ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು ಗೊತ್ತೆ..? ದೇಶಕ್ಕೆ ಇವರ ಕೊಡುಗೆ ಅಪಾರ..

Air India owner : ಅಹಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತದ ನಂತರ ಅಂತರ್ಜಾಲದಲ್ಲಿ ಏರ್‌ ಇಂಡಿಯಾದ ಮಾಲೀಕರು ಯಾರು ಎನ್ನುವ ಕುರಿತು ನೆಟ್ಟಿಗರು ಹುಡುಕಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳು ಭಾರತದ ಸರ್ಕಾರದ ಅಧಿನಲ್ಲಿದ್ದ AIR India ಇದೀಗ ಖಾಸಗಿ ಸಂಸ್ಥೆಯೊಂದರ ಒಡೆತನದಲ್ಲಿದೆ..

Written by - Krishna N K | Last Updated : Jun 12, 2025, 09:18 PM IST
    • ಅಹಮದಾಬಾದ್‌ ವಿಮಾನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ.
    • ಏರ್‌ ಇಂಡಿಯಾದ ಮಾಲೀಕರು ಯಾರು ಎನ್ನುವ ಕುರಿತು ನೆಟ್ಟಿಗರು ಹುಡುಕಾಡುತ್ತಿದ್ದಾರೆ.
    • ಈ ಅಪಘಾತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪನಿಯವರು ನಿಧನರಾಗಿದ್ದಾರೆ.
ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು ಗೊತ್ತೆ..? ದೇಶಕ್ಕೆ ಇವರ ಕೊಡುಗೆ ಅಪಾರ..

Ahmedabad plane crash live news : ಅಹಮದಾಬಾದ್‌ ವಿಮಾನ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಒರ್ವ ಪ್ರಯಾಣಿಕೆ ಬದುಕುಳಿದಿದ್ದಾನೆ. ಅಲ್ಲದೆ, ಈ ಅಪಘಾತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪನಿಯವರು (Vijay Rupani death) ನಿಧನರಾಗಿದ್ದಾರೆ.

ಒಟ್ಟು 242 ಜನ ಪ್ರಯಾಣಿಕರನ್ನು ಹೊತ್ತು ಗ್ಯಾಟ್ವಿಕ್‌ಗೆ ಕಡೆ ಹೊರಟಿದ್ದ ಏರ್ ಇಂಡಿಯಾ ವಿಮಾನ (Ahmedabad plane crash) ಸರಿ ಸುಮಾರು ಮಧ್ಯಾಹ್ನ 1.39ಕ್ಕೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು. ಈ ವಿಮಾನದಲ್ಲಿ 230 ಪ್ರಯಾಣಿಕರಲ್ಲಿ 169 ಮಂದಿ ಭಾರತೀಯರು, 53 ಮಂದಿ ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್‌ ಮತ್ತು ಒಬ್ಬ ಕೆನಡಾ ಪ್ರಜೆ ಇದ್ದರು.

ಇದನ್ನೂ ಓದಿ:Vijay Rupani : ಅಹಮದಾಬಾದ್ ವಿಮಾನ ದುರಂತದಲ್ಲಿ ಮಾಜಿ ಮುಖ್ಯಮಂತ್ರಿ ನಿಧನ..!  

ಅಂದಹಾಗೆ, 1932 ರಲ್ಲಿ ಸ್ಥಾಪನೆಯಾದ ಏರ್ ಇಂಡಿಯಾ, 1953 ರಿಂದ 2022 ರವರೆಗೆ ಭಾರತ ಸರ್ಕಾರದ (AIR India TATA) ಒಡೆತನದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಮೂಹ ಸಂಸ್ಥೆ ಟಾಟಾ ಗ್ರೂಪ್‌ಗೆ (Air India owner) ಅದನ್ನು ಮಾರಿತು. ಪ್ರಸ್ತುತ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ನೋಯೆಲ್ ಟಾಟಾ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಂಪ್‌ಬೆಲ್ ವಿಲ್ಸನ್, ಏರ್ ಇಂಡಿಯಾದ ಎಂಡಿ ಮತ್ತು ಸಿಇಒ ಆಗಿದ್ದಾರೆ.   

ಇದನ್ನೂ ಓದಿ:ಮೈ ನಡುಗಿತು, ಕಣ್ಣು ಬಿಟ್ಟೆ, ಸುತ್ತಲೂ ಶವಗಳ ರಾಶಿ.. ಆ 30 ಸೆಕೆಂಡುಗಳ ಅನುಭವ ಬಿಚ್ಚಿಟ್ಟ ಪ್ರಯಾಣಿಕ..! 

ಏರ್ ಇಂಡಿಯಾವನ್ನು ಜನವರಿ 27, 2022 ರಂದು ಔಪಚಾರಿಕವಾಗಿ ಟಾಟಾ ಗ್ರೂಪ್‌ಗೆ ಭಾರತ ಸರ್ಕಾರ ಹಸ್ತಾಂತರಿಸಲಾಯಿತು. ಟಾಟಾ ಗ್ರೂಪ್ ತನ್ನ ಅಂಗಸಂಸ್ಥೆಯಾದ ಟೇಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಏರ್‌ಲೈನ್‌ನಲ್ಲಿ 100% ಪಾಲನ್ನು ಪಡೆದುಕೊಂಡಿದೆ. ಅಕ್ಟೋಬರ್ 2021 ರಲ್ಲಿ ಟಾಟಾ ಗ್ರೂಪ್ ಬಿಡ್ ಗೆದ್ದ ನಂತರ ಹಸ್ತಾಂತರ ನಡೆಯಿತು.

ಇದನ್ನೂ ಓದಿ:ವಿಮಾನ ದುರಂತಕ್ಕೂ ಮುನ್ನ ಪೈಲಟ್‌ Mayday, Mayday.. ಅಂತ ಜೋರಾಗಿ ಕೂಗಿದ್ದರ ಅರ್ಥವೇನು ಗೊತ್ತೆ..?

ಏರ್ ಇಂಡಿಯಾವನ್ನು ಆರಂಭದಲ್ಲಿ ಜೆ.ಆರ್.ಡಿ. ಟಾಟಾ ಅವರು 1932 ರಲ್ಲಿ "ಟಾಟಾ ಏರ್ಲೈನ್ಸ್" ಆಗಿ ಸ್ಥಾಪಿಸಿದರು, ಆದರೆ ಇದನ್ನು 1953 ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. 2021 ರವರೆಗೆ ಸರ್ಕಾರದ ನಿಯಂತ್ರಣದಲ್ಲಿದ್ದರು. ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ 2022ರಲ್ಲಿ ಅದನ್ನು ಸ್ವಾಧೀನಪಡಿಸಿಕೊಂಡಿತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News