close

News WrapGet Handpicked Stories from our editors directly to your mailbox

ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಕಾರಣ ಇಲ್ಲಿದೆ..!

ಕಾಂಗ್ರೆಸ್ ಪಕ್ಷದಲ್ಲಿನ ಸಂಘಟನಾ ಜವಾಬ್ದಾರಿಯನ್ನು ನಿಭಾಯಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.

Updated: Apr 26, 2019 , 03:12 PM IST
 ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಕಾರಣ ಇಲ್ಲಿದೆ..!

ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿನ ಸಂಘಟನಾ ಜವಾಬ್ದಾರಿಯನ್ನು ನಿಭಾಯಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.

ಜೈಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸ್ಯಾಮ್ ಪಿತ್ರೋಡಾ ಪ್ರಿಯಾಂಕಾ ಗಾಂಧಿ ಅವರಿಗೆ ಹಲವು ಜವಾಬ್ದಾರಿಗಳಿರುವುದರಿಂದ ಅವುಗಳನ್ನು ಪೂರೈಸಲು ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದರು.ಪತ್ರಕರ್ತರು ವಾರಣಾಸಿಯಲ್ಲಿ ಪ್ರಿಯಾಂಕಾ ಗಾಂಧಿ ಯಾಕೆ ಸ್ಪರ್ಧಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ "ಇದು ಪ್ರಿಯಾಂಕಾ ಜಿ ಅವರ ತೀರ್ಮಾನ. ಪಕ್ಷದಲ್ಲಿ ಅವರು ಬಹಳಷ್ಟು ಜವಾಬ್ದಾರಿಗಳಿವೆ ಎಂದು ಭಾವಿಸಿದ್ದರು. ಕೇವಲ ಒಂದು ಸ್ಥಾನಕ್ಕಾಗಿ ಕೇಂದ್ರೀಕರಿಸುವ ಬದಲು, ಈಗಿರುವ ಹಲವು ಜವಾಬ್ದಾರಿಗಳನ್ನು ಪೂರೈಸಲು ಅವರು ನಿರ್ಧರಿಸಿದ್ದರು. ಆದ್ದರಿಂದ ಈ ವಿಚಾರವಾಗಿ ಅಂತಿಮ ತೀರ್ಮಾನವನ್ನು ಅವರು ತೆಗೆದುಕೊಂಡರು" ಎಂದು ಪಿತ್ರೋಡಾ ತಿಳಿಸಿದರು.  

ಕಾಂಗ್ರೆಸ್ ಪಕ್ಷವು ವಾರಣಾಸಿಯಲ್ಲಿ ಮೋದಿ ವಿರುದ್ಧ ಅಜಯ್ ರೈ ಅವರ ಹೆಸರನ್ನು ಘೋಷಿಸುವ ಮೊದಲು ಪ್ರಿಯಾಂಕಾ ಗಾಂಧಿಯವರು ಸ್ಪರ್ಧಿಸುತ್ತಾರೆ ಎನ್ನುವ ಊಹಾಪೋಹಗಳು ಜಾರಿಯಲ್ಲಿದ್ದವು. ಇದಕ್ಕೆ ಪೂರಕವಾಗಿ ಅವರು ಕೂಡ ಪಕ್ಷ ನಿರ್ಧರಿಸಿದಲ್ಲಿ ತಾವು ಸ್ಪರ್ಧಿಸುವುದಾಗಿ ಹೇಳಿದ್ದರು.