ಬೆಂಗಳೂರು : ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ರಾಜ್ಯಕ್ಕೆ ರಾಜಕೀಯ ಲೆಕ್ಕಾಚಾರ ಹಾಕಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಹಾಗೂ ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮ ಭೂಷಣ ನೀಡಲಾಗಿದೆ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.


COMMERCIAL BREAK
SCROLL TO CONTINUE READING

ಎಸ್ ಎಂ ಕೃಷ್ಣ ಅವರಿಗೆ ಪದ್ಮ ವಿಭೂಷಣ ಸನ್ಮಾನ- ಒಕ್ಕಲಿಗ ಮನ ಓಲೈಕೆ?:
ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ನಲ್ಲಿ ಇದ್ದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, 2018 ರ ನಂತರ ಬಿಜೆಪಿಗೆ ಸೇರ್ಪಡೆಗೊಂಡರು. ಕೃಷ್ಣ ಅವರು ರಾಜಕೀಯ ಜೀವನದಲ್ಲಿ ಶಾಸಕ ಸ್ಥಾನ ದಿಂದ ಪ್ರಾರಂಭ ಮಾಡಿ ಕೊನೆಗೆ ಭಾರತ ಸರ್ಕಾರದ ವಿದೇಶಾಂಗ ಸಚಿವರಾಗಿ ಕೂಡ ಅಧಿಕಾರ ಅನುಭವಿಸಿದ್ದರು. ಇವೆಲ್ಲವೂ ಕಾಂಗ್ರೆಸ್ ಪಕ್ಷದಲ್ಲಿ ಇವರು ಇದ್ದಾಗ ಸಾಧ್ಯವಾಯಿತು, ಈ ಮಧ್ಯ 2004- 2008 ರಲ್ಲಿ ರಾಜ್ಯಪಾಲರಾಗಿ ಕೂಡ ಸೇವೆ ಸಲ್ಲಿಸಿದರು.


ಅಮೇರಿಕದಲ್ಲಿ ವ್ಯಾಸಂಗ ಮಾಡಿರುವ ಎಸ್.ಎಂ. ಕೃಷ್ಣ ಅವರು, ರಾಜ್ಯ ರಾಜಕಾರಣದಲ್ಲಿ 1962 ರಿಂದ ಇತ್ತೀಚಿನವರೆಗೆ ಸಕ್ರಿಯರಾಗಿದ್ದರು, ಕೆಲ ವಾರಗಳ ಹಿಂದೆ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದರು. ಆದರೆ ಮಂಡ್ಯ ಜಿಲ್ಲೆಯಿಂದ ಇವರ ರಾಜಕಾರಣ ಪ್ರಾರಂಭ ಆಗಿದ್ದು, ಮಾಜಿ ಪ್ರಧಾನಿ ದೇವೇಗೌಡರನ್ನ ಬಿಟ್ಟರೆ ಒಕ್ಕಲಿಗ ಸಮುದಾಯದ ಅತ್ಯಂತ ಹಿರಿಯ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ.ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಗೆಲುವು ಸಾಧಿಸಲು ಶತಾಯಗತಾಯ ಯತ್ನಿಸುತ್ತಿದ್ದು, ಈಗಾಗಲೇ ಟಾರ್ಗೆಟ್ ಇಟ್ಟುಕೊಂಡು ಕಾರ್ಯಕ್ರಮಗಳನ್ನು ನಡೆಸುತ್ತಿದೆ.


ಈಗ ಭಾರತ ಸರ್ಕಾರ ಎಸ್ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ಮೂಲಕ ಮುಂಬರುವ ರಾಜ್ಯ ಚುನಾವಣೆಯಲ್ಲಿ ಸೇರಿದಂತೆ ಬಿಜೆಪಿಗೆ ಒಕ್ಕಲಿಗ ಮನಗಳು -ಮತ ಬ್ಯಾಂಕ್ ಆಗಬಹುದು ಎಂಬ ಲೆಕ್ಕಾಚಾರದ ವ್ಯಾಖ್ಯಾನ ತಳ್ಳಿ ಹಾಕುವಂತಿಲ್ಲ.


