ಅತ್ಯಂತ ಅಗ್ಗದ ದರದ ಗೃಹಸಾಲ ಎಲ್ಲಿ ಸಿಗುತ್ತದೆ? ಇಲ್ಲಿದೆ ಟಾಪ್ 10 Bankಗಳ ಪಟ್ಟಿ

ಒಂದು ವೇಳೆ ನೀವು ಮನೆ ಖರೀದಿಸುವ ಸಿದ್ಧತೆ ನಡೆಸುತ್ತಿದ್ದರೆ ಹಾಗೂ ಅದಕ್ಕಾಗಿ ಅತ್ಯಂತ ಅಗ್ಗದ ದರದಲ್ಲಿ ಗೃಹಸಾಲ ಹುಡುಕಾಟದಲ್ಲಿದ್ದಾರೆ, ಇಂದು ನಾವು ನಿಮ್ಮ ಮುಂದೆ ಒಟ್ಟು 10 ಬ್ಯಾಂಕ್ ಗಳ ಪಟ್ಟಿಯನ್ನು ಸಾದರುಪಡಿಸುತ್ತಿದ್ದೇವೆ. ಇವುಗಳಲ್ಲಿ SBI, HDFC,ICICI BANK ಗಳಂತಹ ದಿಗ್ಗಜ ಬ್ಯಾಂಕ್ ಗಳು ಶಾಮೀಲಾಗಿವೆ.

Last Updated : Sep 6, 2020, 10:04 PM IST
  • ಅಗ್ಗದ ಗೃಹ ಸಾಲವನ್ನು ನೀಡುವ ಟಾಪ್ 10 ಬ್ಯಾಂಕುಗಳು.
  • ಅನೇಕ ಬ್ಯಾಂಕುಗಳು ಗೃಹ ಸಾಲವನ್ನು 7% ಕಡಿಮೆ ದರದಲ್ಲಿ ನೀಡುತ್ತಿವೆ.
  • ಅನೇಕ ಬ್ಯಾಂಕುಗಳು ಗೃಹ ಸಾಲ ದರವನ್ನು ಕಡಿತಗೊಲಿಸಿವೆ.
ಅತ್ಯಂತ ಅಗ್ಗದ ದರದ ಗೃಹಸಾಲ ಎಲ್ಲಿ ಸಿಗುತ್ತದೆ? ಇಲ್ಲಿದೆ ಟಾಪ್ 10 Bankಗಳ ಪಟ್ಟಿ title=

ನವದೆಹಲಿ: ಒಂದು ವೇಳೆ ನೀವು ಮನೆ ಖರೀದಿಸುವ ಸಿದ್ಧತೆ ನಡೆಸುತ್ತಿದ್ದರೆ ಹಾಗೂ ಅದಕ್ಕಾಗಿ ಅತ್ಯಂತ ಅಗ್ಗದ ದರದಲ್ಲಿ ಗೃಹಸಾಲ (Home Loan) ಹುಡುಕಾಟದಲ್ಲಿದ್ದಾರೆ, ಇಂದು ನಾವು ನಿಮ್ಮ ಮುಂದೆ ಒಟ್ಟು 10 ಬ್ಯಾಂಕ್ ಗಳ ಪಟ್ಟಿಯನ್ನು ಸಾದರುಪಡಿಸುತ್ತಿದ್ದೇವೆ. ಇವುಗಳಲ್ಲಿ SBI, HDFC,ICICI BANK ಗಳಂತಹ ದಿಗ್ಗಜ ಬ್ಯಾಂಕ್ ಗಳು ಶಾಮೀಲಾಗಿವೆ. ಇತ್ತೀಚೆಗಷ್ಟೇ ಈ ಬ್ಯಾಂಕುಗಳು ತಮ್ಮ ಬಡ್ಡಿದರಗಳನ್ನು ಕಡಿತಗೊಳಿಸಿರುವುದಾಗಿ ಘೋಷಿಸಿವೆ. ಈ ಟಾಪ್ -10 ಬ್ಯಾಂಕುಗಳ ಗೃಹಸಾಲದ ಮೇಲಿನ ಬಡ್ಡಿದರ ಶೇ.7% ಕ್ಕಿಂತ ಕಡಿಮೆಯಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ಇತ್ತೀಚಿಗೆ ಹಲವು ಬಾರಿ ತನ್ನ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಕಡಿತಗೊಳಿಸಿದೆ. ಕಳೆದ ಜುಲೈ ನಲ್ಲಿ RBI ರೆಪೋ ರೇಟ್ ಹಾಗೂ ರಿವರ್ಸ್ ರೆಪೋ ರೇಟ್ ನಲ್ಲಿ ಶೇ.0.40 ರಷ್ಟು ಕಡಿತಗೊಳಿಸಿದೆ. ಇದರಿಂದ ಹಲವು ಬ್ಯಾಂಕ್ ಗಳು ತಮ್ಮ ಬಡ್ಡಿದರದಲ್ಲಿ ಇಳಿಕೆ ಮಾಡಿವೆ. ಇಲ್ಲಿವೆ ಟಾಪ್ 10 ಬ್ಯಾಂಕ್ ಗಳ ಪಟ್ಟಿ. ಈ ಬ್ಯಾಂಕ್ ಗಳ ಗೃಹ ಸಾಲದ ಬಡ್ಡಿ ದರ ಶೇ.7 ಕ್ಕಿಂತ ಕಡಿಮೆಯಾಗಿದೆ.

