ಅಕ್ಷರ ಯೋಗ ಸಂಸ್ಥೆಯಿಂದ ಧನುರಾಸನದಲ್ಲಿ ಗಿನ್ನೆಸ್ ವಿಶ್ವದಾಖಲೆ

 ರಾಜ್ಯದ ಪ್ರಮುಖ ಯೋಗ ಕಲಿಕಾ ಹಾಗೂ ಸಂಶೋಧನಾ ಕೇಂದ್ರವಾಗಿರುವ “ಅಕ್ಷರ ಯೋಗ” ಸಂಸ್ಥಾಪಕರಾದ ಹಿಮಾಲಯನ್‌ ಸಿದ್ದರಾಗಿರುವ ಅಕ್ಷರ್‌ ಅವರ ಮಾರ್ಗದರ್ಶನದಲ್ಲಿ ಇಂದು ಗಿನ್ನಿಸ್‌ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.

Written by - Zee Kannada News Desk | Last Updated : Aug 27, 2022, 06:58 PM IST
  • ಈ ಸಾಧನೆಯಲ್ಲಿ ಭಾಗವಹಿಸಿದ್ದವರು ವಿವಿಧ ಹಿನ್ನೆಲೆಯುಳ್ಳ ಯೋಗ ಸಾಧಕರಾಗಿರುತ್ತಾರೆ.
  • ರಾಜ್ಯದ ಪ್ರಮುಖ ಯೋಗ ಕಲಿಕಾ ಹಾಗೂ ಸಂಶೋಧನಾ ಕೇಂದ್ರವಾಗಿರುವ “ಅಕ್ಷರ ಯೋಗ” ಸಂಸ್ಥಾಪಕರಾದ ಹಿಮಾಲಯನ್‌ ಸಿದ್ದರಾಗಿರುವ ಅಕ್ಷರ್‌ ಅವರ ಮಾರ್ಗದರ್ಶನದಲ್ಲಿ ಇಂದು ಗಿನ್ನಿಸ್‌ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.
ಅಕ್ಷರ ಯೋಗ ಸಂಸ್ಥೆಯಿಂದ ಧನುರಾಸನದಲ್ಲಿ ಗಿನ್ನೆಸ್ ವಿಶ್ವದಾಖಲೆ title=

ಬೆಂಗಳೂರು: ರಾಜ್ಯದ ಪ್ರಮುಖ ಯೋಗ ಕಲಿಕಾ ಹಾಗೂ ಸಂಶೋಧನಾ ಕೇಂದ್ರವಾಗಿರುವ “ಅಕ್ಷರ ಯೋಗ” ಸಂಸ್ಥಾಪಕರಾದ ಹಿಮಾಲಯನ್‌ ಸಿದ್ದರಾಗಿರುವ ಅಕ್ಷರ್‌ ಅವರ ಮಾರ್ಗದರ್ಶನದಲ್ಲಿ ಇಂದು ಗಿನ್ನಿಸ್‌ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ.

ಪಡುಕೋಣೆ-ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿರುವ ಅಕ್ಷರ ಯೋಗ ಆರ್ ಮತ್ತು ಡಿ ಸೆಂಟರ್‌ನಲ್ಲಿ ಇಂದು 285 ಜನ ಯೋಗ ಪಟುಗಳು 2 ನಿಮಿಷಗಳ ಕಾಲ ಧನುರಾಸನ ಅಥವಾ ಬೋ ಪೋಸ್‌ ಎಂದು ಕರೆಯಲ್ಪಡುವ ಭಂಗಿಯನ್ನು ಪ್ರದರ್ಶಿಸುವ ಮೂಲಕ ಗಿನ್ನೀಸ್‌ ದಾಖಲೆಯನ್ನು ನಿರ್ಮಿಸಿದ್ದಾರೆ. 

ಇದನ್ನೂ ಓದಿ : ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!

Live TV

ಅಕ್ಷರ ಯೋಗ” ಸಂಸ್ಥಾಪಕರಾದ ಹಿಮಾಲಯನ್‌ ಸಿದ್ದರಾಗಿರುವ ಅಕ್ಷರ್‌ ಅವರು ಈ ಗಿನ್ನಿಸ್‌ ದಾಖಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ದಾಖಲೆಯನ್ನು ಸಾಧಿಸುವ ಪ್ರಯತ್ನದ ಉದ್ದೇಶ ಯೋಗದ ಶಕ್ತಿಯ ಬಗ್ಗೆ ಜಗತ್ತಿಗೆ ಸಂದೇಶ ಸಾರುವುದು. ಯೋಗಾಭ್ಯಾಸದ ಮೂಲಕ ನಿಮ್ಮ ಜೀವನವನ್ನು ಹೇಗೆ ಕಾಪಾಡಿಕೊಳ್ಳಬಹುದು ಹಾಗೂ ಸುಂದರವಾಗಿಸಿಕೊಳ್ಳಬಹುದು ಎಂಬುದು ಈ ಪ್ರದರ್ಶನದ ಉದ್ದೇಶವಾಗಿದೆ.ಒತ್ತಡದ ನಡುವೆ ಜೀವನ ಸಮತೋಲನ ಸಾಧಿಸಲು ನಮಗೆ ಅತ್ಯುತ್ತಮ ಆರೋಗ್ಯ ಅಗತ್ಯ ಯೋಗ ಎನ್ನುವುದನ್ನ ತಿಳಿಸುವುದು ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

ಈ ಸಾಧನೆಯಲ್ಲಿ ಭಾಗವಹಿಸಿದ್ದವರು ವಿವಿಧ ಹಿನ್ನೆಲೆಯುಳ್ಳ ಯೋಗ ಸಾಧಕರಾಗಿರುತ್ತಾರೆ. ಕೆಲವರು ಕಾರ್ಪೋರೇಟ್ ವಲಯಗಳಲ್ಲಿ ಕೆಲಸ ಮಾಡುವ ವೃತ್ತಿಪರರಾಗಿದ್ದರೆ ಇತರರು ವೈವಿಧ್ಯಮಯ ಹಿನ್ನೆಲೆಯ ಗೃಹಿಣಿಯರು. ದೇಶಾದ್ಯಂತ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಈ ದಾಖಲೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ-Diabetes Remedies: ಮಧುಮೇಹಕ್ಕೆ ಖಚಿತ ಪರಿಹಾರ, ಪ್ರತಿದಿನ ಈ ಪದಾರ್ಥ ಸೇವಿಸಿದ್ರೆ ಸಾಕು

ಹಿಮಾಲಯ ಯೋಗ ಆಶ್ರಮ, ವಿಶ್ವ ಯೋಗ ಸಂಸ್ಥೆ, ಇಂಟರ್‌ನ್ಯಾಷನಲ್‌ ಸಿದ್ಧ ಫೌಂಡೇಶನ್, ಯೂ ಯೋಗ್ ಮತ್ತು ಇತರ ಯೋಗ ಸಂಸ್ಥೆಯವರ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News