ಕಾಂಗ್ರೆಸ್ ಜೊತೆ ಎನ್ಸಿಪಿ ವಿಲೀನಕ್ಕೆ ಶರದ್ ಪವಾರ್ ಏನಂತಾರೆ..?

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯ ಬಗ್ಗೆ ಇತ್ತೀಚಿನ ಊಹಾಪೋಹಗಳನ್ನು ಬದಿಗಿರಿಸಿದ್ದಾರೆ.  

Updated: Oct 9, 2019 , 03:02 PM IST
ಕಾಂಗ್ರೆಸ್ ಜೊತೆ ಎನ್ಸಿಪಿ ವಿಲೀನಕ್ಕೆ ಶರದ್ ಪವಾರ್ ಏನಂತಾರೆ..?

ನವದೆಹಲಿ: ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರು ಎನ್‌ಸಿಪಿ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯ ಬಗ್ಗೆ ಇತ್ತೀಚಿನ ಊಹಾಪೋಹಗಳನ್ನು ಬದಿಗಿರಿಸಿದ್ದಾರೆ.  

ಮಂಗಳವಾರದಂದು ಮಾಜಿ ಗೃಹ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಸುಶೀಲ್ ಕುಮಾರ್ ಶಿಂಧೆ ಅವರು ಎನ್‌ಸಿಪಿಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವ ಬಗ್ಗೆ ಸುಳಿವು ನೀಡಿದ್ದರಿಂದ ಮುಂಬರುವ ಭವಿಷ್ಯದಲ್ಲಿ ಎರಡು ಪಕ್ಷಗಳು ಹತ್ತಿರವಾಗುತ್ತವೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಏಕೀಕರಿಸಲ್ಪಡುತ್ತದೆ ಎಂದು ಹೇಳಿದ್ದರು.'ಅಂತಿಮವಾಗಿ, ಕಾಂಗ್ರೆಸ್ ಮತ್ತು ಎನ್‌ಸಿಪಿ, ಈ ಎರಡು ಪಕ್ಷಗಳು ಪ್ರತ್ಯೇಕವಾಗಿದ್ದರೂ, ಈ ಪಕ್ಷಗಳು ಸದ್ಯದಲ್ಲಿಯೇ ಈ ಪಕ್ಷಗಳು ಹತ್ತಿರ ಬರುತ್ತವೆ ಮತ್ತು ಕಾಂಗ್ರೆಸ್ ಏಕೀಕರಿಸಲ್ಪಡುತ್ತದೆ ಎಂದು ನಾನು ಹೇಳುತ್ತೇನೆ' ಎಂದು ಎನ್‌ಸಿಪಿ ಅಭ್ಯರ್ಥಿಯ ಪ್ರಚಾರ ಸಭೆಯಲ್ಲಿ ಶಿಂಧೆ ಉಲ್ಲೇಖಿಸಿದ್ದಾರೆ.

ಆದರೆ ಈಗ ಶಿಂಧೆ ಅವರ ಹೇಳಿಕೆಗಳನ್ನು ನಿರಾಕರಿಸಿದ ಶರದ್ ಪವಾರ್ ಅವರು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಬಗ್ಗೆ ಮಾತನಾಡಬಹುದು, ಆದರೆತಾವು ಪಕ್ಷದ ಮುಖ್ಯಸ್ಥರಾಗಿರುವುದರಿಂದ ಎನ್‌ಸಿಪಿಯನ್ನು ತಮಗಿಂತ ಯಾರೂ ಚೆನ್ನಾಗಿ ತಿಳಿದಿಲ್ಲ ಎಂದು ಹೇಳಿದರು.ಎನ್‌ಸಿಪಿ ಮತ್ತು ಕಾಂಗ್ರೆಸ್ ವಿಲೀನಗೊಳ್ಳುವ ಹಿಂದಿನ ಕಾರಣವನ್ನು ತಿಳಿಸಿದ ಶಿಂಧೆ, ರಾಜ್ಯದಲ್ಲಿ ಎರಡು ಪಕ್ಷಗಳ ಅಡಿಪಾಯವು ಈ ಹಿಂದೆ ಒಂದೇ ಆಗಿತ್ತು ಮತ್ತು ಆದ್ದರಿಂದ, ಮುಂದಿನ ದಿನಗಳಲ್ಲಿಎರಡು ಪಕ್ಷಗಳನ್ನು ವಿಲೀನಗೊಳಿಸುವುದಕ್ಕೆ ಅವಕಾಶವಿದೆ ಎಂದು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 21 ರಂದು ನಡೆಯಲಿದ್ದು, ಅದರ ಫಲಿತಾಂಶಗಳನ್ನು ಅಕ್ಟೋಬರ್ 24 ರಂದು ಪ್ರಕಟಿಸಲಾಗುವುದು