100 ಸ್ಮಾರ್ಟ್ ಸಿಟಿಗಳು ಯಾವಾಗ ನಿರ್ಮಾಣವಾಗಲಿವೆ ಎಂದು ಬಿಜೆಪಿ ಸಂಸದರೇ ಕೇಳಿದಾಗ...
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ದೇಶದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವ ಯೋಜನೆ ಬೆಳಕಿಗೆ ಬಂದಿದೆ.
ನವದೆಹಲಿ: ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ದೇಶದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಮಾಡುವ ಯೋಜನೆ ಘೋಷಿಸಿತ್ತು. ಈ ವರ್ಷದ ಬಜೆಟ್‌ನಲ್ಲಿ 5 ಹೊಸ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿದೆ. ಇನ್ನು ಗುರುವಾರ ಬಿಜೆಪಿ ಸಂಸದರೊಬ್ಬರು 100 ಸ್ಮಾರ್ಟ್ ಸಿಟಿಗಳು ಯಾವಾಗ ಸಿದ್ಧವಾಗುತ್ತವೆ ಎಂದು ಲೋಕಸಭೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ್ದು, ಸರ್ಕಾರ ಅದಕ್ಕೆ ಈ ಉತ್ತರ ನೀಡಿದೆ.
ವಾಸ್ತವವಾಗಿ, ಬಿಜೆಪಿ ಸಂಸದರಾದ ದಿಯಾ ಕುಮಾರಿ ಲೋಕಸಭೆಯಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರ ಮುಂದಿನ ಐದು ವರ್ಷಗಳಲ್ಲಿ ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದೆ.
ಸಂಸತ್ ಸದಸ್ಯರಾದ ದಿಯಾ ಕುಮಾರಿ ಗುರುವಾರ ಸ್ಮಾರ್ಟ್ ಸಿಟಿಗೆ ಎಷ್ಟು ಬಜೆಟ್ ಹಂಚಿಕೆ ಮಾಡಲಾಗಿದೆ ಮತ್ತು ಯಾವಾಗ ಸ್ಮಾರ್ಟ್ ಸಿಟಿಯನ್ನು ತಯಾರಿಸಲಾಗುತ್ತದೆ? ಎಂದೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಕೇಳಿದರು.
ಈ ಕುರಿತು ವಿವರಣೆ ನೀಡಿದ ರಾಜ್ಯ ಸಚಿವರು 2016 ರ ಜನವರಿಯಿಂದ 2018 ರ ಜೂನ್ ವರೆಗೆ ನೂರು ನಗರಗಳನ್ನು ಸ್ಮಾರ್ಟ್ ಸಿಟಿಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಐದು ವರ್ಷಗಳಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಲು ಐದು ನಗರಗಳಲ್ಲಿ 48,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧತೆ ನಡೆಸಲಾಗಿದೆ. ಪ್ರತಿ ನಗರಕ್ಕೆ ಐನೂರು ಕೋಟಿ ರೂಪಾಯಿ ನೀಡಲು ಉದ್ದೇಶಿಸಲಾಗಿದೆ. ಅನುಗುಣವಾದ ಮೊತ್ತವನ್ನು ಸಂಬಂಧಪಟ್ಟ ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನೀಡುತ್ತವೆ. ಸ್ಮಾರ್ಟ್ ಸಿಟಿಯಲ್ಲಿ ಆಯ್ಕೆಯಾದ ದಿನಾಂಕದಿಂದ ಮುಂದಿನ ಐದು ವರ್ಷಗಳ ನಡುವೆ ನಗರಗಳಿಗೆ ಸಂಬಂಧಿಸಿದ ಅಭಿವೃದ್ಧಿ ಪ್ರಸ್ತಾಪಗಳನ್ನು ಹಾಕುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.
ಲಕ್ನೋ, ಕಾನ್ಪುರ್, ಅಲಹಾಬಾದ್, ಅಲಿಗಢ, ಝಾನ್ಸಿ, ಬರೇಲಿ, ಭುವನೇಶ್ವರ, ಅಮೃತಸರ, ಧರ್ಮಶಾಲಾ, ಚಂಡೀಗಢ, ಜೈಪುರ, ಸೂರತ್, ಅಹಮದಾಬಾದ್, ಜಬಲ್ಪುರ್, ನಾಗ್ಪುರ, ನಾಸಿಕ್, ರಾಜ್‌ಕೋಟ್, ಪಾಟ್ನಾ ಇತ್ಯಾದಿಗಳು ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿವೆ ಎಂದು ಮಾಹಿತಿ ನೀಡಿದರು.