ಇದೇನು ಜೋಕ್ಸಾ? ವಾಟ್ಸ್ಅಪ್ ನಲ್ಲಿ ಕ್ರಿಮಿನಲ್ ಕೇಸ್ ವಿಚಾರಣೆ ನಡೆಸೋಕೆ- ಸುಪ್ರಿಂಕೋರ್ಟ್ ಪ್ರಶ್ನೆ
ನೀವು ಯಾವಾಗಲಾದರೂ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಾಟ್ಸ್ ಅಪ್ ಮೂಲಕ ನಡೆಸಿರುವುದನ್ನು ಕೇಳಿದ್ದಿರಾ? ಈ ಪ್ರಶ್ನೆ ನಿಮಗೆ ಒಂದು ಕ್ಷಣ ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಇದು ನಿಜಕ್ಕೂ ಸತ್ಯದ ಸಂಗತಿ.
ನವದೆಹಲಿ:ನೀವು ಯಾವಾಗಲಾದರೂ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಕೋರ್ಟ್ ವಾಟ್ಸ್ ಅಪ್ ಮೂಲಕ ನಡೆಸಿರುವುದನ್ನು ಕೇಳಿದ್ದಿರಾ? ಈ ಪ್ರಶ್ನೆ ನಿಮಗೆ ಒಂದು ಕ್ಷಣ ನಿಮಗೆ ಅಚ್ಚರಿ ಮೂಡಿಸಬಹುದು. ಆದರೆ ಇದು ನಿಜಕ್ಕೂ ಸತ್ಯದ ಸಂಗತಿ.
ಈ ವಿಚಾರವಾಗಿ ಪ್ರಕರಣವೊಂದು ಸುಪ್ರೀಂ ಮೆಟ್ಟಿಲೇರಿದೆ.ಇಂತಹ ಪ್ರಕರಣವೊಂದು ಹೇಗೆ ನ್ಯಾಯಾಲಯದಲ್ಲಿ ಸಂಭವಿಸಲು ಸಾಧ್ಯ ಎನ್ನುವಂತೆ ಅಚ್ಚರಿಮೂಡಿಸಿದೆ. ಮಾಜಿ ಜಾರ್ಖಂಡ್ ಸಚಿವ ಯೋಗೇಂದ್ರ ಸಾವೋ ಮತ್ತು ಆತನ ಪತ್ನಿ 2016 ರ ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಕಳೆದ ವರ್ಷ ಅವರಿಗೆ ಕೋರ್ಟ್ ಜಾಮೀನು ನೀಡಿತ್ತು ಆದರೆ ಅವರಿಗೆ ಭೂಪಾಲ್ ನಲ್ಲಿಯೇ ಉಳಿಯಬೇಕು ಕೇವಲ ಕೋರ್ಟ್ ವಿಚಾರಣೆಗಳಿಗಾಗಿ ಮಾತ್ರ ಜಾರ್ಖಂಡ್ ಗೆ ಬರಬೇಕು ಎಂದು ಷರತ್ತನ್ನು ವಿಧಿಸಿತ್ತು.
ಈಗ ಅವರು ತಮಗೆ ಎಪ್ರಿಲ್ 19 ರಂದು ಹಜಾರಿಭಾಗ್ ಕೋರ್ಟ್ ವಾಟ್ಸಪ್ ಮೂಲಕ ವಿಚಾರಣೆಗೆ ಹಾಜರಾಗಲು ಸ್ಥಳೀಯ ನ್ಯಾಯಾಲಯ ಆದೇಶಿಸಿತ್ತು. ಆ ಮೂಲಕ ಸ್ಥಳೀಯ ನ್ಯಾಯಾಲಯ ವಾಟ್ಸಪ್ ಮೂಲಕ ವಿಚಾರಣೆ ನಡೆಸಿತ್ತು. ಈಗ ಈ ವಿಚಾರ ಸುಪ್ರೀಂ ಮುಂದಿದೆ.
ನ್ಯಾಯಮೂರ್ತಿ ಎಸ್ ಎ ಬೋಬ್ದ್ದೆ ಮತ್ತು ಎಲ್ ಎನ್ ರಾವ್ ಅವರು ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪ್ರತಿಕ್ರಿಯಿಸುತ್ತಾ" ಜಾರ್ಖಂಡ್ ದಲ್ಲೇನು ನಡೆಯುತ್ತಿದೆ.ಈ ಪ್ರಕ್ರಿಯೆಗೆ ಅವಕಾಶ ನೀಡುವಂತಿಲ್ಲ ಮತ್ತು ನ್ಯಾಯಾಂಗದ ಆಡಳಿತಕ್ಕೆ ಕೆಟ್ಟ ಹೆಸರು ತರಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮುಂದೆರೆದು ಇದ್ಯಾವ ರೀತಿ ವಿಚಾರಣೆ ಇದೇನು ಜೋಕ್ಸಾ ಎಂದು ಪೀಠ ಪ್ರಶ್ನಿಸಿದೆ.