)
Bengaluru
: ಮದುವೆಯಾದ ಮೊದಲ ರಾತ್ರಿ ಗಂಡ ತನ್ನ ಮೈಮುಟ್ಟಿಲ್ಲ ಅಂತಾ ಹೆಂಡತಿಯೊಬ್ಬಳು ಗಂಡನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ತನ್ನ ಮನೆಯವರಿಗೆ ವಿಷಯ ತಿಳಿಸಿ ಗಂಡನ ಮಾನವನ್ನ ಮೂರು ಕಾಸಿಗೆ ಹರಾಜು ಹಾಕಿದ್ದಾಳೆ. ಅಷ್ಟೇ ಅಲ್ಲದೇ ಕೋಟ್ಯಂತರ ರೂಪಾಯಿ ಪರಿಹಾರದ ಹಣಕ್ಕೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಡಿಮ್ಯಾಂಡ್ ಕೂಡ ಮಾಡಿದ್ದಾರೆ. ಇದರಿಂದ ರೋಸಿ ಹೋಗಿರುವ ಪತಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೇ ಈ ಘಟನೆ ನಡೆದಿದೆ. ಪ್ರವೀಣ್ ಎಂಬುವರು ಚಿಕ್ಕಮಗಳೂರು ಮೂಲದ ಯುವತಿಯನ್ನ ವಿವಾಹವಾಗಿದ್ದರು. ಮೇ 5ರಂದು ಚಿಕ್ಕಮಗಳೂರು ಜಿಲ್ಲೆಯ ತರಿಕೆರೆಯಲ್ಲಿ ಈ ಜೋಡಿಯ ಮದುವೆಯಾಗಿತ್ತು. ಮೊದಲ ರಾತ್ರಿಯಂದು ಪತ್ನಿಯನ್ನ ಮುಟ್ಟಲು ಪ್ರವೀಣ್ ಹಿಂದೇಟು ಹಾಕಿದ್ದನಂತೆ. ಹೀಗಾಗಿ ಗಂಡ ನಪುಂಸಕ ಎಂದು ಪತ್ನಿ ಗಲಾಟೆ ಮಾಡಿದ್ದಾಳೆ. ಇದೇ ಕಾರಣಕ್ಕೆ ಆಗಸ್ಟ್ 17ರಂದು ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಪ್ರವೀಣ್ ಮನೆಗೆ ನುಗ್ಗಿ ಪತ್ನಿ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಕಾರ್ಮಿಕರನ್ನು ಏಕಾಏಕಿ ಹೊರಹಾಕಿದ್ದ ಸಾಫ್ರಾನ್ ಕಂಪನಿ
ಫಸ್ಟ್ ನೈಟ್ನಲ್ಲಿ ಲೈಂಗಿಕ ಕ್ರಿಯೆಯಲ್ಲಿ ಪತಿ ಭಾಗಿಯಾಗಿಲ್ಲವೆಂದು ಆರೋಪಿಸಿ ಗಲಾಟೆ ನಡೆಸಿದ್ದಾರೆ. ಗಂಡ ನಪುಂಸಕನೆಂದು ಆರೋಪಿಸಿದ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನಂತರ ಪ್ರವೀಣ್ನಿಂದ ಕೋಟಿ ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ್ದಾರೆ. ಜೀವನಾಂಶದ ಹೆಸರಲ್ಲಿ ಪತ್ನಿ ಬರೋಬ್ಬರಿ ಎರಡು ಕೋಟಿ ಹಣಕ್ಕೆ ಡಿಮಾಂಡ್ ಮಾಡಿದ್ದಾಳೆಂದು ವರದಿಯಾಗಿದೆ.
ಈ ಬಗ್ಗೆ ಪತಿ ಪ್ರವೀಣ್ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರವೀಣ್ ನೀಡಿರುವ ದೂರು ಆಧರಿಸಿ, ಆತನ ಪತ್ನಿ ಸೇರಿದಂತೆ 10 ಮಂದಿಯ ವಿರುದ್ದ ಪೊಲೀಸರು FIR ದಾಖಲಿಸಿದ್ದಾರೆ. ಮತ್ತೊಂದೆಡೆ ಪತಿ ದೂರಿನ ಬಳಿಕ ಪತ್ನಿಯೂ ಮಹಿಳಾ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ದೂರು ಪ್ರತಿದೂರಿನ ಬಳಿಕ ಕುಟುಂಬಸ್ಥರು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ಗಣತಿ ಮಾಡುವವರು ಹೈರಾಣು..!
ಈ ವೇಳೆ ಮದುವೆ ಖರ್ಚನ್ನ ನೀಡುವಂತೆ ಪತ್ನಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮದುವೆಗೆ 65 ಲಕ್ಷ ಹಣ ಖರ್ಚು ಮಾಡಿದ್ದು, ಆ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ ಅಂತಾ ದೂರಲಾಗಿದೆ. ಕೊನೆಗೆ ಪ್ರವೀಣ್ ಕುಟುಂಬಸ್ಥರು 50 ಲಕ್ಷ ಹಣ ನೀಡಿದ್ದಾರೆ. ಸದ್ಯ ಹಣ ಪಡೆದು ಪತ್ನಿ ಕುಟುಂಬಸ್ಥರು ಹೇಳಿಕೆ ದಾಖಲಿಸಿ ಹೋಗಿದ್ದಾರೆ. ಇದೀಗ ಎರಡೂ ಕಡೆಯವರಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡು, ಪ್ರಕರಣ ಕ್ಲೋಸ್ ಮಾಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.