ಪೀರಿಯಡ್ಸ್‌ನಿಂದ ನವರಾತ್ರಿ ಪೂಜೆ ಮಿಸ್‌ ಆಯ್ತು ಅಂತಾ ಈ ಗೃಹಿಣಿ ಮಾಡಿದ್ದೇನು ಗೊತ್ತಾ?

uttar pradesh: ಋತುಚಕ್ರದ ಕಾರಣಕ್ಕೆ ನವರಾತ್ರಿ ಪೂಜೆ ತಪ್ಪಿತೆಂದು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

Written by - Puttaraj K Alur | Last Updated : Apr 13, 2025, 07:08 PM IST
  • ಪೀರಿಯಡ್ಸ್‌ನಿಂದ ನವರಾತ್ರಿ ಪೂಜೆ ಮಿಸ್‌ ಆಯ್ತು ಅಂತಾ ಗೃಹಿಣಿ ಆತ್ಮಹತ್ಯೆ
  • ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿರುವ ಆಘಾತಕಾರಿ ಘಟನೆ
  • ವಿಷ ಸೇವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಮಹಿಳೆ
ಪೀರಿಯಡ್ಸ್‌ನಿಂದ ನವರಾತ್ರಿ ಪೂಜೆ ಮಿಸ್‌ ಆಯ್ತು ಅಂತಾ ಈ ಗೃಹಿಣಿ ಮಾಡಿದ್ದೇನು ಗೊತ್ತಾ?

Uttar Pradesh: ಮಾಸಿಕ ಋತುಚಕ್ರದ (ಪೀರಿಯಡ್ಸ್‌) ವೇಳೆ ಮಹಿಳೆಯರು ಯಾವುದೇ ಪೂಜೆ ಹಾಗೂ ಶುಭ ಸಮಾರಂಭಗಳಲ್ಲಿ ಭಾಗಿಯಾಗಬಾರದೆಂಬ ನಿಯಮವಿದೆ. ಅನಾದಿ ಕಾಲದಿಂದಲೂ ಈ ನಿಯಮ ಪಾಲಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಋತುಚಕ್ರದ ಸಮಯದಲ್ಲಿ ವೇಳೆ ಮಹಿಳೆಯರು ಪೂಜೆ ಮುಂತಾದ ದೈವಿಕ ಕಾರ್ಯಗಳಲ್ಲಿ ಭಾಗಿಯಾಗುವುದಿಲ್ಲ. ಗೃಹಿಣಿಯೊಬ್ಬಳು ಪಿರೇಡ್ಸ್‌ನಿಂದ ತನಗೆ ನವರಾತ್ರಿ ಪೂಜೆ ಸಿಗಲಿಲ್ಲವೆಂದು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ನಡೆದಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನ 36 ವರ್ಷ ಪ್ರಿಯಾಂಶಾ ಸೋನಿ ಎಂದು ಗುರುತಿಸಲಾಗಿದೆ. 

Add Zee News as a Preferred Source

ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ಪ್ರಿಯಾಂಶಾಳನ್ನು ಕುಟುಂಬಸ್ಥರು ಕೂಡಲೇ ಆಸ್ಪತ್ರೆಗೆ ಸೇರಿಸಿದರಾದರೂ ಪ್ರಯೋಜನವಾಗಿಲ್ಲ. ಚಿಕಿತ್ಸೆ ಫಲಿಸದೆ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ. ಪ್ರಿಯಾಂಶಾ ತಮ್ಮ ಪತಿ ಮುಕೇಶ್ ಸೋನಿ ಹಾಗೂ ಮಕ್ಕಳಾದ ಜಾನ್ವಿ ಹಾಗೂ ಮಾನ್ವಿಯೊಂದಿಗೆ ವಾಸ ಮಾಡುತ್ತಿದ್ದರು. ಮುಕೇಶ್ ಪ್ರಕಾರ, ಪ್ರಿಯಾಂಶಾ ನವರಾತ್ರಿಗೆ ಬಹಳ ಉತ್ಸಾಹದಿಂದ ತಯಾರಿ ನಡೆಸುತ್ತಿದ್ದಳು. ದುರಾದೃಷ್ಟವಶಾತ್ ಮೊದಲ ದಿನವೇ ಅವಳಿಗೆ ಮುಟ್ಟು ಪ್ರಾರಂಭವಾಯಿತು. ಅದು ಆಕೆಗೆ ಉಪವಾಸ ಮತ್ತು ಪೂಜೆ ಮಾಡದಂತೆ ತಡೆದಿತ್ತು. ಇದರಿಂದ ದೈವಭಕ್ತೆಯಾಗಿದ್ದ ಆಕೆಯನ್ನ ಭಾವನಾತ್ಮಕವಾಗಿ ಕಂಗೆಡಿಸಿತ್ತು. ಪತಿ ಎಷ್ಟೇ ಸಮಾಧಾನಪಡಿಸಲು ಪ್ರಯತ್ನಿಸಿದರೂ ಆಕೆ ಸಮಾಧಾನಗೊಂಡಿರಲಿಲ್ಲ.

