2 ದೇಶ ಮತ್ತು 3 ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಭಾರತದ ಏಕೈಕ ಜಿಲ್ಲೆ ಯಾವುದು?

district in India that shares borders with two countries and three states: ಭಾರತದಲ್ಲಿ ಒಟ್ಟು 28 ರಾಜ್ಯಗಳಿದ್ದು, 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವೆಲ್ಲದರಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 800. ಈ ಜಿಲ್ಲೆಗಳ ಪೈಕಿ ಒಂದು ಜಿಲ್ಲೆ ಮಾತ್ರ ದೇಶದ ಮೂರು ರಾಜ್ಯ ಹಾಗೂ ಎರಡು ವಿದೇಶಗಳ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ.

Written by - Bhavishya Shetty | Last Updated : Mar 9, 2025, 07:34 AM IST
    • ಭಾರತವು ಹಲವಾರು ಸಾರ್ವಭೌಮ ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ
    • ಭಾರತದಲ್ಲಿ ಒಟ್ಟು 28 ರಾಜ್ಯಗಳದ್ದು, 8 ಕೇಂದ್ರಾಡಳಿತ ಪ್ರದೇಶಗಳಿವೆ
    • ಎರಡು ದೇಶಗಳು ಮತ್ತು ಮೂರು ರಾಜ್ಯಗಳ ಗಡಿಯನ್ನು ಹೊಂದಿರುವ ಭಾರತದ ಏಕೈಕ ಜಿಲ್ಲೆ
2 ದೇಶ ಮತ್ತು 3 ರಾಜ್ಯಗಳ ಜೊತೆ ಗಡಿ ಹಂಚಿಕೊಂಡಿರುವ ಭಾರತದ ಏಕೈಕ ಜಿಲ್ಲೆ ಯಾವುದು?
File Photo

district in India that shares borders with two countries and three states: ಭಾರತವು ಹಲವಾರು ಸಾರ್ವಭೌಮ ರಾಷ್ಟ್ರಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ. ಚೀನಾ, ಭೂತಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ಗಳೊಂದಿಗೆ ಭೂ ಗಡಿಗಳನ್ನು ಹಂಚಿಕೊಂಡಿದೆ. ಇನ್ನು ಶ್ರೀಲಂಕಾ ರಾಮ ಸೇತು ಮೂಲಕ ಸಮುದ್ರ ಗಡಿಯನ್ನು ಮಾತ್ರ ಹಂಚಿಕೊಂಡಿದೆ. ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾದೊಂದಿಗೆ ಸಮುದ್ರ ಗಡಿಯನ್ನು ಹಂಚಿಕೊಂಡಿವೆ.

Add Zee News as a Preferred Source

ಇದನ್ನೂ ಓದಿ:  ನೀವು ಫ್ರಿಡ್ಜ್‌ನಲ್ಲಿಟ್ಟು ಕಲ್ಲಂಗಡಿ ಹಣ್ಣು ತಿಂತಿರಾ..? ಹಾಗಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡ್ಬೇಡಿ!!

ಭಾರತದಲ್ಲಿ ಒಟ್ಟು 28 ರಾಜ್ಯಗಳಿದ್ದು, 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವೆಲ್ಲದರಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ 800. ಈ ಜಿಲ್ಲೆಗಳ ಪೈಕಿ ಒಂದು ಜಿಲ್ಲೆ ಮಾತ್ರ ದೇಶದ ಮೂರು ರಾಜ್ಯ ಹಾಗೂ ಎರಡು ವಿದೇಶಗಳ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ.

ಅಂದಹಾಗೆ ಭಾರತದಲ್ಲಿ ವಿಶೇಷ ರಾಜ್ಯಗಳಿದ್ದು, ಅತಿ ಹೆಚ್ಚು ಅಂತರರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿವೆ. ಈ ರಾಜ್ಯಗಳು ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಅರುಣಾಚಲ ಪ್ರದೇಶ.

  • ಸಿಕ್ಕಿಂ - ಪೂರ್ವದಲ್ಲಿ ಭೂತಾನ್, ಉತ್ತರದಲ್ಲಿ ಚೀನಾ ಮತ್ತು ಪಶ್ಚಿಮದಲ್ಲಿ ನೇಪಾಳ.
  • ಪಶ್ಚಿಮ ಬಂಗಾಳ - ಪೂರ್ವದಲ್ಲಿ ಬಾಂಗ್ಲಾದೇಶ, ಉತ್ತರದಲ್ಲಿ ನೇಪಾಳ ಮತ್ತು ಈಶಾನ್ಯದಲ್ಲಿ ಭೂತಾನ್.
  • ಅರುಣಾಚಲ ಪ್ರದೇಶ - ಪೂರ್ವದಲ್ಲಿ ಮ್ಯಾನ್ಮಾರ್, ಉತ್ತರದಲ್ಲಿ ಚೀನಾ ಮತ್ತು ಪಶ್ಚಿಮದಲ್ಲಿ ಭೂತಾನ್.

ಇದರ ಹೊರತಾಗಿ ಎರಡು ದೇಶಗಳು ಮತ್ತು ಮೂರು ರಾಜ್ಯಗಳ ಗಡಿಯನ್ನು ಹೊಂದಿರುವ ಭಾರತದ ಏಕೈಕ ಜಿಲ್ಲೆ ಡಾರ್ಜಲಿಂಗ್. ದಕ್ಷಿಣ ಪೂರ್ವಭಾಗ ಪಶ್ಚಿಮ ಬಂಗಾಳದೊಂದಿಗೆ, ದಕ್ಷಿಣ ಪಶ್ಚಿಮ ಭಾಗ ಬಿಹಾರದ ಕಿಶನಗಂಗಾ ಜೊತೆ, ಉತ್ತರದ ದಿಕ್ಕಿನಲ್ಲಿ ಇದು ಸಿಕ್ಕಿಂ ರಾಜ್ಯದಲ್ಲಿ ಒಂದಿಷ್ಟು ಪ್ರದೇಶಗಳಲ್ಲಿ ವಿಸ್ತರಿಸಿದೆ.

ಇದನ್ನೂ ಓದಿ:  ಈ ಚಹಾ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ, ಇದನ್ನು ತಯಾರಿಸುವುದು ಹೇಗೆ ಗೊತ್ತೇ?

ಇನ್ನು ವಿದೇಶಿ ಗಡಿಗಳ ಬಗ್ಗೆ ಮಾತನಾಡುವುದುದಾದರೆ ಡಾರ್ಜಲಿಂಗ್‌ ದಕ್ಷಿಣ ದಿಕ್ಕಿನತ್ತ ಬಾಂಗ್ಲಾದೇಶದವರೆಗೆ ತನ್ನ ಪ್ರದೇಶದ ವಿಸ್ತಿರ್ಣತೆ ಹೊಂದಿದ್ದರೆ, ಉತ್ತರ ಪಶ್ಚಿಮ ದಿಕ್ಕಿನಲ್ಲಿ ನೇಪಾಳದೊಂದಿಗೆ ನಂಟನ್ನು ಹೊಂದಿದೆ. ಹೀಗೆ ಈ ಒಂದು ಜಿಲ್ಲೆ ಮೂರು ರಾಜ್ಯಗಳು ಹಾಗೂ ಎರಡು ದೇಶಗಳ ನಡುವೆ ಅಂಟಿಕೊಂಡ ದೇಶದ ಏಕೈಕ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News