ಆಪರೇಷನ್ ಸಿಂಧೂರ್‌ ಏರ್‌ಸ್ಟ್ರೈಕ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಮೊಹಮ್ಮದ್ ಯೂಸುಫ್ ಅಜರ್ ಯಾರು ಗೊತ್ತಾ?

Most Wanted Terrorist Killed In Operation Sindoor: ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು  ನಡೆಸಿದ ವಿಶೇಷ ಕಾರ್ಯಾಚರಣೆ ಆಪರೇಷನ್ ಸಿಂಧೂರ್‌ನಲ್ಲಿ ಕೆಲ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಅವರಲ್ಲಿ ಮೊಹಮ್ಮದ್ ಯೂಸುಫ್ ಅಜರ್ ಕೂಡ ಸಾವನ್ನಪ್ಪಿದ್ದಾನೆ. 

Written by - Yashaswini V | Last Updated : May 10, 2025, 03:01 PM IST
  • ಜೈಶ್-ಎ-ಮೊಹಮ್ಮದ್ ಸಂಘಟನೆಯ ಭಯೋತ್ಪಾದಕ ಮೊಹಮ್ಮದ್ ಯೂಸುಫ್ ಅಜರ್
  • ಮೊಹಮ್ಮದ್ ಯೂಸುಫ್ ಅಜರ್, ಮೌಲಾನಾ ಮಸೂದ್ ಅಜರ್ ನ ಸೋದರ ಮಾವ
  • ಈ ಹಿಂದೆ ಜಮ್ಮು-ಕಾಶ್ಮೀರದಲ್ಲಿ ನಡೆದಿದ್ದ ಹಲವು ಭಯೋತ್ಪಾದಕ ದಾಳಿಗಳ ರೂವಾರಿ
ಆಪರೇಷನ್ ಸಿಂಧೂರ್‌ ಏರ್‌ಸ್ಟ್ರೈಕ್‌ನಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕ ಮೊಹಮ್ಮದ್ ಯೂಸುಫ್ ಅಜರ್ ಯಾರು ಗೊತ್ತಾ?

Who is Mohammad Yusuf Azhar: ಜಮ್ಮು ಕಾಶ್ಮೀರದ ಸುಂದರ ತಾಣಗಳಲ್ಲಿ ಒಂದಾದ ಪಹಲ್ಗಾಮ್ ನಲ್ಲಿ 22 ಏಪ್ರಿಲ್ 2025ರಂದು ಸಂಭವಿಸಿದ ಭಯಾನಕ ಭಯೋತ್ಪಾದಕ ದಾಳಿಯಲ್ಲಿ ಓರ್ವ ನೇಪಾಳಿ ವ್ಯಕ್ತಿ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಮಂಜುನಾಥ್ ರಾವ್, ಬೆಂಗಳೂರಿನ ಭರತ್ ಭೂಷಣ್ ಸೇರಿದಂತೆ 26ಜನರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 07ರಂದು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK)ದಲ್ಲಿ ಏರ್‌ಸ್ಟ್ರೈಕ್‌ ನಡೆಸಿದ್ದ ಭಾರತ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಪ್ರಧಾನ ಕಚೇರಿ ಸೇರಿದಂತೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ದಾಳಿಯಲ್ಲಿ ಜೆಎಎಂ ಉಗ್ರ ಮೊಹಮ್ಮದ್ ಯೂಸುಫ್ ಅಜರ್ ಸೇರಿದಂತೆ  ಹಲವು ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. 

ಆಪರೇಷನ್ ಸಿಂಧೂರ್‌ನಲ್ಲಿ ಹತರಾದ ಐದು ಪ್ರಮುಖ ಉಗ್ರರು:
ಆಪರೇಷನ್ ಸಿಂಧೂರ್‌
ನಲ್ಲಿ ಐದು ಪ್ರಮುಖ ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಎಲ್ಇಟಿಯ ಅಬು ಜುಂದಾಲ್ ಅಲಿಯಾಸ್ ಮುದಾಸರ್ ಖಾದಿಯಾನ್ ಖಾಸ್, ಅಬು ಆಕಾಶ ಎಂದೂ ಕರೆಯಲ್ಪಡುವ ಖಾಲಿದ್, ಜೆಇಎಂನ ಹಫೀಜ್ ಮುಹಮ್ಮದ್ ಜಮೀಲ್,  ಮೊಹಮ್ಮದ್ ಯೂಸುಫ್ ಅಜರ್,  ಮೊಹಮ್ಮದ್ ಹಸನ್ ಖಾನ್ ಸೇರಿದ್ದಾರೆ. ಈ ಲೇಖನದಲ್ಲಿ 'ಮೊಹಮ್ಮದ್ ಯೂಸುಫ್ ಅಜರ್' ಯಾರು ಎಂಬ ಬಗ್ಗೆ  ತಿಳಿಯೋಣ... 

ಇದನ್ನೂ ಓದಿ- India Pakistan War Live Updates: S-400 ನಾಶದ ಬಗ್ಗೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ, ಪಾಕಿಸ್ತಾನಕ್ಕೆ ಛೀಮಾರಿ 

ಆಪರೇಷನ್ ಸಿಂಧೂರ್‌ನಲ್ಲಿ ಕೊಲ್ಲಲ್ಪಟ್ಟ 'ಮೊಹಮ್ಮದ್ ಯೂಸುಫ್ ಅಜರ್' ಯಾರು? 
ಉಸ್ತಾದ್ ಜಿ, ಮೊಹಮ್ಮದ್ ಸಲೀಂ ಅಥವಾ ಘೋಸಿ ಸಹಾಬ್ ಎಂತೆಲ್ಲಾ ಕರೆಯಲ್ಪಡುವ  ಮೊಹಮ್ಮದ್ ಯೂಸುಫ್ ಅಜರ್  ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಅಂಗಸಂಸ್ಥೆ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊದಿರುವ 'ಮೊಹಮ್ಮದ್ ಯೂಸುಫ್ ಅಜರ್' ಮೌಲಾನಾ ಮಸೂದ್ ಅಜರ್ ನ ಸೋದರ ಮಾವ.

ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್‌ನ ಹಿರಿಯ ಸದಸ್ಯನಾಗಿರುವ ಈತ ಜೆಇಎಂಗಾಗಿ ಶಸ್ತ್ರಾಸ್ತ್ರ ತರಬೇತಿಯನ್ನು ನಿರ್ವಹಿಸುತ್ತಿದ್ದ.  ಈತ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದನು. ಐಸಿ-814ರ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಹರಣ ಪ್ರಕರಣದಲ್ಲಿ ಬೇಕಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ. 

ಇದನ್ನೂ ಓದಿ- ಆಪರೇಶನ್ ಸಿಂಧೂರ್ ನಲ್ಲಿ ಹತನಾದ ಉಗ್ರ ಹಫೀದ್ ಮುಹಮ್ಮದ್ ಜಮೀಲ್ ಯಾರು? ಆತನ ಹಿನ್ನೆಲೆ ಏನು ?

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News