ಅತ್ಯಂತ ಅಗ್ಗದ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕ್ ಗಳು
          ಬ್ಯಾಂಕ್                                    ಬಡ್ಡಿ ದರ
ಯುನಿಯನ್ ಬ್ಯಾಂಕ್                      6.85% - 7.75%  
ಬ್ಯಾಂಕ್ ಆಫ್ ಇಂಡಿಯಾ                6.85% - 7.75%
ಸೆಂಟ್ರಲ್ ಬ್ಯಾಂಕ್                           6.85% - 7.30%
ಕೆನರಾ ಬ್ಯಾಂಕ್                               6.90% - 8.90%
SBI ಬ್ಯಾಂಕ್                                   6.95% - 7.10%
HDFC ಬ್ಯಾಂಕ್                               6.95% - 7.10%
ICICI ಬ್ಯಾಂಕ್                                 6.95% - 7.60%
PNB ಬ್ಯಾಂಕ್                                  7.00% - 7.60%
ಬ್ಯಾಂಕ್ ಆಫ್ ಬರೋಡಾ                 7.25% - 8.25%
ಯುಕೋ ಬ್ಯಾಂಕ್                            7.15% - 7.25%

ಅಗ್ಗದ ದರದಲ್ಲಿ ಸಾಲ ಪಡೆಯಲು ಈ ಷರತ್ತು ಪಾಲಿಸಬೇಕು
ಸಾಲ ತೆಗೆದುಕೊಳ್ಳುವ ಮೊದಲು, ಬ್ಯಾಂಕುಗಳು ಸಾಲ ಪ್ರೊಸೆಸಿಂಗ್ ಶುಲ್ಕವನ್ನು  ಸಹ ವಿಧಿಸುತ್ತವೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕು, ಅದು ಪ್ರತಿ ಬ್ಯಾಂಕಿಗೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ಗಳು ಒಟ್ಟು ಸಾಲದ 0.25% ರಿಂದ 0.50% ವರೆಗೆ ಈ ಶುಲ್ಕ ವಿಧಿಸುತ್ತವೆ. ಅನೇಕ ಬ್ಯಾಂಕುಗಳು ಪ್ರೊಸೆಸಿಂಗ್ ಶುಲ್ಕವನ್ನು 1.25% ವರೆಗೆ ವಿಧಿಸುತ್ತವೆ ಉದಾ. ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್ ಬ್ಯಾಂಕುಗಳು. ಬ್ಯಾಂಕ್ ಗಳು ಅಗ್ಗದ ಗೃಹ ಸಾಲವನ್ನು ನೀಡುತ್ತವೆ ಆದರೆ, ಅವು ನೀಡುವ ಸಾಲ ನಿಮ್ಮ ಸಿಬಿಲ್ ಸ್ಕೋರ್ ಅವಲಂಭಿಸಿರುತ್ತದೆ. ಬ್ಯಾಂಕುಗಳು ನಿಮಗೆ ಅಗ್ಗದ ಸಾಲವನ್ನು ನೀಡಬೇಕೆಂದು ನೀವು ಬಯಸಿದರೆ, ನಿಮ್ಮ ಸಿಬಿಲ್ ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

Trending News