Women's Day 2025 Wishes: ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಶಕ್ತಿ, ಅವರ ಕೊಡುಗೆ ಮತ್ತು ಹಕ್ಕುಗಳನ್ನು ಆಚರಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇನ್ನು ಇಂತಹ ಶುಭ ಸಂದರ್ಭದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿಯರಿಗೆ ಅಥವಾ ಜೀವನ ಬೆಳಗಿದ ವಿಶೇಷ ಮಹಿಳೆಗೆ ಶುಭಕೋರಲು ಇಲ್ಲಿವೆ ಶುಭ ಸಂದೇಶಗಳು.
ಪ್ರತಿಯೊಬ್ಬರ ಬದುಕಿನಲ್ಲೂ ಮಹಿಳೆಯ ಪಾತ್ರ ಇದ್ದೇ ಇರುತ್ತದೆ. ಹಲವು ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕುಟುಂಬವನ್ನು ಸುಂದರವಾಗಿ ಮುನ್ನಡೆಸುವ ಶಕ್ತಿ ಮಹಿಳೆಗಿದೆ. ಅಂತಹ ಎಲ್ಲಾ ಸುಂದರ ಮಹಿಳೆಯರಿಗೆ ʼನಿಮ್ಮʼ ದಿನದ ಶುಭಾಶಯಗಳು.
ಇದನ್ನೂ ಓದಿ: ಮನೆಯಂಗಳದಲ್ಲಿ ತುಳಸಿ ಗಿಡ ನೆಟ್ಟಿದ್ದರೇ ಈ ತಪ್ಪು ಮಾಡಲೇಬೇಡಿ! ಸಿರಿವಂತನಿಗೂ ಕಡುಬಡತನ ವಕ್ಕರಿಸುತ್ತೆ..
- ಅಮ್ಮ... ಮಹಿಳಾ ದಿನಾಚರಣೆಯ ಶುಭಾಶಯಗಳು. ನಿರ್ಮಲ ಪ್ರೀತಿ, ಕಾಳಜಿ ತೋರಿದ ನಿಮಗೆ ನಾನು ಎಂದೆಂದೂ ಚಿರಕೃತಜ್ಞ.
- ಅಮ್ಮನ ಸ್ಥಾನ ತುಂಬಿದ ಅಕ್ಕ. ನಿಮ್ಮಂತಹ ಸಹೋದರಿಯನ್ನು ಪಡೆದ ನಾನೇ ಧನ್ಯ. ಮಹಿಳಾ ದಿನಾಚರಣೆಯ ಶುಭಾಶಯಗಳು
- ಮಗು ಮನಸ್ಸಿನ ತಂಗಿ. ನಿನ್ನೊಂದಿಗಿರುವ ಪ್ರತಿಕ್ಷಣವೂ ಸಿಹಿ. ಮಹಿಳಾ ದಿನಾಚರಣೆಯ ಶುಭಾಶಯಗಳು
- ಬದುಕಿಗೆ ಶಕ್ತಿ ತುಂಬಿದ ಮಡದಿ... ಬಿದ್ದಾಗ ಮೇಲಕ್ಕೆತ್ತುವ, ನೊಂದಾಗ ಧೈರ್ಯ ತುಂಬುವ ಕರುಣಾಮಯಿ. ನನ್ನ ಬದುಕಿಗೆ ಅರ್ಥ ತಂದ ನಿನಗೆ ಹ್ಯಾಪಿ ವುಮೆನ್ಸ್ ಡೇ
- ಅಪ್ಪನಾಗಿ ಸಂಭ್ರಮಿಸುವಂತೆ ಮಾಡಿದ ಮಗಳು. ನನ್ನ ಬದುಕಿನ ದೊಡ್ಡ ಉಡುಗೊರೆ ನೀನೇ... ಮಹಿಳಾ ದಿನದ ಶುಭಾಶಯಗಳು
- ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಇರುವುದು ಮಹಿಳೆಗೆ ಮಾತ್ರ. ʼನಾನುʼ ಆ ಮಹಿಳೆ ಎಂಬ ಹೆಮ್ಮೆಯಿಂದಲೇ ಬಾಳಿ. ವಿಶ್ವ ಮಹಿಳಾ ದಿನದ ಶುಭಾಶಯಗಳು
ಇದನ್ನೂ ಓದಿ: ಈ ಸಸ್ಯಾಹಾರಿ ಆಹಾರಗಳನ್ನು ತಿನ್ನಿ!! ನಿಮಗೆ ವಯಸ್ಸಾಗಿದೆ ಎನ್ನುವುದೇ ಗೊತ್ತಾಗಲ್ಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