ಇದನ್ನೂ ಓದಿ- Padma Awards 2023 : ಮಾಜಿ ಸಿಎಂ ಎಸ್‌ಎಂ ಕೃಷ್ಣಗೆ ಪದ್ಮ ವಿಭೂಷಣ ; ಎಸ್‌ಎಲ್ ಭೈರಪ್ಪ, ಸುಧಾಮೂರ್ತಿಗೆ ಪದ್ಮ ಭೂಷಣ!


ಸಾಹಿತಿ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮ ಭೂಷಣ; ಬಲಪಂಥೀಯ ವಿಚಾರಕ್ಕೆ ಅಭಿನಂದನೆಗಳು!
ಸಾಹಿತಿ ಎಸ್ ಎಲ್ ಭೈರಪ್ಪ ಅವರ ಕೃತಿಗಳು 70ರ ದಶಕದಿಂದಲೂ ಅವರ ಕೃತಿಗಳಿಂದ ಲಕ್ಷಾಂತರ ಓದುಗರರನ್ನ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಸಾಹಿತಿ ಎಸ್ ಎಲ್ ಭೈರಪ್ಪ ಅವರು ಹಿಂದುತ್ವ ಸಂಸ್ಕೃತಿಯನ್ನು ಹೊಗಳಿ ಬರೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.


ಇದಲ್ಲದೆ ಭೈರಪ್ಪ ಅವರ ಕೃತಿಗಳ ಜೊತೆ ಅವರ ಬಲಪಂಥೀಯ ಚಿಂತನೆಗಳು ಅನೇಕ ರಾಜಕಾರಣಿಗಳಿಗೆ ಪ್ರೇರಣೆಯನ್ನು ನೀಡಿವೆ. ಹಲವು ವರ್ಷಗಳಿಂದ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಎಂಬ ಬೇಡಿಕೆಯು ಇತ್ತು, ಈ ಹಿನ್ನಲೆಯಲ್ಲಿ ಇವರ ಸಾಹಿತ್ಯ ಕೊಡುಗೆಗೆ ಭಾರತ ಸರ್ಕಾರ ಪದ್ಮ ಭೂಷಣ ನೀಡಿದೆ. ಜೊತೆಗೆ ಇವರ ಬಲಪಂಥೀಯ ಚಿಂತನೆಗಳಿಗೆ ಬಿಜೆಪಿ ಅಭಿನಂದನೆಗಳು ಸಲ್ಲಿಸಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿವೆ.


ಇದನ್ನು ಹೊರತುಪಡಿಸಿಯೂ ಈ ಗಣ್ಯರು ಸಮಾಜಕ್ಕೆ ಮಾಡಿದ ಸೇವೆಗಳು ಹಾಗೂ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳನ್ನ ಅಲ್ಲಗೆಳೆಯುವಂತಿಲ್ಲ. ಉಭಯ ನಾಯಕರು ಅವರ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಇವರಿಂದ ಅನೇಕ ಯುವಕರು ಪ್ರೇರೇಪಣೆಗೊಂಡು ಸಾಧನೆ ಮಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ.


ಇದನ್ನೂ ಓದಿ- Padma Sri-Padma Vibhushana Awardee: ಕರ್ನಾಟಕದ ರಾಣಿ ಮಾಚಯ್ಯ, ಮುನಿವೆಂಕಟಪ್ಪಗೆ ಪದ್ಮಶ್ರೀ: ಎಸ್.ಎಂ ಕೃಷ್ಣರಿಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ


ಸಾಮಾನ್ಯವಾಗಿ ಕೇಂದ್ರದಲ್ಲಿರುವ ಯಾವುದೇ ಪಕ್ಷ ಆಡಳಿತದಲ್ಲಿದ್ದಾಗ ಪದ್ಮ ಪ್ರಶಸ್ತಿ ಘೋಷಣೆ ಮಾಡಿದಾಗ ಅವರವರ ನೇರಕ್ಕೆ ವ್ಯಾಖ್ಯಾನಗಳನ್ನ-ಅಭಿಪ್ರಾಯಗಳನ್ನ ನೀಡುತ್ತಾರೆ. ಅದೇ ರೀತಿ ಈಗಲೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹಾಗೂ ಎಸ್ ಎಲ್ ಭೈರಪ್ಪ ಅವರಿಗೆ ಪದ್ಮ ಪ್ರಶಸ್ತಿ ಘೋಷಣೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.