ಕಾಲ್ತುಳಿತ ಪ್ರಕರಣ, ಚಿನ್ನಸ್ವಾಮಿಗೆ CID ಎಂಟ್ರಿ, ತನಿಖೆ ಚುರುಕು..! ಕೆಎಸ್‌ಸಿಎ ಸೆಕ್ರೆಟರಿ, ಖಜಾಂಚಿ ರಾಜೀನಾಮೆ..!

Bangalore Stampede : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದು ಕಡೇ ಇಬ್ಬರು ಕೆಎಸ್‌ಸಿಎ ಅಧಿಕಾರಿಗಳು ರಾಜೀನಾಮೆ ನೀಡಿದ್ದು, ಚಿನ್ನಸ್ವಾಮಿಯಲ್ಲಿ ಸಭೆ ಕೂಡ ನಡೆಸಲಾಗಿದೆ.

Written by - Krishna N K | Last Updated : Jun 7, 2025, 09:07 PM IST
    • ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
    • ಇಬ್ಬರು ಕೆಎಸ್‌ಸಿಎ ಅಧಿಕಾರಿಗಳು ರಾಜೀನಾಮೆ ನೀಡಿದ್ದು, ಚಿನ್ನಸ್ವಾಮಿಯಲ್ಲಿ ಸಭೆ ಕೂಡ ನಡೆಸಲಾಗಿದೆ.
    • ದುರಂತದ ಬಗ್ಗೆ ನೈತಿಕ ಹೊಣೆ ಹೊತ್ತ ಕೆಎಸ್‌ಸಿಎ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.
ಕಾಲ್ತುಳಿತ ಪ್ರಕರಣ, ಚಿನ್ನಸ್ವಾಮಿಗೆ CID ಎಂಟ್ರಿ, ತನಿಖೆ ಚುರುಕು..! ಕೆಎಸ್‌ಸಿಎ ಸೆಕ್ರೆಟರಿ, ಖಜಾಂಚಿ ರಾಜೀನಾಮೆ..!

KSCA officials resign : ಹನ್ನೊಂದು ಸಾವುಗಳ ದುರಂತದ ಬಗ್ಗೆ ನೈತಿಕ ಹೊಣೆ ಹೊತ್ತ ಕೆಎಸ್‌ಸಿಎ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕಾರ್ಯದರ್ಶಿ ಶಂಕರ್, ಖಜಾಂಚಿ ಜೈರಾಮ್ ರಿಸೈನ್ ಮಾಡಿದ್ದಾರೆ. ಇದರ ಹೊರತಾಗಿ ಇವತ್ತು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಕಾಲ್ತುಳಿತಕ್ಕೆ ಕಾರಣಗಳೇನೂ, ತಾವು ಮಾಡಿಕೊಂಡ ಯಡವಟ್ಟೇನೂ ಎಂಬ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರಕರಣದಿಂದ ಹೇಗೆ ಬಚಾವ್ ಆಗಬೇಕು ಎಂಬ ಹಿನ್ನೆಲೆ ಚರ್ಚೆ ನಡೆದಿದ್ದು, ಕೆಎಸ್ ಸಿಎಯ ಅಧಿಕಾರಿಗಳ ನಡೆ ಇನ್ನೂ ನಿಗೂಢವಾಗಿದೆ.
 
