ಬೆಂಗಳೂರು: ಪ್ರತಿಯೊಬ್ಬ ಮಹಿಳೆಯೂ ನೀಳವಾದ, ಕಪ್ಪು ಮತ್ತು ದಟ್ಟ ಕೂದಲುಗಳನ್ನು ಹೊಂದಲು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ತಪ್ಪಾದ ಆಹಾರ ಪದ್ಧತಿ, ಮಾಲಿನ್ಯ, ಕೆಟ್ಟ ಜೀವನಶೈಲಿ, ಒತ್ತಡ ಮತ್ತು ತಪ್ಪು ಉತ್ಪನ್ನಗಳ ಬಳಕೆಯಿಂದ ಕೂದಲು ಸಂಬಂಧಿತ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ತಮ್ಮ ಕೂದಲಿನ ಉದುರುವಿಕೆ ಮತ್ತು ಬೆಳವಣಿಗೆಯ ಬಗ್ಗೆ ಚಿಂತೆಗೀಡಾಗುತ್ತಿದ್ದಾರೆ. ಕೂದಲು ಬೆಳೆಯಲು ಮಹಿಳೆಯರು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅವುಗಳು ಯಾವುದೇ ಗಮನಾರ್ಹ ಫಲಿತಾಂಶಗಳನ್ನು ನೀಡುವುದಿಲ್ಲ. ಒಂದು ವೇಳೆ ಕೂದಲು ಉದ್ದವಾಗಿ ಬೆಳೆಯುತ್ತಿಲ್ಲ ಮತ್ತು ಉದುರುತ್ತಿವೆ ಎಂಬ ಚಿಂತೆ ನಿಮಗೂ ಕಾಡುತ್ತಿದ್ದರೆ, ನೀವು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಕರಿಬೇವಿನ ಎಲೆಗಳ ಬಳಕೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಪರಿಣಾಮಕಾರಿ ಎಂದು ಸಾಬೀತಾಗುತ್ತವೆ. ಹೌದು, ಕರಿಬೇವಿನ ಎಲೆಗಳು ನಮ್ಮ ಆರೋಗ್ಯ ಹಾಗೂ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿ ವಿಟಮಿನ್-ಬಿ, ವಿಟಮಿನ್-ಸಿ, ಪ್ರೊಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್ ಗಳಂತಹ ಪೋಷಕಾಂಶಗಳಿದ್ದು, ಕೂದಲಿನ ಬೆಳವಣಿಗೆ ಮತ್ತು ಉದ್ದವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಕರಿಬೇವಿನ ಎಲೆಗಳನ್ನು ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು, ಒಣ ಕೂದಲು ಮತ್ತು ಕೂದಲು ಉದುರುವಿಕೆ ಸಮಸ್ಯೆ ದೂರವಾಗುತ್ತದೆ. ಇದು ಕೂದಲನ್ನು ನೀಳವಾಗಿ, ದಟ್ಟವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಹಾಗಾದರೆ ಬನ್ನಿ ಕೂದಲು ಉದುರುವಿಕೆಯನ್ನು ತಡೆಯಲು ಕರಿಬೇವನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ. (Lifestyle News In Kannada)


COMMERCIAL BREAK
SCROLL TO CONTINUE READING

ಕರಿಬೇವಿನ ಎಲೆಗಳು ಮತ್ತು ಮೆಂತ್ಯ
ಕೂದಲು ಉದುರುವಿಕೆಯನ್ನು
ತಡೆದು, ಅವುಗಳ ಉದ್ದವನ್ನು ಹೆಚ್ಚಿಸಲು ನೀವು ಕರಿಬೇವಿನ ಎಲೆಗಳು ಮತ್ತು ಮೆಂತ್ಯವನ್ನು ಬಳಸಬಹುದು. ಇದಕ್ಕಾಗಿ 2 ಚಮಚ ಕರಿಬೇವಿನ ಸೊಪ್ಪಿನ ಪೇಸ್ಟ್ ತೆಗೆದುಕೊಳ್ಳಿ. ಅದರಲ್ಲಿ 2 ಚಮಚ ಮೆಂತ್ಯ ಪುಡಿಯನ್ನು ಮಿಶ್ರಣ ಮಾಡಿ. ಇದರ ನಂತರ, ಅದನ್ನು ನಿಮ್ಮ ಕೂದಲಿಗೆ ಅನ್ವಯಿಸಿ ಮತ್ತು ಸುಮಾರು 30 ನಿಮಿಷಗಳ ಕಾಲ ಬಿಡಿ. ಅದರ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ನೀವು ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು. ಹೀಗೆ ಮಾಡುವುದರಿಂದ ನಿಮ್ಮ ಕೂದಲು ಶೀಘ್ರದಲ್ಲೇ ಕೂದಲು ಬೆಳವಣಿಗೆ ಆರಂಭಗೊಂದು ಅವು ನೀಳ ಮತ್ತು ದಟ್ಟವಾಗುತ್ತವೆ. 


ಕರಿಬೇವಿನ ಎಲೆಗಳು ಮತ್ತು ತೆಂಗಿನ ಎಣ್ಣೆ
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು, ನೀವು ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಬಹುದು. ಇದಕ್ಕಾಗಿ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕೆ 7-8 ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ. ನಂತರ ಈ ಮಿಶ್ರಣವನ್ನು ತಣ್ಣಗಾಗಿಸಿ. ನಂತರ ಅದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ಸುಮಾರು 1 ಗಂಟೆಯ ನಂತರ, ಸೌಮ್ಯವಾದ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.


ಇದನ್ನೂ ಓದಿ-ಹರಳೆಣ್ಣೆಯಲ್ಲಿ ಈ ಒಂದು ಪದಾರ್ಥ ಬೆರೆಸಿ ಕೂದಲಿಗೆ ಅನ್ವಯಿಸಿ ನೈಸರ್ಗಿಕವಾಗಿ ಬಿಳಿಕೂದಲು ಕಪ್ಪಾಗುತ್ತವೆ!


ಕರಿಬೇವಿನ ಎಲೆಗಳು ಮತ್ತು ಆಮ್ಲಾ
ಕೂದಲು ಬೆಳೆಯಲು ಕರಿಬೇವಿನ ಸೊಪ್ಪು ಮತ್ತು ನೆಲ್ಲಿಕಾಯಿ ಹೇರ್ ಮಾಸ್ಕ್ ತಯಾರಿಸಿ ಹಚ್ಚಿಕೊಳ್ಳಬಹುದು. ಇದಕ್ಕಾಗಿ ಒಂದು ಬೆಟ್ಟದ ನೆಲ್ಲಿಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ಕರಿಬೇವಿನ ಸೊಪ್ಪಿನ ಪೇಸ್ಟ್ ಹಾಕಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಸುಮಾರು 1 ಗಂಟೆ ಬಿಡಿ. ಅದರ ನಂತರ ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಬಳಸುವುದರಿಂದ ಕೂದಲು ಬೇಗನೆ ಉದ್ದ ಮತ್ತು ದಟ್ಟವಾಗಿ ಬೆಳೆಯುತ್ತವೆ.


ಇದನ್ನೂ ಓದಿ-ಕೂದಲುದುರುವುದನ್ನು ತಡೆಗಟ್ಟಿ, ದುಪ್ಪಟ್ಟು ವೇಗದಲ್ಲಿ 


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