7 ನೇ ತರಗತಿ ವಿದ್ಯಾರ್ಥಿಗಳಿಗೆ 'ಪಬ್ಲಿಕ್ ಪರೀಕ್ಷೆ'; ಶಿಕ್ಷಣ ಸಚಿವರು ಹೇಳಿದ್ದೇನು?

ಈ ಹಿಂದೆಯೂ 7ನೇ ತರಗತಿಗೆ 'ಪಬ್ಲಿಕ್ ಪರೀಕ್ಷೆ' ನಡೆಸಲಾಗುತ್ತಿತ್ತು.

Last Updated : Oct 14, 2019, 08:52 AM IST
7 ನೇ ತರಗತಿ ವಿದ್ಯಾರ್ಥಿಗಳಿಗೆ 'ಪಬ್ಲಿಕ್ ಪರೀಕ್ಷೆ'; ಶಿಕ್ಷಣ ಸಚಿವರು ಹೇಳಿದ್ದೇನು? title=
Representational image

ಬೆಂಗಳೂರು: ಪ್ರಾಥಮಿಕ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿ ದೃಷ್ಟಿಯಿಂದ 7 ನೇ ತರಗತಿಗೆ 'ಪಬ್ಲಿಕ್ ಪರೀಕ್ಷೆ' ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

ಈ ಹಿಂದೆಯೂ 7ನೇ ತರಗತಿಗೆ 'ಪಬ್ಲಿಕ್ ಪರೀಕ್ಷೆ' ನಡೆಸಲಾಗುತ್ತಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ತೆಗೆದು ಹಾಕಲಾಗಿದೆ. ಮಕ್ಕಳ ಕಲಿಕೆಯ ಮೌಲ್ಯಮಾಪನಕ್ಕಾಗಿ 7ನೇ ತರಗತಿ ಮಕ್ಕಳಿಗೆ 'ಪಬ್ಲಿಕ್ ಪರೀಕ್ಷೆ' ಅವಶ್ಯಕವಾಗಿದೆ. ಆದರೆ 7ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಯಾವುದೇ ಮಗುವನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಸಚಿವರು ತಿಳಿಸಿದರು.

1 ರಿಂದ 10ನೇ ತರಗತಿವರೆಗೆ ಮಕ್ಕಳನ್ನು ಪಾಸ್ ಮಾಡುತ್ತಿರುವುದರಿಂದ ಮಕ್ಕಳ ಕಲಿಕೆಯಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಹಿನ್ನೆಲೆಯಲ್ಲಿ 7 ನೇ ತರಗತಿ ವಿದ್ಯಾರ್ಥಿಗಳಿಗೆ 'ಪಬ್ಲಿಕ್ ಪರೀಕ್ಷೆ' ನಡೆಸಲು ನಿರ್ಧರಿಸಲಾಗಿದೆ ಎಂದರು.

Trending News