ಇನ್ನೂ ಘೋರ ದುರಂತ 11 (RCB Stampede) ಜನರ ಸಾವು. ಇದೀಗ ಅಸಲಿ ಕಾರಣ ಹುಡುಕಲು ಹೊರಟ ಸಿಐಡಿ ತಂಡ ಸ್ಪಾಟ್ ಮಹಜರು ನಡೆಸಿದೆ. ಆರ್‌ಸಿಬಿ ತಂಡದ ಸೆಲೆಬ್ರೆಷನ್ ವೇಳೆ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ಘಟನೆ ಸಂಬಂಧ ನಿನ್ನೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾಗಿದ್ದ ದೂರು. ಈ ತನಿಖೆ ನಡೆಸುವಂತೆ ಆದೇಶಿಸಿ ಸಿಐಡಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶಿತ್ತು. ಇದರ ಬೆನ್ನಲ್ಲೇ ಎಸ್ ಪಿ ಶುಭನ್ವೀತಾ ನೇತೃತ್ವದಲ್ಲಿ ಗೌತಮ್, ಪುರುಷೋತ್ತಮ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ರಚನೆಯಾಗಿದ್ದು ಇಂದಿನಿಂದಲೇ ಅಧಿಕೃತವಾಗಿ ತನಿಖೆ ನಡೆಸಲು ಶುರು ಮಾಡಿದ್ರು. ನಾಲ್ಕು ಜನ ಅಧಿಕಾರಿಗಳು ಎರಡು ತಂಡಗಳಾಗಿ ಬಂದು‌ ಚಿನ್ನಸ್ವಾಮಿ ಸ್ಟೇಡಿಯಂನ ಕೆಎಸ್ ಸಿಎ ಆಡಳಿತ ಕಚೇರಿಗೆ ತೆರಳಿ ಮಾಹಿತಿ ಕಲೆಹಾಕಿ ಹೊರಟರು.

Add Zee News as a Preferred Source

ಇದನ್ನೂ ಓದಿ:ನಿಮ್ಮ ಮನೆ ಸುತ್ತ ಮುತ್ತ ಇಂತಹ ಹಾವುಗಳಿದ್ದರೆ ಎಚ್ಚರ...! ಅಪ್ಪಿ ತಪ್ಪಿ ಕಚ್ಚಿದ್ರೆ ಯಾವ ಮನೆ ಮದ್ದು, ಔಷಧಿ ಏನೂ ಮಾಡಲ್ಲ...

ಈಗಾಗಲೇ 14 ದಿನಗಳ ಕಾಲ ನ್ಯಾಯಾಂಗ ಬಂದನದಲ್ಲಿರುವ ನಾಲ್ವರು ಆರೋಪಿಗಳನ್ನ ಸೋಮವಾರ ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಸಿಐಡಿ ಅಧಿಕಾರಿಗಳು. ಅಲ್ಲದೆ ನೂಕು ‌ನುಗ್ಗಲು ಉಂಟಾದ ಸ್ಟೇಡಿಯಂ ನ ಗೇಟ್ ನಂಬರ್ 7.16,18 19, 21 ರ ಬಳಿ ಕರೆದುಕೊಂಡು ಹೋಗಿ ಸ್ಪಾಟ್ ಮಹಜರು ಮಾಡಿ ಮಾಹಿತಿ ಕಲೆಹಾಕಲಿದ್ದಾರೆ. ಕಾಲ್ತುಳಿತಕ್ಕೆ‌ ಕಾರಣವಾದ ಸಾವಿನ ಪೋಸ್ಟ್ ಮಾಡಿದ್ದು ಯಾರು ಅನ್ನೋದರ ಬಗ್ಗೆ ಕೂಡ ಆರ್‌ಸಿಬಿ (RCB) ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯನ್ನು (RCB franchise official arrested) ವಿಚಾರಣೆ ನಡೆಸುತ್ತಾರೆ. ಪೋಸ್ಟ್ ಮಾಡಿದ್ದು ಯಾರು, ಯಾರ ಸೂಚನೆ ಮೇರೆಗೆ ಹಾಕಲಾಯಿತು. ಕಾರ್ಯಕ್ರಮದ ಬಗ್ಗೆ ಮೊದಲ ಪ್ಲಾನ್ ಆಗಿತ್ತು ಅನ್ನೋದ ಕುರಿತು ತನಿಖೆ ನಡೆಸುತ್ತಾರೆ.

