ಟಾಫಿ-ಚಿಪ್ಸ್ ಖರೀದಿಸಿ ಪಾಲಿಥಿನ್ ಬಳಸದಂತೆ ಅಂಗಡಿಯವರಿಗೆ ಸಲಹೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ನಗರದ ಸಾಗ್ರಾ ತಾಲ್ ನಲ್ಲಿ ಸಾರ್ವಜನಿಕ ಸಮಸ್ಯೆ ಆಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗೃಹ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಅವ್ನಿಶ್ ಅವಸ್ಥಿ ಅವರೊಂದಿಗೆ ಉಪಸ್ಥಿತರಿದ್ದರು.

Last Updated : Sep 11, 2019, 03:47 PM IST
ಟಾಫಿ-ಚಿಪ್ಸ್ ಖರೀದಿಸಿ ಪಾಲಿಥಿನ್ ಬಳಸದಂತೆ ಅಂಗಡಿಯವರಿಗೆ ಸಲಹೆ ನೀಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ title=

ಅಮೇಥಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ತಮ್ಮ ಸಂಸದೀಯ ಕ್ಷೇತ್ರದ ಅಮೇಥಿಗೆ ಎರಡು ದಿನಗಳ ಭೇಟಿ ನೀಡಿದ್ದಾರೆ. ಗೌರಿಗಂಜ್ನಲ್ಲಿರುವ ತಮ್ಮ ನಿವಾಸದ ಮುಂಭಾಗದಲ್ಲಿರುವ ಪಾನ್ ಅಂಗಡಿಯಲ್ಲಿ ಟಾಫಿ ಮತ್ತು ಚಿಪ್ಸ್ ಖರೀದಿಸಿದ ಸ್ಮೃತಿ ಇರಾನಿ, ಬಳಿಕ ಅಂಗಡಿಯವರೊಂದಿಗೆ ಮಾತನಾಡಿ ಪಾಲಿಥಿನ್ ಬಳಸದಂತೆ ಸಲಹೆ ನೀಡಿದರು.

ಅಲ್ಲಿಂದ ಬಳಿಕ ನಗರದ ಸಗ್ರಾ ತಾಲ್ ತಲುಪಿದ ಸಚಿವರು ಅಲ್ಲಿ ಪರಿಶೀಲನೆ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಗೃಹ ಹೆಚ್ಚುವರಿ ಮುಖ್ಯ ಪ್ರಧಾನ ಕಾರ್ಯದರ್ಶಿ ಅವ್ನಿಶ್ ಅವಸ್ಥಿ ಅವರೊಂದಿಗೆ ಉಪಸ್ಥಿತರಿದ್ದರು.

ಸ್ಮೃತಿ ಇರಾನಿ ಇಂದು ತಮ್ಮ ಸಂಸದೀಯ ಕ್ಷೇತ್ರದ ಅಮೇಥಿಯ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಈ ಸಮಯದಲ್ಲಿ ಅವರು ಅನೇಕ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಕೇಂದ್ರ ಸಚಿವರು ಸೇನಾ ಮುಖ್ಯಸ್ಥ, ಡಿಆರ್‌ಎಂ ಉತ್ತರ ರೈಲ್ವೆ ಮತ್ತು ಗೃಹ ಮತ್ತು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಸಿ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ. 

Trending News