ಇದನ್ನೂ ಓದಿ: ಅ*ತ್ಯಾಚಾರ ಆರೋಪ.. ಕುಂಭಮೇಳ ಮೊನಾಲಿಸಾಗೆ ಸಿನಿಮಾ ಆಫರ್ ನೀಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಬಂಧನ!

ದೇವತೆ ಬಂದ ನಂತರ ಪೂಜೆ ಪ್ರಾರಂಭಿಸುವುದಾಗಿ ಪ್ರಿಯಾಂಶಾ ಹೇಳುತ್ತಲೇ ಇದ್ದಳು. ಇದಕ್ಕಾಗಿ ಎಲ್ಲಾ ಪೂಜಾ ಸಾಮಗ್ರಿ ತರುವಂತೆ ಆಕೆ ನನ್ನನ್ನು ಕೇಳಿದ್ದಳು. ಆಕೆಯ ಆಸೆಯಂತೆ ನಾನು ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೆ. ಆದರೆ ಮೊದಲ ದಿನವೇ ಅವಳಿಗೆ ಮುಟ್ಟು ಪ್ರಾರಂಭವಾಯಿತು. ಹೀಗಾಗಿ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಇದು ನೈಸರ್ಗಿಕ ಪ್ರಕ್ರಿಯೆ, ಟೆನ್ಶನ್‌ ಮಾಡಿಕೊಳ್ಳಬೇಡವೆಂದು ನಾನು ಹೇಳಿದರೂ ಆಕೆ ಕೇಳಲಿಲ್ಲ. ಪೂಜೆ ಮಾಡಲು ಸಾಧ್ಯವಾಗದಿರುವುದು ತುಂಬಾ ಮಹತ್ವವಾದುದ್ದನ್ನ ಕಳೆದುಕೊಂಡತೆ ಆಕೆಗೆ ಭಾಸವಾಗಿತ್ತು.  

ಮರುದಿನ ಪತಿ ಮುಖೇಶ್ ತನ್ನ ಅಂಗಡಿಯಲ್ಲಿದ್ದಾಗ ಪ್ರಿಯಾಂಶ ವಿಷಕಾರಿ ಆಹಾರ ಸೇವಿಸಿದ್ದಳಂತೆ. ಇದು ಗೊತ್ತಾಗಿ ಕುಟುಂಬಸ್ಥರು ಆಕೆಯನ್ನ ಝಾನ್ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದಿದ್ದರು. ಕೂಡಲೇ ವೈದ್ಯರು ಆಕೆಗೆ ಚಿಕಿತ್ಸೆ ನೀಡಿ ಬದುಕಿಸಿದ್ದರು. ಅಲ್ಲದೇ ಆಕೆಯನ್ನ ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಆಕೆಯ ಆರೋಗ್ಯದಲ್ಲಿ ಹಠಾತ್‌ ಏರುಪೇರಾಗಿದ್ದು, ಮತ್ತೆ ಆಕೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ವಿಚಾರ ತಿಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಿಯಾಂಶಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಈ ದಿನದಂದೇ ಸಂಭವಿಸಲಿದೆ ಮಯನ್ಮಾರ್‌ಗಿಂತ ಭೀಕರವಾದ ಭೂಕಂಪ! ಭವಿಷ್ಯ ನುಡಿದ ವಿಜ್ಞಾನಿಗಳು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News