ಮೋದಿಜಿ ಸೈನಿಕರ ಹತ್ಯೆ ನಿಮ್ಮ ಪ್ರಜ್ಞೆಗೆ ತಟ್ಟಿಲ್ಲವೇ? ನಿಮ್ಮ 56 ಇಂಚಿನ ಎದೆ ಎಲ್ಲಿದೆ? "- ರಣದೀಪ್ ಸುರ್ಜೆವಾಲಾ

ಬಿಎಸ್ಎಫ್ ಸೈನಿಕ ನರೇಂದ್ರ ಸಿಂಗ್ರನ್ನು ಪಾಕಿಸ್ತಾನಿ ಪಡೆಗಳು ಹತ್ಯೆಗೈದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Updated: Sep 20, 2018 , 03:22 PM IST
 ಮೋದಿಜಿ ಸೈನಿಕರ ಹತ್ಯೆ ನಿಮ್ಮ ಪ್ರಜ್ಞೆಗೆ ತಟ್ಟಿಲ್ಲವೇ? ನಿಮ್ಮ 56 ಇಂಚಿನ ಎದೆ ಎಲ್ಲಿದೆ? "- ರಣದೀಪ್ ಸುರ್ಜೆವಾಲಾ

ನವದೆಹಲಿ: ಬಿಎಸ್ಎಫ್ ಸೈನಿಕ ನರೇಂದ್ರ ಸಿಂಗ್ರನ್ನು ಪಾಕಿಸ್ತಾನಿ ಪಡೆಗಳು ಹತ್ಯೆಗೈದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಎನ್ಐಗೆ ಮಾತನಾಡಿದ ಸುರ್ಜ್ವಾಲಾ, "ಮೊದಲು ಹೆಮ್ರಾಜ್, ಈಗ ನರೇಂದ್ರ ಸಿಂಗ್ ಪಾಕಿಸ್ತಾನದಿಂದ ಚಿತ್ರಹಿಂಸೆಗೊಳಪಟ್ಟು ಕೊಲೆಗೀಡಾಗಿದ್ದಾರೆ ಸೈನಿಕರು ನಮ್ಮ ದೇಶದ ಆತ್ಮ ಇದ್ದ ಹಾಗೆ ಇಂತಹ ನಮ್ಮ ದೇಶದ ಆತ್ಮವನ್ನು ಒಂಬತ್ತು ಗಂಟೆಗಳ ಕಾಲ ಚಿತ್ರಹಿಂಸೆಗೆ ಒಳಪಡಿಸಲಾಯಿತು. ನಿಮ್ಮ ಮನಸ್ಸಾಕ್ಷಿ ಇದು ತಟ್ಟಿಲ್ಲವೇ ಮೋದಿ ಜಿ? ನಿಮ್ಮ 56 ಇಂಚಿನ ಎದೆಯ ಎಲ್ಲಿದೆ? " ಎಂದು ಸರ್ಕಾರದ ಮೌನವನ್ನು ಖಂಡಿಸಿದ್ದಾರೆ

ಜಮ್ಮುವಿನ ರಾಮಗಢ ವಲಯದಲ್ಲಿ ಸೆಪ್ಟೆಂಬರ್ 18 ರಂದು ಬಿಎಸ್ಎಫ್ ಹೆಡ್ ಕಾಸ್ಟೇಬಲ್ ಕಾಣೆಯಾದ ನಂತರ ಬುಧುವಾರದಂದು ಪಾಕ್ ಸೈನಿಕರು ಭಾರತದ ಬಿಎಸ್ಎಫ್ ಯೋಧನನ್ನು ಹತ್ಯೆಗೈದಿದ್ದವು.ಈ ಹಿನ್ನಲೆಯಲ್ಲಿ ಈಗ ಸುರ್ಜೆವಾಲಾ ಮೋದಿ ಸರ್ಕಾರದ ವೈಪಲ್ಯಕ್ಕೆ  ಕಿಡಿಕಾರಿದ್ದಾರೆ.

ಕಳೆದ ವರ್ಷ ಪಾಕಿಸ್ತಾನದ ಪಡೆಗಳು ಇಬ್ಬರು ಭಾರತೀಯ ಯೋಧರನ್ನು ಕೃಷ್ಣ ಘತಿ ವಲಯದ ನಿಯಂತ್ರಣ ರೇಖೆಯಲ್ಲಿ ಕೊಂದಿದ್ದವು.ಮೃತ ಸೈನಿಕರನ್ನು ಕಿರಿಯ ನಿಯೋಜಿತ ಅಧಿಕಾರಿ (ಜೆ.ಸಿ.ಓ) ನಾಯಿಬ್ ಸುಬೇದಾರ್ ಪರಮಜಿತ್ ಸಿಂಗ್ ಆರ್ಎಸ್ಎಸ್ 22 ಸಿಖ್ ರೆಜಿಮೆಂಟ್ ಮತ್ತು ಬಿಎಸ್ಎಫ್ನ 200 ಬೆಟಾಲಿಯನ್ನಿನ  ಹೆಡ್ ಕಾನ್ಸ್ಟೇಬಲ್ ಪ್ರೇಮ್ ಸಾಗರ್ ಎಂದು ಗುರುತಿಸಲಾಗಿದೆ.

ಜನವರಿ 2013 ರಲ್ಲಿ, ಪಾಕಿಸ್ತಾನದ ಪಡೆಗಳು ಅದೇ ವಲಯದಲ್ಲಿ ಲಾನ್ಸ್ ನಾಯಕ್ ಹೆಮ್ರಾಜ್ ಅವರ ತಲೆಯನ್ನು ಕತ್ತರಿಸಿದ್ದವು .