)
ತುಮಕೂರು : ಚಾಮರಾಜನಗರದಲ್ಲಿ ನಡೆದ ಕೋತಿಗಳ ಮಾರಣ ಹೋಮ ಪ್ರಕರಣ ಮಾಸುವ ಮುನ್ನವೇ ಇದೀಗ ತುಮಕೂರಿನಲ್ಲಿ ರಾಷ್ಟ್ರ ಪಕ್ಷಿ ನವಿಲುಗಳ ಸಾವು ಸಂಭವಿಸಿದೆ. ಒಂದೆರಡಲ್ಲ ಬರೋಬ್ಬರಿ 19 ನವಿಲುಗಳು ನಿಗೂಢ ರೀತಿಯಲ್ಲಿ ಮೃತಪಟ್ಟಿವೆ. ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದಲ್ಲಿ ಘಟನೆ ನಡೆದಿದೆ. ನವಿಲುಗಳ ಮೃತದೇಹಗಳನ್ನು ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ. ಎಫ್ಎಸ್ಎಲ್ ವರದಿ ಬಂದ ನನತ್ರ ನವಿಲುಗಳ ಸಾವಿನ ಕಾರಣ ತಿಳಿಯಲಿದೆ.
ತುಮಕೂರಿನ ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನುಗಳಲ್ಲಿ ನವಿಲುಗಳ ಮೃತದೇಹಗಳು ಪತ್ತೆಯಾಗಿವೆ. ಈ ನವಿಲುಗಳು ಆಗಸ್ಟ್ 1 ರ ರಾತ್ರಿ ಮೃತಪಟ್ಟಿರಬಹುದು ಎನ್ನುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವೈದ್ಯರ ನಿರ್ಲಕ್ಷ್ಯ: ಜಿಲ್ಲಾಸ್ಪತ್ರೆಯಲ್ಲಿ ತಾಯಿ-ಮಗು ಸಾವು
ಮೃತಪಟ್ಟಿರುವ ನವಿಲುಗಳ ಪೈಕಿ ಐದು ಗಂಡು ಹಾಗೂ 14ಹೆಣ್ಣು ನವಿಲುಗಳು ಸೇರಿವೆ. ಅರಣ್ಯಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಸ್ಥಳೀಯ ಪಶುವೈದ್ಯಾಧಿಕಾರಿ ಗಮನಕ್ಕೆ ತಂದು ನವಿಲುಗಳ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ನ್ಯಾಯಾಧೀಶರ ಅನುಮತಿ ಬಳಿಕ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ.