ನವದೆಹಲಿ: ರಾಜಸ್ಥಾನದ ಅಲ್ವಾರ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ "ಪಾಕಿಸ್ತಾನ ಝಿಂದಾಬಾದ್" ಘಟನೆಯ ವಿಚಾರವಾಗಿ ಪಂಜಾಬ್ ಮಂತ್ರಿ ನವಜೋತ್ ಸಿಂಗ್ ಸಿಧು ಮತ್ತು ಇತರ ಕಾಂಗ್ರೆಸ್ ಮುಖಂಡರಿಗೆ ವಿರುದ್ಧವಾಗಿ ಚುನಾವಣಾ ಆಯೋಗಕ್ಕೆ ಝೀ ನ್ಯೂಸ್ ದೂರು ಸಲ್ಲಿಸಿದೆ.


COMMERCIAL BREAK
SCROLL TO CONTINUE READING

ದೂರಿನಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಮತ್ತು ಪಕ್ಷದ ನಾಯಕ ಕರಣ್ ಸಿಂಗ್ ಯಾದವ್ ಹೆಸರನ್ನು ಕೂಡ ದಾಖಲಿಸಲಾಗಿದೆ. ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗುವುದಕ್ಕೆ ಅವಕಾಶ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಮತ್ತು ದೇಶ ವಿರೋಧಿ ಶಕ್ತಿಗಳಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.



ದೂರಿನಲ್ಲಿ ಈ ವಿಚಾರವಾಗಿ ಸಂಪೂರ್ಣ ತನಿಖೆಯನ್ನು ಕೈಗೊಳ್ಳಬೇಕು ಮತ್ತು  ಕಾಂಗ್ರೆಸ್ ನಾಯಕರ ವಿರುದ್ದ  ಕ್ರಮವನ್ನು ಕೈಗೊಳ್ಳಬೇಕು ಎಂದು ಜೀ ನ್ಯೂಸ್ ಆಗ್ರಹಿಸಿದೆ.ಚುನಾವಣಾ ಆಯೋಗಕ್ಕೆ ಫೇಸ್ ಬುಕ್ ಲೈವ್ ವೀಡಿಯೋ ಮತ್ತು ಇತರ ಪ್ರತ್ಯಕ್ಷದರ್ಶಿಗಳ ವಿಡಿಯೋ ಹೇಳಿಕೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.


ಜೀ ನ್ಯೂಸ್ ಪ್ರಸಾರ ಮಾಡಿದ ವಿಡಿಯೋವೊಂದರಲ್ಲಿ ರ್ಯಾಲಿಯೊಂದರಲ್ಲಿ  ಪಾಕಿಸ್ತಾನ ಜಿಂದಾಬಾದ್ ಎಂದು ಜನರು ಕೂಗುತ್ತಿರುವ ದೃಶ್ಯವು ಸೆರೆಯಾಗಿತ್ತು.ಈ ವಿಚಾರವಾಗಿ ಸಿಧು ಈ ವಿಡಿಯೋವನ್ನು ತಿರುಚಲಾಗಿದ್ದು ಆದ್ದರಿಂದ ಜೀ ನ್ಯೂಸ್ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಕೆಲವು ಕಾಂಗ್ರೆಸ್ ನಾಯಕರು ಆ ಘೋಷಣೆಗಳು ಇಲ್ಲದ ವಿಡಿಯೋಗಳನ್ನ ಮಾತ್ರ ಹಂಚಿಕೊಂಡಿದ್ದರು.


ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ವಕ್ತಾರ ಸುರ್ಜೆವಾಲಾ ರ್ಯಾಲಿಯಲ್ಲಿ ಕೂಗಿದ ಘೋಷಣೆ ಸತ್ ಶ್ರೀ ಅಕಲ್ ಆಗಿದ್ದು  ಎಂದು ತಿಳಿಸಿದ್ದರು.ಆದರೆ ಇದನ್ನು ಅಲ್ಲಗಳೆದ  ಜೀ ನ್ಯೂಸ್ ಸಂಪಾದಕ ಸುಧೀರ್ ಚೌಧರಿ ಕಾಂಗ್ರೆಸ್ ನಾಯಕರು ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆಗಳನ್ನು ಕೂಗಿದ ನಂತರದ ಭಾಗವನ್ನು ತೋರಿಸಿದ್ದಾರೆ ಎಂದು ಉತ್ತರಿಸಿದ್ದರು.


ಸಿಧು ರ್ಯಾಲಿಯಲ್ಲಿನ ಪಾಕಿಸ್ತಾನ ಪರ ಘೋಷಣೆಗಳನ್ನು ಪಕ್ಕದ ಪಾಕಿಸ್ತಾನದಲ್ಲಿ ಹಲವಾರು  ಚಾನಲ್ ಗಳು ಪ್ರಸಾರ ಮಾಡಿವೆ.