WhatsApp ವದಂತಿಗಳಲ್ಲಿ ಶೇ.70ರಷ್ಟು ಇಳಿಕೆ, ಇತರೆ ಕಂಪನಿಗಳ ವದಂತಿಗಳ ಮೇಲೂ ಬಿದ್ದ ಕಡಿವಾಣ

ವಿಶ್ವದ ಮುಂಚೂಣಿಯಲ್ಲಿರುವ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ವದಂತಿಗಳನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ವದಂತಿಗಳ ಸಂಖ್ಯೆಯಲ್ಲಿ ಶೇ.70 ರಷ್ಟು ಇಳಿಕೆಯಾಗಿದೆ.

Last Updated : Apr 28, 2020, 12:53 PM IST
WhatsApp ವದಂತಿಗಳಲ್ಲಿ ಶೇ.70ರಷ್ಟು ಇಳಿಕೆ, ಇತರೆ ಕಂಪನಿಗಳ ವದಂತಿಗಳ ಮೇಲೂ ಬಿದ್ದ ಕಡಿವಾಣ title=

ನವದೆಹಲಿ: ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಟ್ಸ್ ಆಪ್ ಬಳಕೆ ಮಾಡುತ್ತಾರೆ ಹಾಗೂ ಹಲವಾರು ಬಾರಿ ವದಂತಿಗಳೂ ಕೂಡ ಇದೆ ಮಾಧ್ಯಮದ ಮೂಲಕ ಹರಡುತ್ತವೆ. ಈ ರೀತಿಯ ಘಟನೆಗಳು ಸತತವಾಗಿ ಬೆಳಕಿಗೆ ಬಂದ ಕಾರಣ ಸರ್ಕಾರ ವಾಟ್ಸ್ ಆಪ್ ಸಂಸ್ಥೆಯ ಜೊತೆಗೆ ಈ ಕುರಿತು ಚರ್ಚೆ ನಡೆಸಿತ್ತು. ಬಳಿಕ ವಾಟ್ಸ್ ಆಪ್ ಕೂಡ ವದಂತಿಗಳನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಇದೀಗ ಈ ಕುರಿತು ಅಪ್ಡೇಟ್ ವೊಂದು ಲಭಿಸಿದ್ದು, ಇದರಿಂದ ವದಂತಿಗಳು ಹರದುವಿಕೆಯಲ್ಲಿ ಶೇ. 70 ರಷ್ಟು ಇಳಿಕೆಯಾಗಿದೆ ಎನ್ನಲಾಗಿದೆ.

ವಾಟ್ಸ್ ಆಪ್ ತನ್ನ ಪ್ಲಾಟ್ಫಾರ್ಮ್ ಮೇಲೆ ಏಕಕಾಲಕ್ಕೆ ಕಳುಹಿಸಲಾಗುವ ಸಂದೇಶಗಳ ಸಂಖ್ಯೆಯನ್ನು 5 ಕ್ಕೆ ಇಳಿಕೆ ಮಾಡಿತ್ತು. ಇದಾದ ಬಳಿಕ ಕೊರೊನಾ ವೈರಸ್ ಮಹಾಮಾರಿ ಪಸರಿಸಿದ ಹಿನ್ನೆಲೆ ಈ ಸಂಖ್ಯೆನ್ನು ಮತ್ತೆ ಇಳಿಕೆ ಮಾಡಿ ಒಂದಕ್ಕೆ ಸೀಮಿತಗೊಳಿಸಿತ್ತು. ವಾಟ್ಸ್ ಆಪ್ ಕೈಗೊಂಡಿರುವ ಈ ಸತತ ಕ್ರಮಗಳಿಂದ ವದಂತಿಗಳನ್ನೂ ಹರಡುವ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಇದಕ್ಕೂ ಮೊದಲು ವದಂತಿಗಳು, ಸುಳ್ಳು ಸುದ್ದಿಗಳು ಸುಲಭವಾಗಿ ವೈರಲ್ ಆಗುತ್ತಿದ್ದವು ಹಾಗೂ ಇದರಿಂದ ಪೊಲೀಸರು, ಆಡಳಿತ ಮತ್ತು ಸರ್ಕಾರದ ವ್ಯವಸ್ಥೆಗಳು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದವು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ವಾಟ್ಸ್ ಆಪ್, ಸಂದೇಶಗಳ ಸಂಖ್ಯೆಯನ್ನು 5ಕ್ಕೆ ಸೀಮಿತಗೊಲಿಸಿದಾಗ ಶೇ. 25ರಷ್ಟು ಹಾಗೂ ಸಂದೇಶಗಳ ಸಂಖ್ಯೆಯನ್ನು ಒಂದಕ್ಕೆ ಸೀಮಿತಗೊಳಿಸಿದಾಗ ವದಂತಿ ಹಾಗೂ ಫೇಕ್ ನ್ಯೂಸ್ ಗಳ ಸಂಖ್ಯೆಯಲ್ಲಿ ಶೇ.70 ರಷ್ಟು ಇಳಿಕೆಯಾಗಿದೆ ಎಂದು ಹೇಳಿದೆ.

ಇದಕ್ಕೆ ಸಂಬಂಧಿಸಿಂತೆ ಹೇಳಿಕೆ ನೀಡುವ ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್, ಜನರು ಸತತವಾಗಿ ಫೇಕ್ ನ್ಯೂಸ್ ಹಾಗೂ ವದಂತಿಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತಿದ್ದಾರೆ. ಶೀಘ್ರದಲ್ಲಿಯೇ ಅಸಲಿ ಹಾಗೂ ನಕಲಿ ಮಾಹಿತಿ ಪತ್ತೆಹಚ್ಚಲು ಕಂಪ್ಯೂಟರ್ ಪ್ರೊಗ್ರಾಮ್ ವೊಂದನ್ನು ಸಿದ್ಧಪಡಿಸಲಾಗುವುದು ಎಂದಿದೆ.

ಇದೆ ತಿಂಗಳ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಸಚಿವಾಲಯ ಕೆಲ ಕಂಪನಿಗಳ ಜೊತೆಗೆ ಈ ಕುರಿತು ಮಾತುಕತೆ ನಡೆಸಿತ್ತು ಹಾಗೂ ವದಂತಿಗಳ ತಡೆಗೆ ಸಮಗ್ರ ನೀತಿ ರೂಪಿಸಲು ಸಲಹೆ ನೀಡಿತ್ತು. ಇದಾದ ಬಳಿಕ ಕಂಪನಿತಳು ನಿತ್ತ್ಯ ತಮ್ಮ ಅಂಕಿ ಅಂಶಗಳನ್ನು ಸರ್ಕಾರದೊಂದಿಗೆ ಹಂಚಿಕೊಳ್ಳುತ್ತಿವೆ.

Trending News