತೋರಿಸಲು ಬಯಸಿದಾಗ ಫೈಲ್ಗಳ ಮೇಲೆ ಕೆಂಪು ಅಥವಾ ಹಸಿರು ಶಾಯಿಯನ್ನು ಬಳಸಬಹುದೆಂಬ ನಿಬಂಧನೆ ಈ ಹಿಂದೆ ಇತ್ತು.
ಪ್ರಧಾನಿ ಮೋದಿ ಬರೆಯಲು ಯಾವ ಬಣ್ಣದ ಶಾಯಿ ಬಳಸುತ್ತಾರೆ? :
ಪ್ರಧಾನಿ ಮೋದಿ ಫೈಲ್ಗಳಿಗೆ ಸಹಿ ಹಾಕಲು ಯಾವ ಬಣ್ಣದ ಪೆನ್ನು ಬಳಸುತ್ತಾರೆ? ವಿವಿಧ ಪತ್ರಿಕೆಗಳು ಮತ್ತು ಸಂಸ್ಥೆಗಳಲ್ಲಿ ಪ್ರಧಾನಿ ಮೋದಿ ಅವರ ಬರಹಗಳನ್ನು ನೋಡಿದರೆ, ಅವರು ಹೆಚ್ಚಾಗಿ ಕಪ್ಪು ಪೆನ್ನು ಬಳಸುತ್ತಾರೆ ಎನ್ನುವುದನ್ನು ಸೂಚಿಸುತ್ತದೆ. ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ಮೋದಿ ವಿವಿಧ ಸಂದರ್ಭಗಳಲ್ಲಿ ವಿವಿಧ ವ್ಯಕ್ತಿಗಳಿಗೆ ಪತ್ರಗಳನ್ನು ಕಳುಹಿಸಿದ್ದಾರೆ. ಇವುಗಳಲ್ಲಿ ಅವರ ಸಹಿ ಕಪ್ಪು ಪೆನ್ನುಗಳಲ್ಲಿರುವಂತೆ ಕಂಡುಬರುತ್ತವೆ.
ಪ್ರಧಾನಿ ಮೋದಿ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿದಾಗ, ಆ ಲೇಖನಕ್ಕೆ ಕಪ್ಪು ಪೆನ್ನಿನಿಂದ ಸಹಿ ಹಾಕಿದರು. ಅಂಗವಿಕಲ ಹುಡುಗಿಗೆ ಗುಜರಾತಿ ಭಾಷೆಯಲ್ಲಿ ಬರೆದ ಪತ್ರಕ್ಕೂ ಕಪ್ಪು ಶಾಯಿಯಿಂದ ಸಹಿ ಹಾಕಿದರು. ವಿವೇಕಾನಂದ ರಾಕ್ನಲ್ಲಿ ಧ್ಯಾನ ಮಾಡಿದ ನಂತರ, ಬರೆದಿರುವ ಲೇಖನದ ಕೆಳಗೆ ಕೂಡಾ ಕಪ್ಪು ಬಣ್ಣದ ಶಾಯಿಯಿರುವ ಪೆನ್ನಿನಿಂದಲೇ ಸಹಿ ಹಾಕಿದ್ದಾರೆ.