Jyoti Malhotra Youtuber: ಈ ಹಿಂದೆ ಪಾಕಿಸ್ತಾನಿ ಗೂಢಚಾರನೊಬ್ಬ ಸಿಕ್ಕಿಬಿದ್ದಿದ್ದಾನೆ ಎಂಬ ಸುದ್ದಿ ಬಂದಿತ್ತು. ಆ ವ್ಯಕ್ತಿ ಸೇನೆಯ ಸ್ಥಳ ಇತ್ಯಾದಿಗಳ ಬಗ್ಗೆ ಪಾಕಿಸ್ತಾನಿ ನಿರ್ವಾಹಕರಿಗೆ ಮಾಹಿತಿಯನ್ನು ಕಳುಹಿಸುತ್ತಿರುವುದು ತಿಳಿದು ಬಂದಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಪಾಕ್ ಪರ ಗೂಢಚರ್ಯೆ ಮಾಡುತ್ತಿದ್ದ ಕಾರಣ ಯೂಟ್ಯೂಬರ್‌ಗಳನ್ನು ಬಂಧಿಸಲಾಗುತ್ತಿದೆ. ಪಾಕಿಸ್ತಾನ ಭಾರತದ ಯೂಟ್ಯೂಬರ್‌ಗಳನ್ನು ಗೂಢಚರ್ಯೆಗೆ ಯಾವ ಕಾರಣಕ್ಕಾಗಿ ಬಳಸಿಕೊಂಡಿತ್ತು. ಇವರ ಮೂಲಕ ಏನನ್ನು ಸಾಧಿಸಲು ಹೊರಟಿತ್ತು ಎನ್ನುವುದು ಸದ್ಯ ಎಲ್ಲರ ಮನಸ್ಸಿನಲ್ಲಿ ಹುಟ್ಟಿರುವ ಪ್ರಶ್ನೆ.
ಯೂಟ್ಯೂಬರ್‌ಗಳಿಂದ ಪಾಕಿಸ್ತಾನಕ್ಕೆ ಏನು ಲಾಭ ? :
ಆಪರೇಷನ್ ಸಿಂಧೂರ್ ಅಡಿಯಲ್ಲಿ, ಭಾರತೀಯ ಕ್ಷಿಪಣಿಗಳು ಮತ್ತು ಕಾಮಿಕೇಜ್ ಡ್ರೋನ್‌ಗಳು ಪಾಕಿಸ್ತಾನದ ಒಳಹೊಕ್ಕು ವಿನಾಶವನ್ನು ಸೃಷ್ಟಿಸಿದವು. ಇದರಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು. ನಂತರ ಪಾಕ್ ಪರ ಗೂಢಚರ್ಯೆ ಮಾಡುತ್ತಿದ್ದ ಒಬ್ಬೊಬ್ಬರ ಹೆಸರು ಬೆಳಕಿಗೆ ಬಂದಿದೆ. ಗಡಿಯಲ್ಲಿ ನಡೆಯುತ್ತಿರುವ ಯುದ್ದಕ್ಕೆ ವಿರಾಮ ಬಿದ್ದಿದೆಯಾದರೂ, ಇದು ಗುಂಡುಗಳು ಮತ್ತು ಬಾಂಬ್‌ಗಳಿಲ್ಲದೆ ನಡೆಯುತ್ತಿರುವ ಒಂದು ರೀತಿಯ ಯುದ್ಧ. ಇಲ್ಲಿ ನಮ್ಮವರೇ ನಮ್ಮ ವಿರುದ್ದ ಹೋರಾಟಕ್ಕೆ ಇಳಿದಿದ್ದಾರೆ.
ಇದನ್ನೂ ಓದಿ : ಪಾಕ್ ಗೆ ಗೌಪ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಉತ್ತರಪ್ರದೇಶದ ವ್ಯಕ್ತಿ ಬಂಧನ
ಮೊದಲನೆಯದಾಗಿ, ಹರಿಯಾಣದ ಹಿಸಾರ್ ನಿವಾಸಿ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಬಂಧನದ ನಂತರ, ಒಡಿಶಾದ ಪುರಿಯ ನಿವಾಸಿ ಪ್ರಿಯಾಂಕಾ ಸೇನಾಪತಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಇಬ್ಬರ ನಡುವೆ ಆಳವಾದ ಸ್ನೇಹವಿತ್ತು. ಈಗ ಏಳುವ ಪ್ರಶ್ನೆ ಈ ಯೂಟ್ಯೂಬರ್ ಗಳನ್ನು ಪಾಕಿಸ್ತಾನ ಯಾವ ಉದ್ದೇಶಕ್ಕಾಗಿ ಬಳಸಿಕೊಂಡಿದೆ ಎನ್ನುವುದು. ಇಲ್ಲಿ ಪಾಕಿಸ್ತಾನದ ಉದ್ದೇಶ ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವೀಡಿಯೊಗಳು ಲಭ್ಯವಿದ್ದು, ಸ್ವಲ್ಪ ಗಮನಹರಿಸಿದರೆ, ಪಾಕಿಸ್ತಾನದ ಸಂಪೂರ್ಣ ಪಿತೂರಿ ಸ್ಪಷ್ಟವಾಗುತ್ತದೆ.
