ಯಡಿಯೂರಪ್ಪ ಸಂಪುಟ ಸೇರುವವರ ಹೆಸರು ಫೈನಲ್; 16 ಶಾಸಕರು ಸಚಿವರಾಗಿ ಇಂದು ಪ್ರಮಾಣವಚನ

ಮಂಗಳವಾರ ಬೆಳಿಗ್ಗೆ 10:30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.  

Yashaswini V Yashaswini V | Updated: Aug 20, 2019 , 07:29 AM IST
ಯಡಿಯೂರಪ್ಪ ಸಂಪುಟ ಸೇರುವವರ ಹೆಸರು ಫೈನಲ್; 16 ಶಾಸಕರು ಸಚಿವರಾಗಿ ಇಂದು ಪ್ರಮಾಣವಚನ
Photo Courtesy: ANI(File Photo)

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಕ್ಕೆ ಬಂದು 25 ದಿನಗಳ ಬಳಿಕ ಇಂದು ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದೆ. ಮೊದಲ ಹಂತದಲ್ಲಿ 16-17 ಮಂದಿ ಸಂಪುಟ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಈವರೆಗೂ ಸಂಪುಟ ಸೇರುವವರಾರು ಎಂಬ ಗುಟ್ಟನ್ನು ಯಾರೂ ಬಿಟ್ಟು ಕೊಟ್ಟಿಲ್ಲ.

ಮಂಗಳವಾರ ಬೆಳಿಗ್ಗೆ 10:30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಇಂದು ಬೆಳಿಗ್ಗೆ ಸಚಿವರಾಗುವವರ ಪಟ್ಟಿ ಹೊರಬೀಳಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವರಿಷ್ಠರ ತೀರ್ಮಾನವೇ ಅಂತಿಮ:
ಸಂಪುಟ ರಚನೆಗೂ ಮುನ್ನಾ ದಿನವಾದ ಸೋಮವಾರ ಸಿಎಂ ಯಡಿಯೂರಪ್ಪ ಪಕ್ಷದ ಹಿರಿಯ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ 'ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರಿಗೆ ಲಿಸ್ಟ್ ಕೊಟ್ಟು ಬಂದಿದ್ದೇನೆ. ಶಾ ಸೂಚಿಸಿದವರಿಗೆ ಮಾತ್ರ ಸಂಪುಟದಲ್ಲಿ ಸ್ಥಾನ ಸಿಗಲಿದೆ. ನನ್ನ ಕೈಲಾದ ಪ್ರಯತ್ನ ನಾನು ಮಾಡಿದ್ದೇನೆ. ಒಂದು ವೇಳೆ ಸಚಿವಾಕಾಂಕ್ಷಿಗಳಿಗೆ ಅವಕಾಶ ಸಿಗದೇ ಇದ್ದರೆ ಉತ್ತಮ ಸರ್ಕಾರ ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ವರಿಷ್ಠರ ತೀರ್ಮಾನವೇ ಅಂತಿಮ' ಎಂದು ಹೇಳಿ ಎಲ್ಲರನ್ನೂ ಸಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ.

ಇಂದು ಯಡಿಯೂರಪ್ಪ ಸಂಪುಟ ಸೇರಲಿರುವ ಸಂಭಾವ್ಯರ ಪಟ್ಟಿ:

* ಜಗದೀಶ್ ಶೆಟ್ಟರ್ : ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ
* ಕೆ. ಎಸ್. ಈಶ್ವರಪ್ಪ : ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ
* ಆರ್. ಅಶೋಕ್ : ಪದ್ಮನಾಭನಗರ ವಿಧಾನಸಭಾ ಕ್ಷೇತ್ರ
* ವಿ. ಸೋಮಣ್ಣ : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ
* ಡಾ. ಅಶ್ವತ್ಥ್ ನಾರಾಯಣ : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರ
* ಬಿ. ಶ್ರೀರಾಮುಲು : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ
* ಗೋವಿಂದ ಕಾರಜೋಳ : ಮುಧೋಳ ವಿಧಾನಸಭಾ ಕ್ಷೇತ್ರ
* ಕೋಟಾ ಶ್ರೀನಿವಾಸ ಪೂಜಾರಿ : ವಿಧಾನ ಪರಿಷತ್ ಸದಸ್ಯ
* ಎಸ್. ಎ. ರಾಮದಾಸ್ : ಕೃಷ್ಣರಾಜ ವಿಧಾನಸಭಾ ಕ್ಷೇತ್ರ
* ಉಮೇಶ್ ಕತ್ತಿ : ಹುಕ್ಕೇರಿ ವಿಧಾನಸಭಾ ಕ್ಷೇತ್ರ
* ಬಾಲಚಂದ್ರ ಜಾರಕಿಹೊಳಿ : ಅರಬಾವಿ ವಿಧಾನಸಭಾ ಕ್ಷೇತ್ರ
* ಶಶಿಕಲಾ ಜೊಲ್ಲೆ : ನಿಪ್ಪಾಣಿ ವಿಧಾನಸಭಾ ಕ್ಷೇತ್ರ
* ಬಸವರಾಜ ಬೊಮ್ಮಾಯಿ : ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ
* ಸುರೇಶ ಕುಮಾರ್ : ರಾಜಾಜಿ ನಗರ ವಿಧಾನಸಭಾ ಕ್ಷೇತ್ರ
* ಜೆ.ಸಿ. ಮಾಧುಸ್ವಾಮಿ : ಚಿಕ್ಕನಾಯಕನ ಹಳ್ಳಿ ವಿಧಾನಸಭಾ ಕ್ಷೇತ್ರ
* ಸಿ.ಸಿ. ಪಾಟೀಲ್ : ನರಗುಂದ ವಿಧಾನಸಭಾ ಕ್ಷೇತ್ರ
* ಎಚ್. ನಾಗೇಶ್ : ಮುಳಬಾಗಿಲು (ಪಕ್ಷೇತರ ಶಾಸಕ)