ಇನ್ನೂ ಡಿಎನ್‌ಎ (DNA) ಇವೆಂಟ್ ಮ್ಯಾನೇಜ್ಮೆಂಟ್ ಹಾಗೂ‌ ಕೆಎಸ್ ಸಿಎ ಅಧಿಕಾರಿಗಳ ಪಾತ್ರದ ಕುರಿತು ಕೂಡ ತನಿಖೆ ಮುಂದುವರೆಸಿಲಿದ್ದಾರೆ. ಈಗಾಗಲೇ ಕೆಸ್‌ಸಿಎ ಅಧಿಕಾರಿಗಳಿಗೆ ನೋಟೀಸ್ ‌ನೀಡಿ ವಿಚಾರಣೆಗೆ ಹಾಜರು ಆಗುವಂತೆ ಸೂಚನೆ ಕೊಡುತ್ತಾರೆ.ಈಗಾಗಲೇ ಈ‌ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಹೇಳಿರುವ ಹೈ ಕೋರ್ಟ್ ಬೆಂಗಳೂರು ಬಿಟ್ಟು ತೆರಳದಂತೆ ಕೂಡ ಷರತ್ತು ವಿಧಿಸಿದೆ.

ಇದನ್ನೂ ಓದಿ:ದಿನದ ಈ ಹೊತ್ತಿನಲ್ಲಿ ಊಟ ಮಾಡುವ ಮೂಲಕ 31ಕೆಜಿ ತೂಕ ಇಳಿಸಿಕೊಂಡ ಯುವತಿ! ನೀವೂ ಫಾಲೋ ಮಾಡಿ ರಿಸಲ್ಟ್ ಪಕ್ಕಾ..
 
ಈ ದುರಂತದ ಹಿಂದೆ ಆರ್‌ಸಿಬಿ ಯ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಪಾತ್ರ ದೊಡ್ಡ ಮಟ್ಟದಲ್ಲಿ ಕಂಡು ಬರುತ್ತಿದೆ. ಯಾಕಂದ್ರೆ, ಕೇವಲ ಮಾರ್ಕೆಟಿಂಗ್ ಹೆಡ್ ಮಾತ್ರ ಆಗಿರಲಿಲ್ಲ ಬದಲಾಗಿ ತಂಡದ ಪ್ರತಿಯೊಂದು ಪ್ಲಾನಿಂಗ್, ಎಕ್ಸಿಕ್ಯೂಷನ್ ನೋಡಿಕೊಳ್ಳುತ್ತಿದ್ದನಂತೆ, ಪ್ಲೆಯರ್ಸ್ ಸೆಲೆಕ್ಷನ್, ಹಾಗೂ ಆಟಗಾರರ ಕುಟುಂಬದ ಜೊತೆ ಕೂಡ ಸಕ್ರಿಯವಾಗಿದ್ದನಂತೆ, ಬರ್ತಡೆ ಪಾರ್ಟಿ ಮಾಡೋ ಮೂಲಕ ಬಾಲಿವುಡ್ ಸೆಲೆಬ್ರಿಟಿ ಗಳಿಗೂ ಕೂಡ ಆಪ್ತನಾಗಿದ್ದನಂತೆ. 

ಸದ್ಯ ಆರ್ ಸಿಬಿ ವಿಕ್ಟರಿ ಪೆರೆಡ್ ಕೂಡ ಈತನದ್ದೆ ಎನ್ನಲಾಗ್ತಿದೆ. ಪ್ರೀ ಟಿಕೆಟ್ ಘೋಷಣೆ ಮಾಡಿದ್ದು‌ ಕೂಡ ಇವನ್ನದ್ದೇ ಪ್ಲಾನ್ ಅಂತೆ ಇದರ ಪ್ರತಿಫಲ ವಾಗಿಯೇ 11 ಜನರ ಸಾವಗಿದೆ ಎನ್ನಲಾಗುತ್ತಿದೆ. ಮತ್ತೊಂದು ‌ಕಡೆ ಸರ್ಕಾರ ಕೂಡ ಮ್ಯಾಜಿಸ್ಟ್ರೇಟ್ ನೇತ್ರತ್ವದಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ‌ನೀಡುವಂತೆ ಸೂಚಿಸಿದೆ. ಈ‌ ವರದಿಯಲ್ಲಿ ಯಾವೆಲ್ಲ ಅಂಶಗಳನ್ನ ಸೇರಿಸಲಾಗುತ್ತದೆ ಅನ್ನೋ ಕುತೂಹಲ ಹೆಚ್ಚಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News