ಬಾಗಲಕೋಟೆ:  ಕಲಬೆರಿಕೆ ಆಹಾರ ಸೇವಿಸಿ 56ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ತಾಲೂಕಿನ ಡೊಮನಾಳ ಗ್ರಾಮದಲ್ಲಿ ನಡೆದಿದೆ. 


COMMERCIAL BREAK
SCROLL TO CONTINUE READING

ಗ್ರಾಮದಲ್ಲಿ ಯಮನೂರಪ್ಪನ‌ ಉರುಸ ಅಂಗವಾಗಿ ಸಾಮೂಹಿಕ ಉಪಹಾರ (Mass breakfast) ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಮೂಹಿಕ ಉಪಹಾರ ಸೇವಿಸಿದ ಬಳಿಕ ಜನರಿಗೆ ವಾಂತಿ-ಬೇದಿ ಸಮಸ್ಯೆ ಕಾಣಿಸಿಕೊಂಡಿದ್ದು ಸುಮಾರು 56ಕ್ಕೂ ಹೆಚ್ಚು ಜನರು ಅಸ್ವಸ್ತರಾಗಿದ್ದಾರೆ ಎಂದು ವರದಿಯಾಗಿದೆ. 


ಇದನ್ನೂ ಓದಿ- Free Admission: ಉತ್ತರಹಳ್ಳಿ ಪಿಯು ಕಾಲೇಜಿನಲ್ಲಿ ತರಗತಿಗಳಿಗೆ ಉಚಿತ ಪ್ರವೇಶ


ಸಾಮೂಹಿಕ ಉಪಹಾರ ಕಾರ್ಯಕ್ರಮದಲ್ಲಿ ಉಪಹಾರ ಸೇವಿಸಿದ ಕೂಡಲೇ ಜನರಿಗೆ ವಾಂತಿ-ಬೇದಿ ಆರಂಭವಾಗಿದ್ದು 22 ಮಕ್ಕಳು (Children) ಹಾಗೂ 6 ಜನ ವಯಸ್ಕರನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ 20 ಜನರನ್ನು ಸುತಗುಂಡಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ- BMTC AC Bus Condition: ಬಿಳಿ ಆನೆ ಆದ ವೋಲ್ವೋ ಬಸ್: AC ವರ್ಕ್ ಆಗ್ತಿಲ್ಲ, ಜನ ಬಸ್ ಹತ್ತುತ್ತಿಲ್ಲ


ಐದು ಅಂಬ್ಯಲೆನ್ಸ್ ಹಾಗೂ ಎರಡು 108 ವಾಹನದ ಮೂಲಕ ಅಸ್ವಸ್ಥರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ DHO ಡಾ.ಜಯಶ್ರೀ ಎಮ್ಮಿ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.