Aadhaar ಅಪ್ಡೇಟ್ ಮಾಡಲು ಎಲ್ಲೆಲ್ಲಿ ದಾಖಲೆ ಅವಶ್ಯಕ? ಎಲ್ಲಿಲ್ಲ? ಎಂದು ತಿಳಿಯಿರಿ

Aadhaar : ನಿಮ್ಮ ಆಧಾರ್‌ನಲ್ಲಿ ನೀವು ಹೆಸರು, ವಿಳಾಸ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ನವೀಕರಿಸಬೇಕಾದರೆ, ಇದಕ್ಕಾಗಿ ನೀವು ಮಾನ್ಯ ದಾಖಲೆಯನ್ನು ಒದಗಿಸಬೇಕು. ಸೂಕ್ತ ದಾಖಲೆ ಇಲ್ಲದಿದ್ದರೆ ಇವುಗಳ ನವೀಕರಣ ಅಸಾಧ್ಯ.

Yashaswini V Yashaswini V | Updated: Dec 11, 2019 , 11:56 AM IST
Aadhaar ಅಪ್ಡೇಟ್ ಮಾಡಲು ಎಲ್ಲೆಲ್ಲಿ ದಾಖಲೆ ಅವಶ್ಯಕ? ಎಲ್ಲಿಲ್ಲ? ಎಂದು ತಿಳಿಯಿರಿ

ನವದೆಹಲಿ: ಎಲ್ಲರೂ ಸ್ವಂತ ಮನೆಯಲ್ಲಿರಲು ಸಾಧ್ಯವಿಲ್ಲ. ನಮ್ಮ ದೇಶದಲ್ಲಿ ಸ್ವಂತ ಮನೆ ಇರುವವರಿಗಿಂತ ಬಾಡಿಗೆ ಮನೆಯಲ್ಲಿ ಇರುವವರೇ ಹೆಚ್ಚು. ಹಲವೊಮ್ಮೆ ಸ್ವಂತ ಮನೆ ಇದ್ದರೂ ಕೆಲಸದ ಕಾರಣಕ್ಕೋ ಅಥವಾ ಇನ್ನಾವುದೋ ಕಾರಣಕ್ಕೂ ಬೇರೆ ನಗರಗಳಲ್ಲಿ ಬಾಡಿಗೆ ಮನೆಯಲ್ಲಿ ಇರಬೇಕಾದ ಸ್ಥಿತಿ ಇರುತ್ತದೆ. ಅದೇನೇ ಇರಲಿ, ಈ ರೀತಿ ನಾವು ಹಲವು ಬಾರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಶಿಫ್ಟ್ ಆಗಬೇಕಾದರೆ ವಿಳಾಸ ದಾಖಲೆ ಬಹಳ ಮುಖ್ಯ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ನವೀಕರಿಸಬೇಕು ಎಂಬುದು ಒಂದು ದೊಡ್ಡ ಸವಾಲೇ ಸರಿ. ಇದರಲ್ಲಿ ಬಹಳ ವಿಶೇಷವಾದ ದಾಖಲೆ ಆಧಾರ್ (Aadhaar). ಆಧಾರ್‌ನಲ್ಲಿ ಹಲವು ಬಗೆಯ ಬದಲಾವಣೆಗಳನ್ನು ಮಾಡಬಹುದಾದರೂ, ಅಂತಹ ಹಲವು ನವೀಕರಣಗಳು ದಾಖಲೆಗಳ ಅಗತ್ಯವಿರುತ್ತದೆ ಮತ್ತು ಅಂತಹ ಹಲವು ನವೀಕರಣಗಳಿವೆ, ಇದಕ್ಕಾಗಿ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಇದಕ್ಕಾಗಿ ನೀವು ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ.

ಈ ಅಪ್ಡೇಟ್ ಗಳಿಗಾಗಿ ಯಾವುದೇ ದಾಖಲೆ ಒದಗಿಸುವ ಅಗತ್ಯವಿಲ್ಲ:
ನಿಮ್ಮ ಆಧಾರ್‌ನಲ್ಲಿ ಫೋಟೋ, ಫಿಂಗರ್ ಪ್ರಿಂಟ್, ಐರಿಸ್ ಸ್ಕ್ಯಾನ್, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ನೀವು ನವೀಕರಿಸಬೇಕಾದಾಗ, ಇದಕ್ಕಾಗಿ ನಿಮಗೆ ಯಾವುದೇ ರೀತಿಯ ಡಾಕ್ಯುಮೆಂಟ್ ಅಗತ್ಯವಿಲ್ಲ. ಇದಕ್ಕಾಗಿ, ನಿಮ್ಮ ಆಧಾರ್ ನಕಲನ್ನು ತೆಗೆದುಕೊಂಡು ಹತ್ತಿರದ ಆಧಾರ್ ಕೇಂದ್ರ (Aadhaar Centre)ದಲ್ಲಿ ಅಪ್ಡೇಟ್ ಮಾಡಿಸಬಹುದು.

ಈ ಅಪ್ಡೇಟ್ ಗಳಿಗೆ ಡಾಕ್ಯುಮೆಂಟ್ ನೀಡಲೇಬೇಕು:
ನಿಮ್ಮ ಆಧಾರ್‌ನಲ್ಲಿ ನೀವು ಹೆಸರು, ವಿಳಾಸ ಮತ್ತು ನಿಮ್ಮ ಹುಟ್ಟಿದ ದಿನಾಂಕವನ್ನು ನವೀಕರಿಸಬೇಕಾದರೆ, ಇದಕ್ಕಾಗಿ ನೀವು ಮಾನ್ಯ ದಾಖಲೆಯನ್ನು ಒದಗಿಸಬೇಕು. ಸೂಕ್ತ ದಾಖಲೆಗಳಿಲ್ಲದಿದ್ದರೆ ನಿಮ್ಮ ಆಧಾರ್ ಅನ್ನು ನವೀಕರಿಸಲಾಗುವುದಿಲ್ಲ. 

ದಾಖಲೆ ನವೀಕರಣಕ್ಕಾಗಿ ನೀಡಬೇಕಾದ ಶುಲ್ಕ:
ನೀವು ಆಧಾರ್ ನವೀಕರಣಕ್ಕಾಗಿ ಆಧಾರ್ ಕೇಂದ್ರಕ್ಕೆ ಹೋದಾಗ, ಡೆಮೋಗ್ರೆಫಿಕ್ ಬದಲಾವಣೆಗಾಗಿ ನೀವು 50 ರೂಪಾಯಿ + ಜಿಎಸ್ಟಿ (GST) ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇದಲ್ಲದೆ, ನೀವು ಬಯೋಮೆಟ್ರಿಕ್ ನವೀಕರಣಗಳನ್ನು ಮಾಡಬೇಕಾದರೆ, 50 ರೂಪಾಯಿ + ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಆಧಾರ್ ಹುಡುಕಾಟಕ್ಕಾಗಿ (ಇ-ಕೆವೈಸಿ, ಕಲರ್ ಪ್ರಿಂಟ್ etc. ಇತ್ಯಾದಿ) 30 ರೂಪಾಯಿ + ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೊಸ ಆಧಾರ್ ಕಾರ್ಡ್ ಮಾಡಿಸುವುದು ಸಂಪೂರ್ಣವಾಗಿ ಉಚಿತವಾಗಿದೆ. ಇದಲ್ಲದೆ, ಅಗತ್ಯವಿರುವ ಬಯೋಮೆಟ್ರಿಕ್ ಅನ್ನು ಸಹ ಉಚಿತವಾಗಿ ನವೀಕರಿಸಲಾಗುತ್ತದೆ.