Viral Video: ಚಲಿಸುತ್ತಿದ್ದ ಟ್ರಕ್ ಟಯರ್ ಕೆಳಗೆ ಬೈಕ್ ಚಾಲಕನ ತಲೆ, ಮುಂದೇನಾಯ್ತು!

ಪುಣೆಯಲ್ಲಿ ಕೆಲವರು ಹೆಲ್ಮೆಟ್ ಅನ್ನು ಸುಟ್ಟು ಅದರ ಅಂತಿಮ ಸಂಸ್ಕಾರ ಮಾಡಿದರು. ಹೆಲ್ಮೆಟ್ ಗಳಿಂದ ಯಾವುದೇ ಉಪಯೋಗವಿಲ್ಲ ಎಂದು ಹೇಳಿದ್ದಾರೆ.

Last Updated : Jan 14, 2019, 01:13 PM IST
Viral Video: ಚಲಿಸುತ್ತಿದ್ದ ಟ್ರಕ್ ಟಯರ್ ಕೆಳಗೆ ಬೈಕ್ ಚಾಲಕನ ತಲೆ, ಮುಂದೇನಾಯ್ತು! title=
File Image

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಈ ದಿನಗಳಲ್ಲಿ ಒಂದು ವಿಷಯ ಚರ್ಚೆಯ ವಿಷಯವಾಗಿದೆ. ಅದರಲ್ಲಿ ಓರ್ವ ಬೈಕ್ ಸವಾರ ಟ್ರಕ್ ಪಕ್ಕ ತೆರಳುವ ಸಂದರ್ಭದಲ್ಲಿ ಚಲಿಸುತ್ತಿದ್ದ ಟ್ರಕ್ ಟಯರ್ ಕೆಳಗೆ ಬೈಕ್ ಚಾಲಕನ ತಲೆ ಹೋಗುತ್ತದೆ. ಆದರೆ ಆಶ್ಚರ್ಯಕರವಾಗಿ ಆತ ಬದುಕುಳಿಯುತ್ತಾನೆ. 

ವಾಸ್ತವವಾಗಿ, ಇತ್ತೀಚಿಗೆ ಪುಣೆಯಲ್ಲಿ ಕೆಲವರು ಹೆಲ್ಮೆಟ್ ಅನ್ನು ಸುಟ್ಟು ಅದರ ಅಂತಿಮ ಸಂಸ್ಕಾರ ಮಾಡಿದರು. ಹೆಲ್ಮೆಟ್ ಗಳಿಂದ ಯಾವುದೇ ಉಪಯೋಗವಿಲ್ಲ ಅಥವಾ ಹೆಲ್ಮೆಟ್ ಯಾವುದೇ ರೀತಿಯ ದುರ್ಘಟನೆಯಿಂದ ನಿಮ್ಮನ್ನು ರಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.

ಭಾರತದಲ್ಲಿ ಪ್ರತಿ ವರ್ಷ, ಸಾವಿರಾರು ಜನರು ಹೆಲ್ಮೆಟ್ ಧರಿಸಿಯೂ ಕೂಡ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದು ಕೊಂಡಿದ್ದಾರೆ. ಆದರೂ ಆಡಳಿತ ಮತ್ತು ಸರ್ಕಾರ ಹೆಲ್ಮೆಟ್ ಧರಿಸಳು ಹೇಳುತ್ತಲೇ ಇರುತ್ತದೆ. ಹೆಲ್ಮೆಟ್ ಜೀವ ಉಳಿಸದಿದ್ದರೂ ಅದನ್ನು ಧರಿಸಿ ಪ್ರಯೋಜನವೇನು ಎಂಬುದು ಹಲವರ ಪ್ರಶ್ನೆಯಾಗಿದೆ.

ಈ ವೈರಲ್ ವೀಡಿಯೊದಲ್ಲಿ ಬೈಕ್ ಚಾಲಕ ಟ್ರಕ್ ಹಿಂದಿಕ್ಕಿ ಮುಂದೆ ಸಾಗಲು ಪ್ರಯತ್ನಿಸುತ್ತಿರುವ ಕೆಳಗೆ ಬೀಳುತ್ತಾರೆ. ಆ ಸಮಯದಲ್ಲಿ ಆತನ ತಲೆ ಟಯರ್ ಕೆಳಗೆ ಸಿಲುಕುತ್ತದೆ.  ಟ್ರಕ್ ಬೈಕ್ ಸವಾರನ ಮೇಲೆ ಹೇಗೆ ಚಲಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಕಾಣಬಹುದು. ಬೈಕ್ ಸವಾರ ಸಾವನ್ನಪ್ಪಿದ್ದಾರೆ ಎಂದು ಅಲ್ಲಿದ್ದ ಜನರು ಭಾವಿಸುತ್ತಾರೆ. ಆದರೆ ಆತ ಜೀವಂತವಾಗಿ ಎದ್ದು ಕೂರುತ್ತಾನೆ. ಅದನ್ನು ಕಂಡು ಅಲ್ಲಿದ್ದ ಪ್ರತಿಯೊಬ್ಬರಿಗೂ ಗಾಬರಿಯಾಗುತ್ತದೆ. ಅದೇ ಸಮಯದಲ್ಲಿ, ಕ್ಯಾಮರಾದಲ್ಲಿ ಈ ಸಂಪೂರ್ಣ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಘಟನೆಯಲ್ಲಿ ಯುವಕನ ಹೆಲ್ಮೆಟ್ ಸಂಪೂರ್ಣವಾಗಿ ಮುರಿದು ಹೋಗಿದೆ, ಆದರೆ ಆತನಿಗೆ ಯಾವುದೇ ತೊಂದರೆಯಾಗಿಲ್ಲ.

ಘಟನೆ ಬಳಿಕ ಐಪಿಎಸ್ ಅಧಿಕಾರಿ ರೋಶನ್ ತಿಲಕ ಅವರ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.  ಈ ವಿಡಿಯೋದ ಮೂಲಕ, ಯಾವಾಗಲೂ ಅಲ್ಲ, ಆದರೆ ಅನೇಕ ಬಾರಿ ಹೆಲ್ಮೆಟ್ ನಮಗೆ ಸಂಜೀವನಿಯಂತೆಯೇ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮನ್ನು ಅಪಾಯಗಳಿಂದ ರಕ್ಷಿಸುತ್ತದೆ ಎಂದು ತಿಲಕ್ ಹೇಳಿದ್ದಾರೆ. 

ತಿಲಕ್ 2013ರ ಬ್ಯಾಚ್ ನ ಐಪಿಎಸ್ ಅಧಿಕಾರಿ, ಪ್ರಸ್ತುತ ನಾಗ್ಪುರ ಟ್ರಾಫಿಕ್ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಟ್ವಿಟ್ಟರ್ನಲ್ಲಿ ಈ ವೀಡಿಯೊ ಹಂಚಿಕೊಂಡ ನಂತರ ಈ ವಿಡಿಯೋ 85,000 ರೀಟ್ವೀಟ್ ಆಗಿದೆ. 186 ಲೈಕ್ಸ್ ಪಡೆದಿದೆ. ಹೆಲ್ಮೆಟ್ಗಳ ಬಗ್ಗೆ ಜಾಗೃತಿ ಮೂಡಿಸಲು DCP ತಿಲಕ್ ಅವರ ಈ ವಿಡಿಯೋವನ್ನು ಬಹಳಷ್ಟು ಜನರನ್ನು ಹಂಚಿಕೊಳ್ಳುತ್ತಿದ್ದಾರೆ.

Trending News