ಹಾಸನಾಂಬ ದೇವಿ ದರ್ಶನದ ಎರಡನೇ ದಿನವಾದ ಇಂದು ಸಾರ್ವಜನಿಕರು ತಮ್ಮ ಇಷ್ಟ ದೇವತೆಯ ದರ್ಶನಾಶೀರ್ವಾದ ಪಡೆದು ಪುನೀತರಾಗಿದ್ದಾರೆ. ಜಿಲ್ಲಾಡಳಿತ ಕೂಡಾ ಈ ಬಾರಿ ಹೊಸ ಪ್ರಯೋಗಗಳೊಂದಿಗೆ ಮೊದಲನೇ ದಿನ ಭಕ್ತರಿಗೆ ದರ್ಶನ ಒದಗಿಸೋದ್ರಲ್ಲಿ ಯಶಸ್ವಿಯಾಗಿದ್ದು ಹಾಸನಾಂಬೆ ದರ್ಶನೋತ್ಸವಕ್ಕೆ ಇನ್ನೂ ಹದಿಮೂರು ದಿನ ಬಾಕಿ ಇದೆ.
ನಾಡಿನ ಶಕ್ತಿ ದೇವತೆಗಳ ದೇವಾಲಯದಲ್ಲಿ ಒಂದಾದ ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ನಿನ್ನೆ ವಿದ್ಯುಕ್ತವಾಗಿ ತೆರೆದಿದ್ದು ಇಂದು ಬೆಳಿಗ್ಗೆಯಿಂದ ಸಾರ್ವಜನಿಕರು ದೇವಿ ದರ್ಶನ ಪಡೆಯುತ್ತಿದ್ದಾರೆ. ಪೂಜಾ ಕೈಂಕರ್ಯ ಹೊರತುಪಡಿಸಿ ಇನ್ನೆಲ್ಲಾ ಸಮಯದಲ್ಲೂ ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಕಲ್ಪಿಸಿಕೊಂಡಿದೆ. ಮೊದಲ ದಿನವಾದ ಇಂದು ರಾಜ್ಯದ ಮೂಲೆ ಮೂಲೆಗಳಿಂದ ಬಂದು ಭಕ್ತರು ದೇವಿ ದರ್ಶನ ಪಡೆದು ಪುನೀತರಾದ್ರು. ಸರತಿ ಸಾಲಿನಲ್ಲಿಯೂ ಸರಾಗವಾಗಿ ದರ್ಶನ ಪಡೆದ ಭಕ್ತರು, ತಮ್ಮ ಇಷ್ಟಾರ್ಥಗಳಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಲ್ಲದೇ ಕಳೆದ ವರ್ಷ ಮಾಡಿಕೊಂಡಿದ್ದ ಹರಕೆ ತೀರಿಸಿದ್ರು.
ಇದನ್ನೂ ಓದಿ : ರಾಜ್ಯ ಸರ್ಕಾರದ ವಿರುದ್ಧ ಬಿವೈ ವಿಜಯೇಂದ್ರ ವಾಗ್ದಾಳಿ
ಇನ್ನು ಹಾಸನ ಜಿಲ್ಲಾಡಳಿತ ಈ ಬಾರಿ ಹೊಸ ಪ್ರಯೋಗಗಳನ್ನು ಮಾಡಿಕೊಂಡಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ದರ್ಶನೋತ್ಸವ ನಡೆಯುತ್ತಿದೆ. ಈ ಬಾರಿ ವಿಐಪಿ ವಿವಿಐಪಿ ಟಿಕೆಟ್ ಗಳಿಗೆ ಕೋಕ್ ಕೊಟ್ಟಿದ್ದು ಗಣ್ಯರನ್ನು ಮಾತ್ರ ಗುರುತಿಸಿ ಗೋಲ್ಡ್ ಕಾರ್ಡ್ ವಿತರಣೆ ಮಾಡಿತ್ತು. ಪ್ರತಿ ದಿನ ಒಂದು ಸಾವಿರ ಪಾಸ್ ಮಾತ್ರ ನೀಡುತ್ತಿದ್ದು ಇಂದು ಕೂಡಾ ಗೋಲ್ಡ್ ಪಾಸ್ ಪಡೆದ ಗಣ್ಯರು 7ರಿಂದ 10 ಗಂಟೆ ವರೆಗೆ ದರ್ಶನ ಪಡೆದರು. ಅತಿ ಗಣ್ಯರಿಗೆ ಪ್ರವಾಸಿ ಮಂದಿರದಿಂದ ನಿಯೋಜನೆಗೊಳಿಸಿಕೊಂಡಿರೋ ವಾಹನಗಳಲ್ಲಿ ಬೆಳಿಗ್ಗೆ ೧೦.೩೦ರಿಂದ ೧೨.೩೦ ರವರೆಗೆ ದರ್ಶನಕ್ಕೆ ಅವಕಾಶ ನೀಡಿದ್ದು ಅತಿ ಗಣ್ಯರೂ ಕೂಡ ಜಿಲ್ಲಾಡಳಿತದ ಲಕ್ಸುರಿ ಬಸ್ಗಳಲ್ಲೇ ಬಂದು ದರ್ಶನ ಪಡೆದರು. ಈ ವ್ಯವಸ್ಥೆಯನ್ನು ಯಾವುದೇ ಕಾರಣಕ್ಕೂ ಬದಲಾಯಿಸೋದಿಲ್ಲ ಸಾರ್ವಜನಿಕ ದರ್ಶನಕ್ಕೆ ಒತ್ತು ನೀಡೋದು ನಮ್ಮ ಉದ್ದೇಶ, ಕಾನೂನಿಗಿಂತ ಯಾರೂ ದೊಡ್ಡವರಲ್ಲ ದರ್ಶನಕ್ಕೆ ಬರೋ ಶಾಸಕರು, ಸಚಿವರು, ನ್ಯಾಯಾಧೀಶರು ನಿಗದಿತ ಸಮಯ ಗುರುತಿಸಿಕೊಂಡು ಒಂದು ಗಂಟೆ ಮುಂಚಿತವಾಗಿಯೇ ಆಗಮಿಸಬೇಕು ಇಲ್ಲವಾದರೆ ನಮಗೆ ಶಿಷ್ಟಾಚಾರ ನೆರವೇರಿಸಲು ಕಷ್ಟವಾಗುತ್ತದೆ ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದರು. ಇಂದು ಮಾಜಿ ಸಚಿವ ಎ.ಮಂಜು, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಬ್ರಹ್ಮಾಂಡ ಗುರೂಜಿ ಹಾಸನಾಂಬೆ ದರ್ಶನ ಪಡೆದರು.
ಇದನ್ನೂ ಓದಿ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಕ್ಕಳ ಮೃತ್ಯು
ಒಟ್ಟಾರೆ ವರ್ಷಕ್ಕೊಮ್ಮೆ ಮಾತ್ರ ದರ್ಶನದ ಭಾಗ್ಯ ಕರುಣಿಸೋ ಹಾಸನಾಂಬೆಯ ದರ್ಶನದ ಮೊದಲ ದಿನ ಸಂಪನ್ನಗೊಂಡಿದ್ದು ನಾಳೆ ವೀಕೆಂಡ್ ಆಗಿರೋದ್ರಿಂದ ಮತ್ತಷ್ಟು ಭಕ್ತರು ಹೆಚ್ಚುವ ನಿರೀಕ್ಷೆಯನ್ನ ಜಿಲ್ಲಾಡಳಿತ ಇಟ್ಟುಕೊಂಡಿದೆ.