Agriculture department corruption : ಹೌದು ವರ್ಗಾವಣೆ ದಂಧೆ, ಶಾಸಕರ ಅಸಮಾಧಾನ ಪತ್ರ, ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಆರೋಪಗಳ ಸುಳಿಯಲ್ಲಿ ಗ್ಯಾರಂಟಿ ಸರ್ಕಾರ ಸಿಲುಕಿಕೊಂಡಿದೆ. ಇದರ ಬೆನ್ನಲ್ಲೇ ಕೃಷಿ ಸಚಿವರ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದಿಂದ ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ. ಲೆಟರ್ ಸತ್ಯಾಸತ್ಯತೆ ತಿಳಿಯಲು ಸಿಐಡಿ ತನಿಖೆಗೆ ಸಿಎಂ ಆದೇಶ ನೀಡಿದ್ರೂ, ಡ್ಯಾಮೇಜ್ ಕಂಟ್ರೋಲ್ ಆಗಿಲ್ಲ. ಇದನ್ನೇ ದಳ ಹಾಗೂ ಕಮಲ ಪಡೆ ಬ್ರಹ್ಮಾಸ್ತ್ರ ಮಾಡಿಕೊಂಡು, ಮುಗಿ ಬೀಳ್ತಿವೆ.  


COMMERCIAL BREAK
SCROLL TO CONTINUE READING

ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳಿಂದ ತಲಾ 6 ರಿಂದ 7 ಲಕ್ಷ ಹಣ ಕೊಡಬೇಕೆಂದು ಸಚಿವರು ಡಿಮ್ಯಾಂಡ್ ಮಾಡ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿ, ರಾಜ್ಯಪಾಲರಿಗೆ ದೂರು ನೀಡಲಾಗಿತ್ತು. ದೂರಿನ ಪರಿಶೀಲನೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಸೂಚನೆ ನೀಡಿದ್ರು. ಈ ಬೆನ್ನಲ್ಲೇ ಕೃಷಿ ಸಚಿವ ಚೆಲುವರಾಯಸ್ವಾಮಿ ರಾಜಭವನಕ್ಕೆ ಭೇಟಿ ನೀಡಿ ಗವರ್ನರ್ ಜೊತೆ ಮಾತುಕತೆ ನಡೆಸಿದ್ರು. ತಮ್ಮ ವಿರುದ್ದ ಷಡ್ಯಂತ್ರ ಮಾಡಿದ್ದಾರೆಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ರು..


ಇದನ್ನೂ ಓದಿ-ಸುಲಿಗೆ ಮನಸ್ಥಿತಿಗೂ ಸೂಕ್ತ ಚಿಕಿತ್ಸೆ ಬೇಡವೇ?: ಸಿದ್ದರಾಮಯ್ಯ ವಿರುದ್ಧ ಎಚ್‍ಡಿಕೆ ಕಿಡಿ


ಇನ್ನು ಗವರ್ನರ್ ಭೇಟಿ ಬಳಿಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ಅಂಡ್ ಟೀಂ ತೀವ್ರ ವಾಗ್ದಾಳಿ ನಡೆಸಿದ್ರು. ಜನತಾದಳದವರೇ ಇದನ್ನ ಕ್ರಿಯೇಟ್ ಮಾಡಿದ್ದಾರೆ. ಎರಡು ಬಾರಿ ಸಿಎಂ ಆದವರು ಇಂಥ ಕೆಳಮಟ್ಟಕ್ಕೆ ಇಳಿಯೋದು ಸಂಸ್ಕಾರ ಅಲ್ಲ.. ಇದೆಲ್ಲಾ ಜಾಸ್ತಿ ದಿನ ನಡೆಯಲ್ಲ. ಅವ್ರ ನಡವಳಿಕೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ರೆ ನಮ್ಮ‌ ಕೆಲಸ ನಾವು ಮಾಡಬೇಕಾಗುತ್ತೆ ಎಂದು ಹೆಚ್ ಡಿಕೆ ವಿರುದ್ಧ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ರು..


ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ದ ಗುತ್ತಿಗೆದಾರರು ಹಾಕಿದ್ದ ಬಾಂಬ್, ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಬೆಂಗಳೂರು ಅಭಿವೃದ್ದಿ ಸಚಿವರು ಬಾಕಿ ಬಿಲ್ ರಿಲೀಸ್ ಮಾಡಲು  15% ಕಮಿಷನ್ ಕೇಳ್ತಿದ್ದಾರೆ. ತಾವು ಮಧ್ಯಸ್ಥಿಕೆ ವಹಿಸಿ ಹಣ ರಿಲೀಸ್ ಮಾಡಿಸಿಕೊಡಿ ಎಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಯಾರು ಯಾರನ್ನ ಭೇಟಿ ಮಾಡ್ತಿದ್ದಾರೆ.. ಎಲ್ಲಾ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ..


ಒಟ್ಟಿನಲ್ಲಿ ಒಂದಾದ ಮೇಲೊಂದು ಭ್ರಷ್ಟಾಚಾರ ಆರೋಪಗಳು ಕೇಳಿ ಬರ್ತಿರೋದ್ರಿಂದ, ಸಿಎಂಗೂ  ಟೆನ್ಷನ್ ಆಗಿಬಿಟ್ಟಿದೆ. ನಾಳೆ ಕ್ಯಾಬಿನೆಟ್ ಮೀಟಿಂಗ್ ಇದ್ದು, ಸಚಿವರಿಗೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಪಾಠ ಮಾಡಲಿದ್ದಾರೆ.. ಸದ್ಯ ಲೆಟರ್ ಕೇಸ್ ಗಳ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ..


ಇದನ್ನೂ ಓದಿ-ಆಡಳಿತದಲ್ಲಿ ಕನ್ನಡ ಜಾರಿಗೊಳಿಸುವ ಪ್ರಯತ್ನಕ್ಕೆ ವೇಗ: ಶಿವರಾಜ್ ತಂಗಡಗಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.