ಸಿದ್ದರಾಮಯ್ಯ ಬಜೆಟ್: ಇಲಾಖಾವಾರು ಅನುದಾನ ಹಂಚಿಕೆ... ಈ ಇಲಾಖೆಗೆ 'ಸಿಂಹ ಪಾಲು'..!

Karnataka Budget 2025: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಯಿಂತ ಹೆಚ್ಚಾಗಿದೆ ಎಂದಿರುವ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಿದ್ದಾರೆ. ಇಲ್ಲಿದೆ ಮಾಹಿತಿ. 

Written by - Yashaswini V | Last Updated : Mar 7, 2025, 06:35 PM IST
  • ಕರ್ನಾಟಕವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದು
  • ದೇಶದ ಜಿ‌ಡಿ‌ಪಿಯಲ್ಲಿ ಕರ್ನಾಟಕ 8.4% ಕೊಡುಗೆ ನೀಡಿದೆ.
  • 2024-25ನೇ ಸಾಲಿನಲ್ಲಿ ದೇಶದ ಆರ್ಥಿಕತೆ 6.4% ಬೆಳವಣಿಗೆಯಾಗಿದ್ದ್ರೇ, ರಾಜ್ಯದ ಆರ್ಥಿಕತೆಯಲ್ಲಿ 7.4%ರಷ್ಟು ಬೆಳವಣಿಗೆ ದಾಖಲಾಗಿದೆ.
ಸಿದ್ದರಾಮಯ್ಯ ಬಜೆಟ್: ಇಲಾಖಾವಾರು ಅನುದಾನ ಹಂಚಿಕೆ... ಈ ಇಲಾಖೆಗೆ 'ಸಿಂಹ ಪಾಲು'..!

Karnataka Budget 2025: 16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 2025-26ನೇ ಸಾಲಿನಲ್ಲಿ ಒಟ್ಟು 4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಕಳೆದ ಬಾರಿ 3,71,383 ಕೋಟಿ ರೂ. ಬಜೆಟ್ ಗಾತ್ರಕ್ಕೆ ಹೋಲಿಸಿದರೆ, ಈ ಬಾರಿಯ ಬಜೆಟ್ 38,166ಕೋಟಿ ರೂ. ಹೆಚ್ಚಳವಾಗಿದೆ. 

Add Zee News as a Preferred Source

ರಾಜ್ಯದ ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ಬಜೆಟ್ ಮಂಡನೆ ಮಾಡುತ್ತಿರುವುದಾಗಿ "ನಮ್ಮ ಕೈಬುಟ್ಟಿಯಲಿ ಸಿಡಿಲ ಗೂಡಿಹುದು, ಹುಡುಕಿ ನೋಡಿದರಲ್ಲಿ ಸುಮದ ಬೀದಿಹುದು" ಎಂದು ಕುವೆಂಪು ಅವರ ಕವನ ಸಂಕಲನವನ್ನು ಹೇಳಿ ಬಜೆಟ್ ಮಂಡಿಸಿರುವ 2025-26ನೇ ಸಾಲಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಿಂಹಪಾಲು ನೀಡಿದ್ದಾರೆ. 

ಇದನ್ನೂ ಓದಿ- Karnataka Budget 2025 LIVE : ದಾಖಲೆಯ 16ನೇ ಬಜೆಟ್ ಪ್ರತಿ ಓದುತ್ತಿರುವ ಸಿಎಂ ಸಿದ್ದರಾಮಯ್ಯ..!

ಇಲಾಖಾವಾರು ಅನುದಾನ ಹಂಚಿಕೆ ಈ ಕೆಳಕಂಡಂತಿದೆ:- 
* ಶಿಕ್ಷಣ ಇಲಾಖೆ - 45,286 ಕೋಟಿ

* ಮಹಿಳಾ/ ಮಕ್ಕಳ ಕಲ್ಯಾಣ  ಇಲಾಖೆ - 34955 ಕೋಟಿ

* ಇಂಧನ  ಇಲಾಖೆ - 26,896 ಕೋಟಿ

* ಗ್ರಾಮೀಣಾಭಿವೃದ್ಧಿ ಇಲಾಖೆ - 26,735 ಕೋಟಿ

* ನೀರಾವರಿ  ಇಲಾಖೆ- 22181 ಕೋಟಿ

* ನಗರಾಭಿವೃದ್ಧಿ, ವಸತಿ ಇಲಾಖೆ - 21405 ಕೋಟಿ

* ಒಳ ಆಡಳಿತ ಮತ್ತು ಸಾರಿಗೆ  ಇಲಾಖೆ- 20625 ಕೋಟಿ

* ಆರೋಗ್ಯ, ಕುಟುಂಬ ಕಲ್ಯಾಣ  ಇಲಾಖೆ- 17473 ಕೋಟಿ

* ಕಂದಾಯ ಇಲಾಖೆ - 17201 ಕೋಟೆ

* ಸಮಾಜ ಕಲ್ಯಾಣ ಇಲಾಖೆ - 16,955 ಕೋಟಿ

* ಲೋಕೋಪಯೋಗಿ ಇಲಾಖೆ - 11841 ಕೋಟಿ

* ಆಹಾರ ಇಲಾಖೆ ಇಲಾಖೆ - 8275 ಕೋಟಿ

* ಕೃಷಿ, ತೋಟಗಾರಿಕೆ ಇಲಾಖೆ- 7145 ಕೋಟಿ

* ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆ - 3977 ಕೋಟಿ

* ಇತರೆ - 1,49,857 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. 

ಇದನ್ನೂ ಓದಿ- Karnataka Budget 2025: ಬಿಸಿಯೂಟ ಕಾರ್ಯಕರ್ತೆಯರು, ಸರ್ಕಾರಿ-ಪ್ರೌಢ ಶಾಲೆ ಅತಿಥಿ ಶಿಕ್ಷಕರಿಗೆ ಸಿಹಿ ಸುದ್ದಿ ನೀಡಿದ ಸಿದ್ದರಾಮಯ್ಯ 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News