Jyoti Malhotra : ಭಾರತೀಯ ಸೇನಾಪಡೆಗಳು ಪಾಕಿಸ್ತಾನಕ್ಕೆ ಸರಿಯಾಗಿಯೇ ಮಣ್ಣುಮುಕ್ಕಿಸಿವೆ. ಇನ್ನೆಂದೂ ಪಾಕ್ ನೆರೆಯ ಭಾರತವನ್ನು ಕಣ್ಣೆತ್ತಿ ಸಹ ನೋಡಲ್ಲ. ಆ ರೀತಿಯಲ್ಲಿ ಶತ್ರುವಿನ ನಡುಮುರಿದಿದೆ ಭಾರತ. ನಮ್ಮ ಯೋಧರು ಗಡಿಯಲ್ಲಿ ಪ್ರಾಣದ ಹಂಗು ತೊರೆದು ಹೋರಾಡ್ತಾ ಇರುವಾಗಲೇ, ಹರಿಯಾಣದಲ್ಲಿ ಪಾಕ್ ಪರ ಗೂಡಾಚಾರಿಕೆಯ ದೊಡ್ಡ ಜಾಲವೊಂದನ್ನೇ ಭೇದಿಸಲಾಗಿದೆ. ಇದು ಅಕ್ಷಮ್ಯ ದೇಶದ್ರೋಹದ ಕೆಲಸ. ಜುಜುಬಿ ಹಣಕ್ಕಾಗಿ ಕೆಲವರು ಸೈನ್ಯದ ರಹಸ್ಯ ಮಾಹಿತಿಗಳನ್ನು ಪಾಕ್ ಐಎಸ್‌ಐಗೆ ರವಾನಿಸಿ, ನಮಕ್ ಹರಾಮಿಗಳು ಎನಿಸಿಕೊಂಡಿದ್ದಾರೆ. ಅಂತವರನ್ನು ಸೇನೆ ಹಿಡಿದು ಕೈಕಾಲುಗಳಿಗೆ ಬೇಡಿ ಹಾಕಿ, ಶರಪಂಜರದಲ್ಲಿಟ್ಟು ಗ್ರಿಲ್ ಮಾಡುತ್ತಿದೆ. ಈ ಜಾಲದ ರೂವಾರಿಯೇ ಜ್ಯೋತಿ ಮಲ್ಹೋತ್ರಾ.
ಯಾರು ಈ ಜ್ಯೋತಿ ಮಲ್ಹೋತ್ರಾ.?
ಈಕೆ ಹರಿಯಾಣ ಯುಟ್ಯೂಬರ್. ಟ್ರಾವೆಲ್ ವಿತ್ ಜೋ ಎಂಬ ಯುಟ್ಯೂಬ್ ನಡೆಸುತ್ತಿದ್ದಾಳೆ.ಸೇನೆಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ನೀಡುವಾಗಲೇ ಸಿಕ್ಕಿಬಿದ್ದಿದ್ದಾಳೆ. ಸೇನೆ ಬೇಟೆಯಾಡಲು ಆರಂಭಿಸಿದಾಗ ಎಲ್ಲಾ ಸತ್ಯವನ್ನು ಕಕ್ಕಿ ತಪ್ಪೊಪ್ಪಿಗೆ ನೀಡಿದ್ದಾಳೆ. ಇದರ ಜೊತೆ ಅತಿ ದೊಡ್ಡ ನಮಕ್ ಹರಾಮಿಗಳ ಬೇಹುಗಾರಿಕೆ ಜಾಲ ಎಕ್ಸ್‌ಪೋಸ್ ಆಗಿದೆ.
ಇದನ್ನೂ ಓದಿ : ಹೈದರಾಬಾದ್‌ನ ಚಾರ್ ಮಿನಾರ್ ಬಳಿ ಭಾರೀ ಬೆಂಕಿ ಅವಘಡ.. 17 ಮಂದಿ ಸಾವು, ಏರುತ್ತಲೇ ಇದೆ ಗಾಯಾಳುಗಳ ಸಂಖ್ಯೆ
ಜ್ಯೋತಿ ಮಲ್ಹೋತ್ರಾ ಶಾಕಿಂಗ್ ತಪ್ಪೊಪ್ಪಿಗೆ!