ಇದೊಂದು ವಿಡಿಯೋ ಸಾಕು :
ಪಹಲ್ಗಾಮ್ ದಾಳಿಯ ಕುರಿತಾದ ವೀಡಿಯೊದಲ್ಲಿ ಜ್ಯೋತಿ ಮಲ್ಹೋತ್ರಾ ಕೆಲವು ಮಾತುಗಳನ್ನು ಹೇಳಿದ್ದಾರೆ. 'ಇದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಪ್ರವಾಸಕ್ಕೆ ಹೋಗುವ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ.ಪ್ರವಾಸಕ್ಕೆ ಹೋಗುವವರು ಇಲ್ಲಿ ಜಾಗರೂಕರಾಗಿರಬೇಕು.ಈ ಘಟನೆ ನಮ್ಮಿಂದಲೇ ನಡೆದಿದ್ದು, ನಾವೇ ತಪ್ಪಿತಸ್ಥರು, ಎಂದು ವೀಡಿಯೊ ತುಂಬಾ ಹೇಳಿದ್ದಾರೆ. ಅಂದರೆ ಈ ವಿಡಿಯೋದಲ್ಲಿ ಪಹಲ್ಗಾಮ್ ಘಟನೆಗೆ ನಾಗರಿಕರೇ ಕಾರಣ, ಅಥವಾ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎನ್ನುವ ಅರ್ಥದ ಮಾತುಗಳನ್ನೇ ಆಡುತ್ತಾರೆ. ಇದನ್ನು ಹೊರತಾಗಿ ಎಲ್ಲಿಯೂ ಪಾಕಿಸ್ತಾನ ಮತ್ತು ಭಯೋತ್ಪಾದಕರ ಹೆಸರುಗಳನ್ನು ತೆಗೆದುಕೊಂಡಿಲ್ಲ.
ये देशद्रोही पहलगाम हमले पर ज्ञान बांट रही थी...
कितनी बड़ी धोखेबाज निकली, इसे फांसी की सजा होनी चाहिए #JyotiMalhotraYoutuber#PahalgamAttackpic.twitter.com/wKxRukwHxK
— Dr. Arunesh Yadav (डॉ अरुणेश यादव) (@YadavArunesh) May 19, 2025
ಇದನ್ನೂ ಓದಿ : Charminar fire accident : ಚಾರ್ಮಿನಾರ್‌ನಲ್ಲಿ ಭೀಕರ ಅಗ್ನಿ ಅವಘಡ..! ಹಲವು ಜನರಿಗೆ ಗಾಯ, 17 ಜನ ಸಾವು
ಈ ಇನ್ಫ್ಲ್ಯುಯೆನ್ಸರ್ ಗಳಿಂದ ಪಾಕಿಸ್ತಾನ ಬಯಸುವುದು ಇದನ್ನೇ. ಹಣ, ಖ್ಯಾತಿ ಮತ್ತು ದುರಾಸೆಗೆ ಬಿದ್ದ ಈ ಯೂಟ್ಯೂಬರ್ ಗಳು ಭಾರತದಲ್ಲಿಯೇ ಇದ್ದುಕೊಂಡು ಪಾಕಿಸ್ತಾನ ಪರ ಕೆಲಸ ಮಾಡಬೇಕು ಎನ್ನುವುದೇ ಪಾಕ್ ಉದ್ದೇಶ. ಅಂದರೆ ಭಯೋತ್ಪಾದನಾ ದಾಳಿ ಆದಾಗ ಅಥವಾ ಅಂಥಹ ಯಾವುದೇ ಘಟನೆ ಸಂಭವಿಸಿದಾಗ ಇವರು YouTube ನಲ್ಲಿ ತಮ್ಮದೇ ಸರ್ಕಾರ, ಭದ್ರತಾ ಪಡೆಗಳು ಮತ್ತು ತಮ್ಮದೇ ಆದ ಜನರನ್ನು ದೂಷಿಸಲು ಪ್ರಾರಂಭಿಸುತ್ತಾರೆ. ಈ ಇನ್ಫ್ಲ್ಯುಯೆನ್ಸರ್ ಗಳು ಹೇಳುವ ಮಾತನ್ನು ಹೇಳುತ್ತಿದ್ದಾಗ ಸಾಮಾನ್ಯ ಜನರು ಕೂಡಾ ಇದರಲ್ಲಿ ಪಾಕಿಸ್ತಾನ ಮಾಡುವುದೇನಿದೆ ಎನ್ನುವ ರೀತಿಯಲ್ಲಿಯೇ ಯೋಚಿಸಲು ಆರಂಭಿಸುತ್ತಾರೆ. ಇದು ಒಂದು ರೀತಿಯಲ್ಲಿ ಜನರನ್ನು ಬ್ರೈನ್‌ವಾಶ್ ಮಾಡುವ ತಂತ್ರ.
