)
Agniveer Warrier Died: ಅಥಣಿ ತಾಲೂಕಿನ ಐಗಳಿ ಗ್ರಾಮದ ವೀರಯೋಧ ಕಿರಣರಾಜ್ ಕೇದಾರಿ ತಿಲಸಂಗ (23) ಅವರು ಪಂಜಾಬ್ನ ಪಟಿಯಾಲಾ ರೆಜೀಮೆಂಟ್ನಲ್ಲಿ ಅಗ್ನಿವೀರ ಸೇವೆ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾಗಿದ್ದಾರೆ. 15 ತಿಂಗಳ ಹಿಂದೆ ಸೇನೆ ಸೇರಿದ್ದ ಕಿರಣರಾಜ್ ತಮ್ಮ ಕರ್ತವ್ಯದಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮಂಗಳವಾರ ಕೊನೆಯುಸಿರೆಳೆದರು.
ಕಿರಣರಾಜ್ ಅವರ ಪಾರ್ಥಿವ ಶರೀರವು ಗುರುವಾರ ಮಧ್ಯಾಹ್ನ 1 ಗಂಟೆಗೆ ಅಥಣಿಗೆ ತಲುಪಿತು. ಪಟ್ಟಣದ ತಹಸೀಲ್ದಾರ ಕಚೇರಿ, ಮಾಜಿ ಸೈನಿಕರ ಸಂಘದ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪುಷ್ಪ ನಮನ ಸಲ್ಲಿಸಲಾಯಿತು. ತೆರೆದ ವಾಹನ ದಲ್ಲಿ ಪಾರ್ಥಿವ ಶರೀರ ಮುಖ್ಯ ರಸ್ತೆಯ ಮೂಲಕ ಸಾವಿರಾರು ಸಂಖ್ಯಾಯ ಜನರ ಮದ್ಯ ಮೆರವಣಿಗೆ ಮೂಲಕ ಸಾಗಿಸಲಾಯಿತು.
ಮೃತ ಯೋಧ ಕಿರಣರಾಜ್ ಅವರ ಸ್ವ-ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.ಯೋಧನ ಕಳೆದುಕೊಂಡ ಕುಟುಂಬ ವಷ್ಟೇ ಅಲ್ಲದೆ ನೆರೆದ ಸಾವಿರಾರು ಜನ ಕಂಬನಿ ಮಿಡಿದು ಕಿರಣರಾಜ್ ಅಮರ ರಹೇ ಎಂದು ಘೋಷಣೆ ಕೂಗಿ ಅಭಿಮಾನ ತೋರಿದರು.