)
ಬಾಗಲಕೋಟೆ: ಕೊಲ್ಕತ್ತಾದ ಐಐಎಂ-ಸಿ ಕ್ಯಾಂಪಸ್ನಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ಪರಮಾನಂದ ಟೋಪಣ್ಣವರ್ಗೆ ಜಾಮೀನು ಮಂಜೂರು ಆಗಿದೆ.
ಬಾಗಲಕೋಟೆ ಜಿಲ್ಲೆಯ ಲೋಕಾಪುರ ಮೂಲದ ಪರಮಾನಂದ ಟೋಪಣ್ಣವರ್ಗೆ ಬೇಲ್ ಸಿಕ್ಕಿದ್ದು, 50 ಸಾವಿರ ಬಾಂಡ್, ಪಾಸ್ ಪೋರ್ಟ್ ಸರೆಂಡರ್, ಅನುಮತಿ ಇಲ್ಲದೆ ನ್ಯಾಯಾಲಯ ದ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ ಎಂದು ಆರೋಪಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ. ದೂರುದಾರ ಯುವತಿಯಿಂದ ತನಿಖೆಗೆ ಅಸಹಕಾರ ಹಾಗೂ ಎರಡು ಬಾರಿಯೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಕೊಲ್ಕತ್ತಾದ ಅಲಿಪುರ ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಆರೋಪಿ ಪರಮಾನಂದ ಟೋಪಣ್ಣವರ್ಗೆ ಜಾಮೀನು ನೀಡಲಾಗಿದೆ. ಪರಮಾನಂದ್ ಪರ ಕರ್ನಾಟಕದ ವಕೀಲ ವರುಣ್ ಪಾಟೀಲ್ ಮತ್ತು ಮಹೇಂದ್ರ ,ಕನಿಷ್ಕ ವಾದ ಮಂಡಿಸಿದ್ದರು.
ಸಂತ್ರಸ್ಥೆ ವೈದ್ಯಕೀಯ ಪರೀಕ್ಷೆ ಹಾಜರಾಗಿಲ್ಲ. ಪರಮಾನಂದ್ ಜೈನ್ ವಿರುದ್ದ ಸುಳ್ಳು ದೂರು ದಾಖಲಿಸಲಾಗಿದೆ. ಸಂತ್ರಸ್ಥೆ ತಂದೆ ಸಹ ತನ್ನ ಮಗಳ ಮೇಲೆ ಆತ್ಯಾಚಾರ ಆಗಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಎಲ್ಲಾ ಮಾಹಿತಿ ಸಂಗ್ರಹಿಸಿ ಕೋರ್ಟ್ ನಲ್ಲಿ ಪರಮಾನಂದ್ ಜೈನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಘಟನೆ ಏನು?
ಕೊಲ್ಕತ್ತಾದ ಜೋಕಾದಲ್ಲಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎರಡೇ ವರ್ಷದ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ ಲೋಕಾಪುರ ಪಟ್ಟಣದ ನಿವಾಸಿ ಪರಮಾನಂದ ಟೋಪಣ್ಣನವರ್, ಯುವತಿಯೊಬ್ಬಳನ್ನು ಹಾಸ್ಟೆಲ್ಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪರಮಾನಂದನನ್ನು ಬಂಧಿಸಿದ್ದರು. ಆರೋಪಿಯ ವಿರುದ್ಧ ಯುವತಿ, ಹಾಸ್ಟೆಲ್ಗೆ ಕರೆಸಿಕೊಂಡು ಪಿಜ್ಜಾ ತಿನ್ನಿಸಿ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಮಾಡಿದ್ದಳು. ಹೀಗಾಗಿ ಜು.12 ರಂದು ಆರೋಪಿ ಪರಮಾನಂದನನ್ನ ಪೊಲೀಸರು ಬಂಧಿಸಿದ್ದರು. ಆದರೆ ಇದರ ನಡುವೆ ಅತ್ಯಾಚಾರ ಆರೋಪವನ್ನು ಯುವತಿ ಕುಟುಂಬಸ್ಥರು ತಳ್ಳಿಹಾಕಿದ್ದರು ಎನ್ನಲಾಗಿದೆ