Kannada News: ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕಾಲೇಜಿನಲ್ಲಿ ಜುಲೈ 22 ರಾತ್ರಿ 9ಗಂಟೆಯ ಸಮಯದಲ್ಲಿ ಯುವತಿಯೋರ್ವಳು ಕಾಪಾಡಿ ಕಾಪಾಡಿ ಎಂದು ಜೋರಾಗಿ ಕೂಗಿದ ಧ್ವನಿ ಬಂದಿದ್ದು, ರಾತ್ರಿ ಅಲ್ಲಿ ಅಪಾರ ಜನಸ್ತೋಮ ಸೇರಿದ ಘಟನೆ ಜರುಗಿದೆ.
'ಕಾಪಾಡಿ ಕಾಪಾಡಿ' ಕೂಗು ಕೇಳಿದ ಸ್ಥಳೀಯ ಯುವಕರು ಡಯಟ್ ಕಾಲೇಜಿನ ಒಳಗಡೆ ಹೋಗಿ ಪರಿಶೀಲನೆ ನಡೆಸಿದ್ದಾರೆ, ಅಲ್ಲಿ ಯಾರು ಕಂಡು ಬಂದಿಲ್ಲ. ನಂತರ ಪೋಲಿಸ್ ಠಾಣೆಗೆ ಮಾಹಿತಿಯನ್ನು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲಿಸರು ಮತ್ತು ಪತ್ರಕರ್ತರು ಡಯಟ್ ಕಾಲೇಜಿನ ಒಳಗೆ ಪ್ರವೇಶ ಮಾಡಿ ಪ್ರತಿಯೊಂದು ಕೊಠಡಿಯನ್ನು ಪರಿಶೀಲನೆ ಮಾಡಿದರೂ ಯಾರು ಸಿಕ್ಕಿಲ್ಲ.
ಇದನ್ನೂ ಓದಿ- ಉತ್ತರ ಕನ್ನಡ ಭೂಕುಸಿತ ಪ್ರದೇಶ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣ ಬೈರೈಗೌಡ: ₹800 ಕೋಟಿ ತುರ್ತು ಅನುದಾನ ಘೋಷಣೆ
ರಾತ್ರಿಯ ಸಮಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಒಳಗಡೆ ಕೆಲಸವನ್ನು ಮಾಡುತ್ತಿದ್ದರು. ಅವರನ್ನು ಪ್ರಶ್ನೆ ಮಾಡಿದಾಗ ಶಬ್ದ ಬಂದಿರುವದು ನಿಜ, ಅದು ಯುವಕನ ಶಬ್ದ. ಜೋರಾಗಿ ಕೂಗಿದಾಗ ನಾನು ಹೊರಗಡೆ ಬಂದು ಮೇಲೆ ಹೋಗಿ ನೋಡಿದಾಗ ಒಬ್ಬ ಯುವಕ ಓಡಿ ಹೋದ ಅಷ್ಟೇ ಯಾವ ಯುವತಿ ಇರಲಿಲ್ಲ ಎಂದು ಹೇಳಿದ್ದಾರೆ.
ಕಾಲೇಜಿನ ಹಿಂದುಗಡೆ ಅಲಂಪೂರ ಪೇಟೆ ಎಂಬ ವಾರ್ಡ್ ಇದ್ದು ಅಲ್ಲಿನ ನಿವಾಸಿಗಳನ್ನು ವಿಚಾರಿಸಿದಾಗ ಅಲ್ಲಿನ ಅಲ್ಲಿ ಯುವತಿ ಕಾಪಾಡಿ ಕಾಪಾಡಿ ಎಂದು ಜೋರಾಗಿ ಕೂಗಿದ್ದಾಳೆ. ಕರೆದಿದ್ದಾಳೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ಧಾರಾಕಾರ ಮಳೆಗೆ ದಿಢೀರ್ ಕುಸಿದ ಮನೆ :ಪದಾಡ ಸದೃಶ ರೀತಿಯಲ್ಲಿ ಬದುಕುಳಿದ ಯುವತಿ
ಕಾಲೇಜನ್ನು ಸಂಪೂರ್ಣ ಪರಿಶೀಲಿಸಿದರೂ ಯಾವ ಯುವತಿಯೂ ಕಂಡು ಬಂದಿಲ್ಲ ಹಾಗೂ ಕಾಪಾಡಿ ಕಾಪಾಡಿ ಎಂದು ಕೂಗಿದ್ದು ಯಾರು ಎಂಬ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ ಎಂದು ತಿಳಿದು ಬಂದಿದ್ದು, ಯುವತಿಯ ಕೂಗು ನಿಗೂಢವಾಗಿಯೇ ಉಳಿದಿದೆ.