ಯೂಟ್ಯೂಬರ್ ಜ್ಯೋತಿ ಒಬ್ಬ ಟ್ರಾವೆಲ್ ವ್ಲಾಗರ್. ಅವರು ಹಲವಾರು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಮತ್ತು ಪಾಕಿಸ್ತಾನಿ ಅಧಿಕಾರಿಗಳನ್ನು ಸಹ ಭೇಟಿ ಮಾಡಿದ್ದಾರೆ. ಜ್ಯೋತಿ ಮಲ್ಹೋತ್ರಾ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಅಧಿಕಾರಿಯೊಬ್ಬರನ್ನು ಭೇಟಿಯಾಗಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ದಾಳಿಗೂ ಮುನ್ನ ಜ್ಯೋತಿ ಮಲ್ಹೊತ್ರಾ ಪಹಲ್ಗಾಮ್‌ಗೆ ಏಕೆ ಭೇಟಿ ನೀಡಿದ್ದಳು? ಇದರ ಹಿಂದೆಯೂ ಪಾಕಿಸ್ತಾನ ಪಿತೂರಿ ಇತ್ತೇ ಎನ್ನುವುದು ಕೂಡಾ ಸಂದೇಹ ಮೂಡಿಸಿದೆ.
ಪ್ರಚಾರ ಹರಡುವುದೇ ಉದ್ದೇಶ :
ಪಾಕಿಸ್ತಾನಿ ಏಜೆನ್ಸಿಯು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಅಸೆಟ್ ಆಗಿ ಸಿದ್ಧಪಡಿಸುತ್ತಿತ್ತು ಎಂದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ. ಜ್ಯೋತಿ ಚೀನಾಗೂ ಭೇಟಿ ನೀಡಿದ್ದಾಳೆ ಎಂದು ಪೊಲೀಸರು ಹೇಳುತ್ತಾರೆ. ಅವರು ಪಾಕಿಸ್ತಾನ ಗುಪ್ತಚರ ಕಾರ್ಯಾಚರಣೆಗಳೊಂದಿಗೆ (PIO) ನಿರಂತರ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ನಂಬಿದ್ದಾರೆ. ಪಾಕಿಸ್ತಾನಿ ಏಜೆನ್ಸಿಯು ತನ್ನ ಪರ ಪ್ರಚಾರ ಮಾಡಲು, ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಇನ್ಫ್ಲ್ಯು ಯೆನ್ಸರ್ ಗಳನ್ನು ಬಳಸಿಕೊಳ್ಳುತ್ತಿತ್ತು. ಹಿಸಾರ್‌ನ ಟ್ರಾವೆಲ್ ವ್ಲಾಗರ್ ಜ್ಯೋತಿಯ ಬಂಧನದ ನಂತರ, ಭಾರತೀಯ ಯೂಟ್ಯೂಬರ್‌ಗಳ ವಿರುದ್ಧ ಪಾಕಿಸ್ತಾನದ ದೊಡ್ಡ ಪಿತೂರಿ ಬಹಿರಂಗಗೊಂಡಿದೆ. ಭವಿಷ್ಯದಲ್ಲಿ ಇನ್ನೂ ಅನೇಕ ದೊಡ್ಡ ಇನ್ಫ್ಲ್ಯು ಯೆನ್ಸರ್ ಗಳು ತನಿಖೆಗೆ ಒಳಗಾದರೂ ಆಶ್ಚರ್ಯವಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.