ಬೆಂಗಳೂರು: ನಂದಿನಿ Vs ಅಮುಲ್ ವಿವಾದ ವಿಚಾರವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಸೋಮವಾರ ಸರಣಿ ಟ್ವೀಟ್ ಮಾಡಿದ್ದು, ‘ಹಾಲಿನ ಬಗ್ಗೆ ಹುಸಿ ಪ್ರೀತಿ ತೋರುವವರು ಗೋಮಾತೆಯ ರಕ್ಷಣೆಗೆ ಎಂದಾದರೂ ನಿಂತಿದ್ದರೇ? 2010ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡಿಸಿದವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು. ಕಾಂಗ್ರೆಸ್ ಪರಂಪರೆಯ ಅಂದಿನ ರಾಜ್ಯಪಾಲರು ಅದಕ್ಕೆ ಸಹಿ ಮಾಡಲಿಲ್ಲ. 2020ರಲ್ಲಿ  ಮತ್ತೆ ಕಾಯ್ದೆ ಜಾರಿಗೆ ತಂದದ್ದೂ ನಾವೇ’ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

#BJPYeBharavase ಹ್ಯಾಶ್‍ಟ್ಯಾಗ್‍ ಬಳಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಗೋಹತ್ಯೆ ನಿಷೇಧದ‌ ಬಗ್ಗೆ ಜಾಣಮೌನ ವಹಿಸುವ ಜೆಡಿಎಸ್ ರಾಜಕೀಯಕ್ಕಾಗಿ ನಂದಿನಿ ಹಾಲಿಗೆ ಹುಳಿ ಹಿಂಡುವ ಕೆಲಸ ಮಾಡುತ್ತಿದೆ. ಸಿಂಗಾಪುರ್, ದುಬೈ, ಸೌದಿ ಅರೇಬಿಯಾದಂಥ ವಿದೇಶಿ ಮಾರುಕಟ್ಟೆಯಲ್ಲಿ ನಂದಿನಿ ಯಶಸ್ವಿ ವ್ಯವಹಾರ ನಡೆಸಲು ಬಿಜೆಪಿ‌ ಕಾರಣ. ಕೆಎಂಎಫ್‌ನ ಶೇ.15ರಷ್ಟು ವಹಿವಾಟು ಹೊರ ರಾಜ್ಯಗಳಿಂದಲೇ ಆಗುತ್ತಿದೆ’ ಎಂದು ಹೇಳಿದೆ.


Amul vs Nandini: ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ- ಕಾಂಗ್ರೆಸ್


ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಹುನ್ನಾರ. ಆದರೆ ಎಲ್ಲಾ ರೀತಿಯಿಂದಲೂ ಪ್ರಪಂಚಕ್ಕೆ ತೆರೆದುಕೊಂಡಿರುವ ಕರ್ನಾಟಕದ ಹೈನುಗಾರರು ನಿಮ್ಮ ಅಗ್ಗದ ಚುನಾವಣಾ ಪ್ರಚಾರಕ್ಕೆ ಮಾರುಹೋಗುವುದಿಲ್ಲ’ವೆಂದು ಬಿಜೆಪಿ ಕುಟುಕಿದೆ.


Karnataka Assembly Elections: ಕುಮಟಾ ಕಾಂಗ್ರೆಸ್ ನಲ್ಲಿ ಅಸಮಾಧಾನ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.