Coronavirus ಸಂಕಷ್ಟದ ಹಿನ್ನೆಲೆ ಗಂಭೀರ ನಿರ್ಣಯ ಕೈಗೊಂಡ WhatsApp

ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ನಡುವೆ ವಾಟ್ಸಾಪ್ ಮಂಗಳವಾರ ಪ್ರಮುಖ ಹೆಜ್ಜೆ ಇಟ್ಟಿದೆ. ಕರೋನಾದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟುವ ಸಲುವಾಗಿ, ಸಂದೇಶದ ಫಾರ್ವರ್ಡ್ ಮಿತಿಯನ್ನು ಒಂದಕ್ಕೆ ತಗ್ಗಿಸುತ್ತಿದೆ ಎಂದು ಕಂಪನಿ ಹೇಳಿದೆ.  

Last Updated : Apr 7, 2020, 01:49 PM IST
Coronavirus ಸಂಕಷ್ಟದ ಹಿನ್ನೆಲೆ ಗಂಭೀರ ನಿರ್ಣಯ ಕೈಗೊಂಡ WhatsApp title=

ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳ ನಡುವೆ ವಾಟ್ಸಾಪ್ ಮಂಗಳವಾರ ಪ್ರಮುಖ ಹೆಜ್ಜೆ ಇಟ್ಟಿದೆ. ಕರೋನಾದ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಗಟ್ಟುವ ಸಲುವಾಗಿ, ಸಂದೇಶದ ಫಾರ್ವರ್ಡ್ ಮಿತಿಯನ್ನು ಒಂದಕ್ಕೆ ತಗ್ಗಿಸುತ್ತಿದೆ ಎಂದು ಕಂಪನಿ ಹೇಳಿದೆ.

ಈ ಕುರಿತು ಹೇಳಿಕೆ ಪ್ರಕತಿರಿಸಿರುವ ಕಂಪನಿ ಮಂಗಳವಾರದಿಂದಲೇ ಇದು ಜಾರಿಗೆ ಬರಲಿದೆ ಎಂದು ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆಮಾಡಿರುವ ಕಂಪನಿ, "ನಾವು ನಿಮಗೆ ಒಂದು ವೈಶಿಷ್ಟ್ಯದ ಕುರಿತು ಹೇಳ ಬಯಸಿದ್ದು, ಸುಳ್ಳು ಸುದ್ದಿ ಅಥವಾ ಮಾನಿತಿ ಹರಡುವಿಕೆಯನ್ನು ತಡೆಗಟ್ಟಲು ಒಬ್ಬ ಬಳಕೆದಾರ ಒಂದು ಸಮಯದಲ್ಲಿ ಒಬ್ಬರಿಗೆ ಮಾತ್ರ ಯಾವುದೇ ಒಂದು ಸಂದೇಶವನ್ನು ರವಾನಿಸಲು ನಿರ್ಬಂಧ ವಿಧಿಸಿದ್ದೇವೆ" ಎಂದು ಹೇಳಿದೆ.  ಇದಕ್ಕೂ ಮೊದಲು ಬಳಕೆದಾರು ಏಕಕಾಲಕ್ಕೆ ಐದು ಜನರಿಗೆ ತಮ್ಮ ಸಂದೇಶವನ್ನು ರವಾನಿಸಬಹುದಿತ್ತು.

ವಾಟ್ಸಾಪ್ ಬಳಕೆದಾರರು ಸಂದೇಶವನ್ನು ಫಾರ್ವರ್ಡ್ ಮಾಡಿದಾಗ, ಸಂದೇಶದ ಮೇಲ್ಭಾಗದಲ್ಲಿ ಎರಡು ಬಾಣದ ಚಿನ್ಹೆಗಳು ಮೂಡುತ್ತವೆ, ಇದು ಸಂದೇಶವನ್ನು ಫಾರ್ವರ್ಡ್ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ವೈಶಿಷ್ಟ್ಯವನ್ನು ಕಂಪನಿಯು 2019 ರ ಜನವರಿಯಲ್ಲಿ ಬಿಡುಗಡೆ ಮಾಡಿತ್ತು.

ಈ ಕುರಿತು ತನ್ನ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿರುವ ಕಂಪನಿ, "ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದು ಫಾರ್ವರ್ಡ್ ಮೆಸೇಜ್ ಗಳ ಮೇಲೆ ವಿಧಿಸಲಾಗಿರುವ ಲೇಟೆಸ್ಟ್ ಮಿತಿಯಾಗಿದೆ" ಎಂದು ಹೇಳಿದೆ. ಸದ್ಯ ವಾಟ್ಸ್ ಆಪ್ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಪರಿಚಯಿಸುವ ತಯಾರಿಯಲ್ಲಿದೆ. ಈ ಹೊಸ ವೈಶಿಷ್ಟ್ಯದ ಅಡಿ ಫಾರ್ವರ್ಡ್ ಮಾಡಲಾಗುವ ಪ್ರತಿ ಮೆಸೇಜ್ ಪಕ್ಕದಲ್ಲಿ ಒಂದು ಮ್ಯಾಗ್ನಿಫೈಯಿಂಗ್ ಗ್ಲಾಸ್ ನೀಡಲಾಗುತ್ತಿದೆ. ಈ ವೈಶಿಷ್ಟ್ಯದ ಸಹಾಯದಿಂದ ವಾಟ್ಸ್ ಆಪ್ ಬಳಕೆದಾರರು ಆ ಸಂದೇಶದ ಇತರೆ ಸೋರ್ಸ್ ಗಳ ಮಾಹಿತಿಯನ್ನು ಪಡೆಯಬಹುದಾಗಿದೆ. ಶೀಘ್ರವೇ ಈ ವೈಶಿಷ್ಟ್ಯದ ಕುರಿತು ಹೆಚ್ಚಿನ ವಿವರಗಳನ್ನು ಪ್ರಕಟಿಸಲಾಗುವುದು ಎಂದು ಕಂಪನಿ ಹೇಳಿದೆ.

Trending News