ಜ್ಯೋತಿ ಮಲ್ಹೋತ್ರಾಗೆ ಭಾರತದಲ್ಲಿರುವ ಪಾಕ್ ಹೈಕಮಿಷನ್‌ನ ನಿಕಟ ನಂಟಿತ್ತು. ಈಕೆ ಪಾಕಿಸ್ತಾನ ಹೈ ಕಮಿಷನ್‌ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಾಳೆ. ಅಲ್ಲಿ ಡ್ಯಾನಿಷ್ ಎಂಬ ಪಾಕ್ ಅಧಿಕಾರಿಯ ಸಂಪರ್ಕಕ್ಕೆ ಬಂದಿದ್ದಾಳೆ. ಅಸಲಿಗೆ ಈ ಡ್ಯಾನಿಷ್, ಐಎಸ್‌ಐ ಏಜೆಂಟ್ ಆಗಿದ್ದ. ಈ ಡ್ಯಾನಿಷ್ ಎಂಬಾತನನ್ನು ಭಾರತ ಬೇಹುಗಾರಿಕೆ ಆರೋಪದ ಮೇಲೆ ದೇಶ ಬಿಟ್ಟು ಹೋಗಲು ಸೂಚಿಸಿತ್ತು. ಇಂಥಹ ಖತರ್ನಾಕ್ ಏಜೆಂಟ್‌ನ ಜೊತೆ ಜ್ಯೋತಿಗೆ ಅತೀವ ಸಲುಗೆ ಇತ್ತು. ಈತನ ಜೊತೆ ಜ್ಯೋತಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಳು. ಇಬ್ಬರು ಸೇರಿ ಬಾಲಿ ದ್ವೀಪಗಳಿಗೆ ಟೂರ್ ಹೋಗಿದ್ದು ಕೂಡಾ ಕನ್ಫರ್ಮ್ ಆಗಿದೆ.
ಈ ಡ್ಯಾನಿಷ್‌ಗೆ ಜ್ಯೋತಿ ಸೇನೆಯ ರಹಸ್ಯ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದಳು. ಅದಕ್ಕೆ ಪ್ರತಿಯಾಗಿ ಡ್ಯಾನಿಷ್, ಹಣ ಸಂದಾಯ ಮಾಡ್ತಾ ಇದ್ದ. ಕೇವಲ ಡ್ಯಾನಿಷ್ ಅಷ್ಟೇ ಅಲ್ಲ, ಸೇನೆ ಹೇಳುವ ಪ್ರಕಾರ ಈಕೆ ಪಾಕಿಸ್ತಾನದ ಹಲವು ಐಎಸ್‌ಐ ಏಜೆಂಟರ ಜೊತೆ ಸಂಬಂಧ ಹೊಂದಿದ್ದಳು. ವಾಟ್ಸ್‌ಆಪ್, ಇನ್ಸ್ಟಾ ಮೂಲಕ ಅವರಿಗೆ ಸಂದೇಶ ರವಾನೆ ಮಾಡುತ್ತಿದ್ದಳು. ಯುದ್ಧ ಸಂದರ್ಭದಲ್ಲಿ ಕೂಡಾ ಈಕೆಯಿಂದ ಸಂದೇಶ ರವಾನೆ ಆಗುತ್ತಿತ್ತು. ಈ ಎಲ್ಲಾ ಅಂಶಗಳನ್ನು ಸೇನೆ ಬಯಲಿಗೆಳೆದಿದೆ. ಜೊತೆ ಅವಳ ಯುಟ್ಯೂಬ್ ವಿಡಿಯೋಗಳ ಬಗ್ಗೆ ತನಿಖೆ ನಡೆಸುತ್ತಿದೆ. ಇದರಲ್ಲಿ ಇನ್ನಷ್ಟು ಮಾಹಿತಿಗಳು ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಪಾಕ್ ಪರವಾಗಿ ಗೂಢಚರ್ಯೆ ಕೆಲಸ ಮಾಡುತ್ತಿದ್ದ ಹರ್ಯಾಣದ ಯೂಟ್ಯೂಬರ್ ಜ್ಯೋತಿ ರಾಣಿ ಬಂಧನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.